ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1-2ನೇ ಕ್ಲಾಸ್ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ: ಕೋರ್ಟ್

|
Google Oneindia Kannada News

ದೇಶದಾದ್ಯಂತ ಒಂದು ಹಾಗೂ ಎರಡನೇ ತರಗತಿ ಓದುತ್ತಿರುವ ಮಕ್ಕಳಿಗೆ ಹೋಮ್ ವರ್ಕ್ ಕೊಡಬಾರದು ಎಂಬುದನ್ನು ಖಾತ್ರಿ ಪಡಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಮಂಗಳವಾರ ನಿರ್ದೇಶನ ನೀಡಿದೆ. ಶಾಲೆ ಯಾವುದೇ ಮಂಡಳಿಗೆ ಸೇರಿರಬಹುದು, ಈ ನಿಯಮವನ್ನು ಪಾಲಿಸಲೇಬೇಕು ಎಂದು ತಿಳಿಸಲಾಗಿದೆ.

ಸಿಬಿಎಸ್‌ಇ 10ನೇ ಕ್ಲಾಸ್‌ ಫಲಿತಾಂಶ: ನಾಲ್ವರಿಗೆ 500ಕ್ಕೆ 499 ಅಂಕ ಸಿಬಿಎಸ್‌ಇ 10ನೇ ಕ್ಲಾಸ್‌ ಫಲಿತಾಂಶ: ನಾಲ್ವರಿಗೆ 500ಕ್ಕೆ 499 ಅಂಕ

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೇನಿಂಗ್ (ಎನ್ ಸಿಇಆರ್ ಟಿ) ಶಿಫಾರಸಿನ ಸಹಾಯದಿಂದ ಈ ನಿರ್ದೇಶನ ಮಾಡಲಾಗಿದೆ. ನ್ಯಾಯಮೂರ್ತಿ ಎನ್.ಕಿರುಬಕರನ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಭಾಷೆಗಳು ಹಾಗೂ ಗಣಿತ ಹೊರತುಪಡಿಸಿ ಇನ್ಯಾವುದೇ ವಿಷಯವನ್ನು ಒಂದು ಹಾಗೂ ಎರಡನೇ ತರಗತಿ ಮಕ್ಕಳ ಮೇಳೆ ಹೇರಬಾರದು ಎಂದು ಸೇರಿಸಿದ್ದಾರೆ.

ಶುಲ್ಕ ಹೆಚ್ಚಳ ವಿರೋಧಿಸಿ ಪ್ರೆಸಿಡೆನ್ಸಿ ಶಾಲೆ ಎದುರು ಪೋಷಕರ ಧರಣಿಶುಲ್ಕ ಹೆಚ್ಚಳ ವಿರೋಧಿಸಿ ಪ್ರೆಸಿಡೆನ್ಸಿ ಶಾಲೆ ಎದುರು ಪೋಷಕರ ಧರಣಿ

ಮೂರರಿಂದ ಐದನೇ ತರಗತಿ ಮಕ್ಕಳಿಗೆ ಹೆಚ್ಚುವರಿಯಾಗಿ ಪರಿಸರ ವಿಜ್ಞಾನವನ್ನು ಸೇರಿಸಬಹುದು. ಇಡೀ ದೇಶದಾದ್ಯಂತ ಇರುವ ಎಲ್ಲ ಶಾಲೆಗಳಲ್ಲಿ ಈ ವಿಷಯ ಹಾಗೂ ಹೋಮ್ ವರ್ಕ್ ಗೆ ಸಂಬಂಧಿಸಿದ ನಿರ್ದೇಶನ ಪಾಲಿಸಬೇಕು. ಒಂದು ವೇಳೆ ಇದರಲ್ಲಿ ವಿಫಲವಾದರೆ ಆ ಶಾಲೆಯನ್ನು ಎನ್ ಸಿಇಆರ್ ಟಿಯಿಂದ ಅನರ್ಹಗೊಳಿಸಬೇಕು ಎಂದು ತಿಳಿಸಲಾಗಿದೆ.

Madras HC bans homework for Class 1 and 2 kids

ಕೋರ್ಟ್ ನಿರ್ದೇಶನವನ್ನು ಶಾಲೆಗಳು ಪಾಲಿಸುತ್ತಿವೆಯಾ ಎಂಬುದನ್ನು ಪರಿಶೀಲಿಸಲು ರಾಜ್ಯ ಸರಕಾರಗಳು ತಂಡಗಳನ್ನು ರಚಿಸಬೇಕು. ಈ ಬಗ್ಗೆ ಶಾಲೆಗಳಿಗೆ ಅಧಿಸೂಚನೆಯನ್ನು ಹೊರಡಿಸಬೇಕು. ಈ ನಿರ್ದೇಶನವು ಶೈಕ್ಷಣಿಕ ವರ್ಷ 2018-19ರಿಂದಲೇ ಅನ್ವಯ ಆಗಲಿದೆ.

ಇದಕ್ಕೂ ಮುನ್ನ ಮಕ್ಕಳು ಇಷ್ಟೇ ತೂಕದ ಬ್ಯಾಗ್ ಅನ್ನು ಶಾಲೆಗೆ ತೆಗೆದುಕೊಂಡು ಹೋಗಬೇಕು ಎಂದು ದೇಶದಾದ್ಯಂತ ನಿಯಮ ರೂಪಿಸಲು ಕೇಂದ್ರಕ್ಕೆ ಕೋರ್ಟ್ ಸೂಚಿಸಿತ್ತು.

English summary
The Madras High Court on Tuesday directed the Centre to ensure that homework is banned for students of Classes 1 and 2 all over the country, regardless of the educational board of the school. The directive was issued with the help of recommendations from the National Council of Educational Research and Training (NCERT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X