ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭಕೋಣಂ ಶಾಲೆ ಅಗ್ನಿ ದುರಂತ ಪ್ರಕರಣದ ಆರೋಪಿಗಳು ದೋಷಮುಕ್ತ

ಕುಂಭಕೋಣಂ ಶಾಲೆ ಅಗ್ನಿ ದುರಂತ ಪ್ರಕರಣದ ಎಲ್ಲಾ ಆರೋಪಿಗಳು ದೋಷಮುಕ್ತ. ಮದ್ರಾಸ್ ಹೈಕೋರ್ಟ್ ನಿಂದ ತೀರ್ಪು. 2004ರಲ್ಲಿ ನಡೆದಿದ್ದ ಪ್ರಕರಣ.

|
Google Oneindia Kannada News

ಚೆನ್ನೈ, ಆಗಸ್ಟ್ 11: 2004ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಕುಂಭಕೋಣಂನ ಶಾಲೆಯ ಬೆಂಕಿ ಅನಾಹುತ ಪ್ರಕರಣದ ಎಲ್ಲಾ 10 ಆರೋಪಿಗಳನ್ನು ಮದ್ರಾಸ್ ಹೈಕೋರ್ಟ್ ದೋಷ ಮುಕ್ತಗೊಳಿಸಿದೆ.

ಕುಂಭಕೋಣಂ ಶಾಲಾ ಅಗ್ನಿ ದುರಂತ: 10 ಜನ ಅಪರಾಧಿಗಳುಕುಂಭಕೋಣಂ ಶಾಲಾ ಅಗ್ನಿ ದುರಂತ: 10 ಜನ ಅಪರಾಧಿಗಳು

ಪ್ರಕರಣ ಕುರಿತಂತೆ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಎಂ. ಸತ್ಯನಾರಾಯಣನ್ ಹಾಗೂ ವಿ.ಎಂ. ವೇಲುಮಣಿ ಅವರುಳ್ಳ ನ್ಯಾಯಪೀಠ ಎಲ್ಲಾ ಆರೋಪಿಗಳನ್ನೂ ಬಿಡುಗಡೆ ಮಾಡುವಂತೆ ಆದೇಶಿಸಿದೆ.

Madras High Court acquits 10 accused in Kumbakonam school fire tragedy that killed 94 children

2004ರ ಜುಲೈ 16ರಂದು, ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿದ್ದ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಂಕಿ ಅವಗಢ ಸಂಭವಿಸಿತ್ತು. ಇದರಲ್ಲಿ 94 ಮಕ್ಕಳು ಸಾವನ್ನಪ್ಪಿದ್ದರು.

ಈ ಮೂಲಕ, ಇದೇ ಪ್ರಕರಣದ ವಿಚಾರಣೆಯಲ್ಲಿ ಕೆಳ ಹಂತದ ನ್ಯಾಯಾಲಯ ಈ ಆರೋಪಿಗಳಿಗೆ ವಿಧಿಸಿದ್ದ ಕಾರಾಗೃಹ ವಾಸದ ಶಿಕ್ಷೆಯನ್ನು ಅದು ತಳ್ಳಿಹಾಕಿದೆ.

Madras High Court acquits 10 accused in Kumbakonam school fire tragedy that killed 94 children

ಇನ್ನು, ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಪರಿಗಣಿಸಲ್ಪಟ್ಟಿದ್ದ ಶಾಲೆಯ ಸಂಸ್ಥಾಪಕರ ಪತ್ನಿಯು ವಿಚಾರಣೆ ನಡೆಯುತ್ತಿರುವ ಹಂತದಲ್ಲೇ ಮರಣ ಹೊಂದಿರುವುದರಿಂದಾಗಿ ಅವರ ವಿರುದ್ಧದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

English summary
In what may shatter hopes of a lot of parents who lost their children in the mishap, the Madras High Court on Thursday ordered the acquittal of 10 accused who were found guilty by the lower court in connection with the Kumbakonam school fire tragedy that killed 94 children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X