ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಮಗ ಅಂತ ಹೇಳುವವನ ಮೇಲೆ ನ್ಯಾಯಾಧೀಶರು ಸಿಟ್ಟಾಗಿದ್ಯಾಕೆ?

ತಾನು ಜಯಲಲಿತಾ ಮಗ ಎಂದು ಹೇಳಿಕೊಂಡು ಬಂದಿರುವ ಕೃಷ್ಣಮೂರ್ತಿ ಎಂಬ ವ್ಯಕ್ತಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ನ್ಯಾ. ಮಹದೇವನ್.

|
Google Oneindia Kannada News

ಚೆನ್ನೈ, ಮಾರ್ಚ್ 17: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಪುತ್ರ ಎಂದು ಹೇಳಿಕೊಂಡು ಬಂದಿರುವ ಜೆ. ಕೃಷ್ಣಮೂರ್ತಿ ಎಂಬಾತನ ವಿರುದ್ಧ ಗುಡುಗಿರುವ ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಆರ್. ಮಹದೇವನ್, ನ್ಯಾಯಾಲಯದ ಮುಂದೆ ಹುಡುಗಾಟ ಆಡಿದರೆ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆತ ನೀಡಿರುವ ದಾಖಲೆಗಳ ಸಾಚಾತನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ಆದಷ್ಟೂ ಶೀಘ್ರದಲ್ಲೇ ಕೃಷ್ಣಮೂರ್ತಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ, ತಾನು ಜಯಲಲಿತಾ ಅವರ ಮಗ ಎಂದು ಸಾಬೀತುಪಡಿಸಲು ಸಲ್ಲಿಸಿರುವ ದಾಖಲೆಗಳ ಮೂಲಪ್ರತಿಯನ್ನು ಪೊಲೀಸ್ ಆಯುಕ್ತರಿಗೆ ಆದಷ್ಟು ಬೇಗನೇ ಒಪ್ಪಿಸಬೇಕು. ಆಯುಕ್ತರು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದಿದ್ದಾರೆ.[ಇದ್ಯಾರ್ರೀ ಜಯಲಲಿತಾರ ಹೊಸ ಮಗ, ಆಕೆ ಎಲ್ಲ ಆಸ್ತಿಯ ವಾರಸುದಾರ!]

ಇಲ್ಲಿದೆ ಈ ಪ್ರಕರಣದ ಬಗ್ಗೆ ಶುಕ್ರವಾರ ನಡೆದ ಕಲಾಪದ ಹೈಲೈಟ್ಸ್ ಹಾಗೂ ದಾಖಲೆಗಳಲ್ಲಿ ಆತ ಜಯಲಲಿತಾ ಮಗ ಎಂಬುದಕ್ಕೆ ಇರುವ ಪುರಾವೆ ಏನು ಎಂಬುದಕ್ಕೆ ಸಾಕ್ಷಿ ಇಲ್ಲಿದೆ.

ಏಕೆ ಬಂದಿದ್ದಾನೇ ಈತ?

ಏಕೆ ಬಂದಿದ್ದಾನೇ ಈತ?

ಕೃಷ್ಣಮೂರ್ತಿ ಎಂಬಾತನು ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆ ಪ್ರಕಾರ, ''ತಾನು 1985ರಲ್ಲಿ ಹುಟ್ಟಿದ್ದು, ತನ್ನ ತಂದೆ ಶೋಭನ್ ಬಾಬು ಹಾಗೂ ತಾಯಿ ಜಯಲಲಿತಾ. ಶೋಭನ್ ಹಾಗೂ ಜಯಲಲಿತಾ ಅವರಿಗೆ ಜನಿಸಿರುವ ತನ್ನನ್ನು ಈರೋಡ್ ನಲ್ಲಿರುವ ವಸಂತಮಣಿ ಎಂಬುವರ ಮನೆಗೆ ದತ್ತು ನೀಡಲಾಗಿತ್ತು'' ಎಂದು ಹೇಳಿಕೊಂಡು ಬಂದಿದ್ದಾನೆ.
ಅಲ್ಲದೆ, ಜಯಲಲಿತಾ ಅವರ ಸಮಸ್ತ ಆಸ್ತಿಗೆ ತನ್ನನ್ನೇ ಉತ್ತರಾಧಿಕಾರಿಯಾಗಿ ಘೋಷಿಸಬೇಕೆಂದೂ ನ್ಯಾಯಾಲಯವನ್ನು ಕೋರಿದ್ದಾನೆ. ತನ್ನ ಈ ಬೇಡಿಕೆಗೆ ಪೂರಕವಾಗಿ ಹಲವಾರು ದಾಖಲೆಗಳನ್ನು ತಂದು ನ್ಯಾಯಾಲಯಕ್ಕೆ ನೀಡಿದ್ದಾನೆ.

ಕಿಡಿಯಾಡಿದ ನ್ಯಾಯಾಧೀಶರು

ಕಿಡಿಯಾಡಿದ ನ್ಯಾಯಾಧೀಶರು

ಈ ಪ್ರಕರಣದ ವಿಚಾರಣೆ ನಡೆಸುವ ನ್ಯಾ. ಆರ್. ಮಹದೇವನ್, ನ್ಯಾಯಾಲಯಕ್ಕೆ ನೀಡಿರುವ ದಾಖಲೆಗಳು ನಕಲಿಯಾಗಿದ್ದು ದಾಖಲೆಗಳ ಮೂಲ ಪ್ರತಿಗಳೆಲ್ಲಿ ಎಂದು ಕೃಷ್ಣಮೂರ್ತಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಆತ ಸೂಕ್ತ ಉತ್ತರ ನೀಡದಿದ್ದಾಗ ಗುಡುಗಿದ ನ್ಯಾ. ಮಹದೇವನ್, ಈ ದಾಖಲೆಗಳನ್ನು ನೋಡಿದರೆ, ಸಾಮಾನ್ಯವಾಗಿ ಅಂತರ್ಜಾಲದಲ್ಲಿ ಸಿಗುವ ಭಾವಚಿತ್ರಗಳನ್ನೇ ಉಪಯೋಗಿಸಿ ತಯಾರಿಸಿರುವ ದಾಖಲೆಗಳು ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಬಾಲವಿಹಾರದಲ್ಲಿ ಓದುವ ಮಕ್ಕಳ ಮುಂದೆ ಇವುಗಳನ್ನು ಇರಿಸಿದರೂ ಇವು ನಕಲಿ ಎಂದು ಆ ಮಕ್ಕಳೂ ಹೇಳುವಷ್ಟು ಈ ದಾಖಲೆಗಳ ನಕಲಿತನ ಸ್ಪಷ್ಟವಾಗಿದೆ ಎಂದರು.

ಆಯುಕ್ತರ ಹೆದರಿಗೆ ಜವಾಬ್ದಾರಿ

ಆಯುಕ್ತರ ಹೆದರಿಗೆ ಜವಾಬ್ದಾರಿ

ತಮ್ಮ ಮಾತುಗಳನ್ನು ಮುಂದುವರಿಸಿ, ''ನಾನು ಮನಸ್ಸು ಮಾಡಿದರೆ ಈಗಲೇ ನಿಮ್ಮನ್ನು ಜೈಲಿಗೆ ಕಳುಹಿಸಬಲ್ಲೆ. ಆದರೆ, ಸೂಕ್ತ ದಾಖಲೆಗಳನ್ನು ನೀಡಲು ನಿಮಗೆ ಮತ್ತೊಂದು ಅವಕಾಶ ನೀಡಿದ್ದೇನೆ. ಆದಷ್ಟು ಬೇಗನೇ ಚೆನ್ನೈ ಪೊಲೀಸ್ ಆಯುಕ್ತರಿಗೆ ನಿಮ್ಮ ದಾಖಲೆಗಳ ಮೂಲ ಪ್ರತಿಯನ್ನು ತಂದು ಒಪ್ಪಿಸಿ. ದಾಖಲೆಗಳ ಸತ್ಯಾಸತ್ಯತೆಯನ್ನು ಅವರೇ ನಿರ್ಧರಿಸಲಿ'' ಎಂದಿದ್ದಾರೆ.
ಇದಲ್ಲದೆ, ನ್ಯಾಯಾಲಯದ ಜತೆಗೆ ಆಟವಾಡಲು ಯತ್ನಿಸಿದರೆ ಜೈಲಿಗೆ ಅಟ್ಟುತ್ತೇವೆ ಎಂದೂ ಎಚ್ಚರಿಸಿದ್ದಾರೆ.

ಆತನ ಮೇಲೂ ಅಸಮಾಧಾನ

ಆತನ ಮೇಲೂ ಅಸಮಾಧಾನ

ಇನ್ನು, ಸಾಮಾಜಿಕ ಕಾರ್ಯಕರ್ತ ಕೆ.ಆರ್. 'ಟ್ರಾಫಿಕ್' ರಾಮಸ್ವಾಮಿಯತ್ತಲೂ ಕೆಂಗಣ್ಣು ಬೀರಿದ ನ್ಯಾಯಾಲಯ, ಕೃಷ್ಣಮೂರ್ತಿಗೆ ಬೆಂಬಲ ನೀಡಿರುವ ನೀವೂ ಇಂಥ ನಕಲಿ ದಾಖಲೆಗಳಲ್ಲಿ ಭಾಗಿಯಾಗಿರುವಿರೇ ಎಂಬ ಗುಮಾನಿ ಬರುತ್ತಿದೆ ಎಂದೂ ಹೇಳಿದೆ.

ದಾಖಲೆಯಲ್ಲಿ ಏನಿದೆ?

ದಾಖಲೆಯಲ್ಲಿ ಏನಿದೆ?

ಕೃಷ್ಣಮೂರ್ತಿ ಸಲ್ಲಿಸಿರುವ ದಾಖಲೆಯಲ್ಲಿ, ಆತ 1985ರಲ್ಲಿ ಹುಟ್ಟಿರುವುದಾಗಿ ಹೇಳಲಾಗಿದೆ. ಈತ, ತೆಲುಗು ನಟ ಶೋಭನ್ ಬಾಬು, ಜಯಲಲಿತಾ ಅವರಿಗೆ ಜನಿಸಿದ ಮಗನಂತೆ. ಈತನನ್ನು 1980ರಲ್ಲಿ ಈರೋಡ್ ನಲ್ಲಿರುವ ವಸಂತಮಣಿ ಎಂಬುವರ ಮನೆಗೆ ದತ್ತು ಕೊಡಲಾಗಿತ್ತಂತೆ. ಈ ವಸಂತಮಣಿ 1980ರಲ್ಲಿ ಆಗಿನ ತಮಿಳುನಾಡು ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಮನೆಯ ಕೆಲಸದಾಳು ಎಂದು ಕೃಷ್ಣಮೂರ್ತಿ ಹೇಳಿದ್ದಾನೆ. ಅಲ್ಲದೆ, ತನ್ನನ್ನು ವಸಂತಮಣಿಯವರಿಗೆ ದತ್ತು ನೀಡಿರುವ ಕುರಿತಂತೆ ದಾಖಲೆಯೊಂದನ್ನೂ ಸಲ್ಲಿಸಿದ್ದು, ಈ ದಾಖಲೆಯಲ್ಲಿ ಜಯಲಲಿತಾ ಹಾಗೂ ಶೋಭನ್ ಬಾಬು ಅವರ ಇಬ್ಬರ ಸಹಿಯೂ ಇದೆ. ಅಲ್ಲದೆ, ಈ ದತ್ತುಪತ್ರಕ್ಕೆ ಸಾಕ್ಷಿಯಾಗಿ ಎಂ.ಜಿ. ರಾಮಚಂದ್ರನ್ ಅವರ ಸಹಿಯೂ ಇದೆ!
ಆದರೆ, 1980ರಲ್ಲಿ ರಾಮಚಂದ್ರನ್ ಅವರಿಗೆ ಪಾರ್ಶ್ವವಾಯು ಪೀಡಿತರಾಗಿದ್ದರಿಂದ ಅವರಿಗೆ ಎದ್ದು ನಡೆಯಲೂ ಸಾಧ್ಯವಿರಲಿಲ್ಲ. ಇನ್ನು, ಅವರು ಸಹಿ ಮಾಡುವುದೆಲ್ಲಿಂದ ಬಂತು ಎಂದು ನ್ಯಾ. ಮಹದೇವನ್ ಅವರು ಕೃಷ್ಣಮೂರ್ತಿಯ ವಾದವನ್ನು ಅಲ್ಲಗಳೆದಿದ್ದಾರೆ.

English summary
"I can send this man straightaway to jail. I will ask police officers to take him to jail now itself," thundered Justice R Mahadevan of the Madras high court on Friday at a man who claimed himself to be the secret son of former Tamil Nadu chief minister Jayalalitha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X