ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುರೈ ಕೇಂದ್ರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ತೃತೀಯ ಲಿಂಗಿ ಅಭ್ಯರ್ಥಿ

By ಮಾಧುರಿ ಅದ್ನಾಳ್
|
Google Oneindia Kannada News

ಚೆನ್ನೈ, ಮಾರ್ಚ್ 20: ತಮ್ಮ ಸಮುದಾಯದ ಹಕ್ಕನ್ನು ಉಳಿಸುವ ಸಲುವಾಗಿ ಮತ್ತು ತೃತಿಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ಹೊತ್ತು, ತಮಿಳುನಾಡಿನ ಲಿಂಗ ಅಲ್ಪಸಂಖ್ಯಾತ ಹೋರಾಟಗಾರರಾದ ಭಾರತಿ ಕನ್ನಮ್ಮ ಅವರು ಲೋಕಸಭಾ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದರು.

ತೃತೀಯ ಲಿಂಗಿ ಸಮುದಾಯದ ಮುಖಂಡರಾದ ಅವರು ಬೆಂಬಲಿಗರೊಂದಿಗೆ ಇಂದು ಮಧುರೈ ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಚುನಾವಣೆ: ನೋಂದಣಿಗೆ ತೃತೀಯ ಲಿಂಗಿಗಳ ನಿರಾಸಕ್ತಿ, ಕಾರಣಗಳುಚುನಾವಣೆ: ನೋಂದಣಿಗೆ ತೃತೀಯ ಲಿಂಗಿಗಳ ನಿರಾಸಕ್ತಿ, ಕಾರಣಗಳು

58 ವರ್ಷಯದ ಕನ್ನಮ್ಮ 2014 ರ ಲೋಕಸಭಾ ಚುನಾವಣೆಯಲ್ಲಿಯೂ ಮಧುರೈ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 1226 ಮತಗಳನ್ನು ಪಡೆದು ಸೋಲು ಕಂಡಿದ್ದರು.

LS Polls: 2019: Madurai transgender to try her luck again, files nomination

ಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನ

ತಾವು ಗೆದ್ದು, ಸಂಸದೆಯಾಗಿ ತೃತಿಯ ಲಿಂಗಿಗಳ ಹಕ್ಕನ್ನು ಕಾಪಾಡುವ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸವನ್ನು ಹೊಂದಿರುವ ಕನ್ನಮ್ಮ, ಹಲವು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್ ವೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕನ್ನಮ್ಮ, ತೃತಿಯ ಲಿಂಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿದ್ದಾರೆ.

English summary
Scripting another chapter to her battle in securing her community's rights, a well-known transgender and activist in Tamil Nadu is making her electoral attempt in the upcoming Lok Sabha elections 2019. Earlier in the day, Bharathi Kannamma, a member of the transgender community, filed her nomination in Madurai constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X