• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

|

ಚೆನ್ನೈ, ಏಪ್ರಿಲ್ 4: ಚೀನಾ ಮೂಲದ ವಿಡಿಯೋ ಆಪ್ 'ಟಿಕ್ ಟೊಕ್' ಅಶ್ಲೀಲ ಚಿತ್ರಗಳಿಗೆ ಉತ್ತೇಜನ ನೀಡುತ್ತಿದ್ದು, ಅದನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಲ್ಲದೆ, ಈ ಆಪ್ ಬಳಸಿ ತಯಾರಿಸಿದ ವಿಡಿಯೋಗಳನ್ನು ಪ್ರಸಾರ ಮಾಡದಂತೆಯೂ ಹೈಕೋರ್ಟ್ ಮಾಧ್ಯಮಗಳಿಗೆ ನಿರ್ದೇಶಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಟಿಕ್ ಟೊಕ್ ಆಪ್‌ನಲ್ಲಿ ಬಳಕೆದಾರರು ಅಲ್ಪ ಅವಧಿಯ ವಿಡಿಯೋಗಳನ್ನು ಸೃಷ್ಟಿಸಿ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಭಾರತದಲ್ಲಿಯೇ ತಿಂಗಳಿಗೆ 54 ಮಿಲಿಯನ್ ಸಕ್ರಿಯ ಬಳಕೆದಾರರು ಇದ್ದಾರೆ.

ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?

ಟಿಕ್ ಟೊಕ್ ಬಳಸುವ ಮಕ್ಕಳು ಲೈಂಗಿಕತೆಗೆ ಸಂಬಂಧಿಸಿದ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಮಾನಸಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ನಡೆಸಿತ್ತು.

ಮದುರೈ ಮೂಲದ ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಮುತ್ತು ಕುಮಾರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಅವರು ಲೈಂಗಿಕ ಚಿತ್ರಗಳು, ಸಾಂಸ್ಕೃತಿಕ ಅಧಃಪತನ, ಮಕ್ಕಳ ದುರ್ಬಳಕೆ, ಆತ್ಮಹತ್ಯೆ ಮುಂತಾದವುಗಳನ್ನು ಉಲ್ಲೇಖಿಸಿ ಟಿಕ್‌ ಟೊಕ್ ನಿಷೇಧಕ್ಕೆ ಸೂಚನೆ ನೀಡುವಂತೆ ಮನವಿ ಮಾಡಿದ್ದರು.

ಒಂದೇ ದಿನ ಎರಡು ಜೀವ ತೆಗೆದ ಟಿಕ್‌ಟೋಕ್ ವಿಡಿಯೋ ಹುಚ್ಚು!

ಮಕ್ಕಳು ಅಂತರ್ಜಾಲ ಬಲಿಪಶುಗಳಾಗುವುದನ್ನು ತಪ್ಪಿಸಲು ಅಮೆರಿಕದಲ್ಲಿ ಇರುವಂತೆ ಮಕ್ಕಳ ಅಂತರ್ಜಾಲ ಖಾಸಗಿತನ ರಕ್ಷಣಾ ಕಾಯ್ದೆಯಂತಹ ನಿಯಂತ್ರಣಗಳನ್ನು ಜಾರಿ ಮಾಡುತ್ತದೆಯೇ ಎಂಬುದಕ್ಕೆ ಏಪ್ರಿಲ್ 16ರ ಒಳಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಎಸ್ ಎಸ್ ಸುಂದರ್ ಅವರನ್ನು ಒಳಗೊಂಡ ನ್ಯಾಯಪೀಠ ಸೂಚಿಸಿದೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಟಿಕ್‌ಟೊಕ್‌ನ ಅಪಾಯಕಾರಿ ವಿಚಾರವೆಂದರೆ ಅದರಲ್ಲಿನ ಅನುಚಿತವಾದ ಅಂಶಗಳು. ಈ ಆಪ್ ಮೂಲಕ ಮಕ್ಕಳು ಅಪರಿಚಿತರೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಅಪಾಯವಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಕ್ ಟೊಕ್ ವಕ್ತಾರರು, ಸ್ಥಳೀಯ ಕಾನೂನುಗಳಿಗೆ ಕಂಪೆನಿ ಬದ್ಧವಾಗಿದೆ. ನ್ಯಾಯಾಲಯದ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಅದನ್ನು ಪಡೆದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Madras High Court directed centre to ban popular chinese video app TikTok saying it has inappropriate content which encouraging pornography.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more