ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಟರಿ ಮಾರ್ಟಿನ್ ಕರಾಳ ಸಾಮ್ರಾಜ್ಯದಲ್ಲಿ ಒಂದು ಸುತ್ತು

By Mahesh
|
Google Oneindia Kannada News

ಚೆನ್ನೈ, ಮೇ.27: ಆ ಕಾಲದಲ್ಲಿ ಕೊಯಮತ್ತೂರು ಮೂಲದ ಲಾಟರಿ ಏಜೆಂಟ್ ಸ್ಯಾಂಟಿಯಾಗೋ ಮಾರ್ಟಿನ್ ದಿನವೊಂದಕ್ಕೆ ಗಳಿಸುತ್ತಿದ್ದ ಲಾಭ ಐಟಿ ದಿಗ್ಗಜ ಇನ್ಫೋಸಿಸ್ ನಾರಾಯಣ ಮೂರ್ತಿ, ರಿಲಯನ್ಸ್ ಧೀರೂಭಾಯಿ ಅಂಬಾನಿ ಆದಾಯಕ್ಕಿಂತ ಹೆಚ್ಚಾಗಿತ್ತು. ರಾಮನಗರದ ರೈಡ್ ನಡೆಯದಿದ್ದರೆ ಲಾಟರಿ ಹಗರಣ ಬೆಳಕಿಗೆ ಬರುತ್ತಿರಲಿಲ್ಲ, 7 ಸಾವಿರ ಕೋಟಿ ಕತ್ತಲ ಸಾಮ್ರಾಜ್ಯ ಬೆಳಕಿಗೆ ಬರುತ್ತಿರಲಿಲ್ಲ.

ಕೊಯಮತ್ತೂರಿನ ಗಾಂಧಿನಗರಂನ ನಿವಾಸಿ ಮಾರ್ಟಿನ್ ಒಬ್ಬ ಸಾಧಾರಣ ಲಾಟರಿ ಏಜೆಂಟ್ ಆಗಿದ್ದ. ಬಡವರು, ಮಧ್ಯಮ ವರ್ಗದವರ ಪಾಲಿಗೆ ಕನಸು ಹಂಚುವ ವ್ಯಾಪಾರಿ. ದಿನನಿತ್ಯ ಲಾಟರಿ ಮಾರಿ ಜೀವನ ಸಾಗಿಸುತ್ತಿದ್ದ ಮಾರ್ಟಿನ್ ಮುಂದೊಂದು ದಿನ 7,000 ಕೋಟಿ ರು ಮೌಲ್ಯದ ಲಾಟರಿ ಹಗರಣದ ಕಿಂಗ್ ಪಿನ್ ಎನಿಸಿದ. 2000 ಕೋಟಿ ರು ಒಡೆಯನಾದ, ದಂಧೆ ನಡೆದಷ್ಟು ದಿನ ರಾಜನಂತೆ ಮೆರೆದ. [7,000ಕೋಟಿ ಲಾಟರಿ ಹಗರಣದ ಕಿಂಗ್ ಪಿನ್ !]

ದಿನವೊಂದಕ್ಕೆ 60 ರಿಂದ 80 ಮಿಲಿಯನ್ : ಸುಮಾರು ಎರಡು ದಶಕಗಳ ಕಾಲ ಈ ವ್ಯಾಪಾರದಲ್ಲಿ ಪಳಗಿದ ಮಾರ್ಟಿನ್ ಗೆ ಗ್ರಾಹಕರ ಸೈಕಾಲಜಿ ಚೆನ್ನಾಗಿ ಪರಿಚಯವಿತ್ತು. ವ್ಯಾಪಾರದ ಗುಟ್ಟು, ತಂತ್ರಗಾರಿಕೆಯನ್ನು ಸಕತ್ತಾಗಿ ಗ್ರಹಿಸಿದ್ದ. ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ದೊಡ್ಡ ಕಚೇರಿ ತೆರೆದ ಸಿಕ್ಕಿಂ ಸರ್ಕಾರಕ್ಕೆ ಲಾಟರಿ ಮಾರಾಟ ಸಲಹೆಗಾರನಾದ. [ಬಹುಕೋಟಿ ಲಾಟರಿ ಹಗರಣದ ತನಿಖೆ ಸಿಬಿಐ ಕೈಗೆ]

ದಿನವೊಂದಕ್ಕೆ 60 ರಿಂದ 80 ಮಿಲಿಯನ್ ಗಳಿಸತೊಡಗಿದ. ಅಮೆರಿಕ ಸುತ್ತಿ ಬಂದ ಲಾಟರಿ ವೃತ್ತಿದಾರರ ಸಂಘದ ಪ್ರಶಸ್ತಿ ಪಡೆದ. ಪ್ರತಿ ದಿನ ದೇಶದ ಹಲವೆಡೆ 12 ಮಿಲಿಯನ್ ಲಾಟರಿ ಟಿಕೆಟ್ ಗಳು ಮಾರ್ಟಿನ್ ಲಾಟರಿ ಏಜೆನ್ಸಿಯಿಂದ ಮಾರಾಟವಾಗುತ್ತ್ತಿತ್ತು. ತಮಿಳುನಾಡಿನ 17 ಸ್ಕೀಮ್ ಗಳು, ಸಿಕ್ಕಿಂ ಸರ್ಕಾರದ 28,ಅರುಣಾಚಲ ಪ್ರದೇಶದ 6 ಲಾಟರಿ ಯೋಜನೆಗಳನ್ನು ಸುಲಭವಾಗಿ ನಿಭಾಯಿಸುತ್ತಿದ್ದ. [ಒಂದಂಕಿ ಲಾಟರಿ ದಂಧೆ: ಪಾರಿ 'ಕಿಂಗ್ ಪಿನ್' ಅಲ್ಲ]

Coimbatore based Kingpin Santiago Martin

ಜೊತೆಗೆ ಭೂತನ್ ಸರಕಾರದ ಲಾಟರಿ ವಿತರಣೆ ಪಡೆದುಕೊಂಡ ಮಣಿಪುರ, ಮೇಘಾಲಯ, ನಾಗಾಲ್ಯಾಂಡ್ ಹಾಗೂ ಪಶ್ಚಿಮ ಬಂಗಾಲ ಕೂಡಾ ಮಾರ್ಟಿನ್ ಕೈವಶವಾಯಿತು. ಎಲ್ಲೆಡೆ ವ್ಯಾಪಾರ ದಿನದಿಂದ ದಿನಕ್ಕೆ ಬೆಳೆಯತೊಡಗಿತು.

ರಿಯಲ್ ಎಸ್ಟೇಟ್, ಮಾಧ್ಯಮ, ಜವಳಿ, ನರ್ಸಿಂಗ್ ಕಾಲೇಜು ಹೀಗೆ ಎಲ್ಲೆಡೆ ಹೂಡಿಕೆ ಮಾಡತೊಡಗಿದ. ಡಿಎಂಕೆ ಪಕ್ಷದ ಗೆಳೆತನ ಈತನ ಎಲ್ಲಾ ಆಟಾಟೋಪಗಳಿಗೆ ಇಂಬು ನೀಡಿತ್ತು. [ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅಮಾನತು]

ಎಡಿಎಐಎಂಕೆ ಅಡ್ಡಗಾಲು : ಅದರೆ. 2003ರಲ್ಲಿ ಎಡಿಎಐಎಂಕೆ ಸರ್ಕಾರ ಲಾಟರಿ ನಿಷೇಧ ಹೇರಿತು. ಸರ್ಕಾರದ ಬೊಕ್ಕಸಕ್ಕೆ 15,000 ಕೋಟಿ ರು ನಷ್ಟವಾಗುತ್ತಿದೆ. ಅದರೆ, ಜನ ಹಾಳಾಗುವುದನ್ನು ತಪ್ಪಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಜಯಲಲಿತಾ ಸಮರ್ಥಿಸಿಕೊಂಡಿದ್ದರು. [ಮಟ್ಕಾ: ಯಾವ ನಂಬರು ಇವತ್ತಿಗೆ ಫಿಟ್ ಆಗುತ್ತದೆ?]

ಆದರೆ, ಕರ್ನಾಟಕ ರಾಜ್ಯದಲ್ಲಿ ಮಾರ್ಟಿನ್ ಜಾಲ ವಿಸ್ತರಣೆಯಾಗಿತ್ತು. ಎಲ್ಲವೂ 2007ರ ತನಕ ಚೆನ್ನಾಗಿ ನಡೆಯಿತು. ಮಂಡ್ಯ, ರಾಮನಗರ ಬಳಿ ಲಾಟರಿ ದಂಧೆ ಬಗ್ಗೆ ರೈಡ್ ಬಂದ ಸುದ್ದಿ ಹೀಗೆ ಬಂದು ಹಾಗೆ ಮರೆಯಾಯಿತು. ಅದರೆ, ಅಂದಿನ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಸೀರಿಯಸ್ ಆಗಿ ತೆಗೆದುಕೊಂಡು ಲಾಟರಿ ಬ್ಯಾನ್ ಮಾಡುವುದಾಗಿ ಘೋಷಿಸಿತು. ಸರ್ಕಾರಕ್ಕೆ ಅಬ್ಬಬ್ಬಾ ಎಂದರೆ 100 ಕೋಟಿ ರು ತೆರಿಗೆ ಬರುತ್ತಿತ್ತು. [ಸಿಐಡಿ ಹಾಗೂ ಸಿಬಿಐ ತನಿಖೆ ವ್ಯತ್ಯಾಸವೇನು?]

ಈ ಸಮಯಕ್ಕೆ ತಮಿಳುನಾಡಿಗೆ ಸೇಲ್ಸ್ ಟ್ಯಾಕ್ಸ್ ರೂಪದಲ್ಲಿ ದಿನವೊಂದಕ್ಕೆ 350,000 ರು, ಸಿಕ್ಕಿ ಸರ್ಕಾರಕ್ಕೆ 7,59,000 ರು, ಪಶ್ಚಿಮ ಬಂಗಾಳಕ್ಕೆ 50,000 ರು ಕಟ್ಟುತ್ತಿದ್ದ. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ?]

ಮಾರ್ಟಿನ್ ಸೋದರ ಸಂಬಂಧಿ ಜಾನ್ ಬ್ರಿಟೋ ಹಾಗೂ ದೆಹಲಿ ಚಾಂದಿನಿ ಚೌಕ್ ಸಂಸದ ವಿಜಯ್ ಗೋಯಲ್ ಅವರ ನಡುವೆ ಸಿಕ್ಕಿಂ ಲಾಟರಿ ಏಜೆನ್ಸಿ ಕಾಂಟ್ರಾಕ್ಟ್ ವಿಷಯದಲ್ಲಿ ಮನಸ್ತಾಪ ಉಂಟಾಯಿತು. ದೆಹಲಿಯ ಖುರಾನ ಕಂಪನಿ ಹೆಸರು ಕೇಳಿ ಬಂದಿತು. ಇದೆಲ್ಲವೂ ಹಗರಣದ ಇನ್ನೊಂದು ಮಗ್ಗಲಿನ ಪರಿಚಯ ಮಾಡಿತು. ಸಿಬಿಐ ಪ್ರಕರಣದ ತನಿಖೆ ನಡೆಸಿ ಸಾಮ್ರಾಜ್ಯ ನಾಶಕ್ಕೆ ನಾಂದಿ ಹಾಡಿತು.

English summary
Coimbatore based Lottery scam Kingpin Santiago Martin's daily earning was much more than IT czar Infosys Narayana Murthy of Dhirubhai Ambani of Reliance. Here is re visit to the kingdom of Lottery Martin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X