ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಚುನಾವಣೆಯಲ್ಲಿ ಸೋತ ಕೆ. ಅಣ್ಣಾಮಲೈ ಟ್ವೀಟ್

|
Google Oneindia Kannada News

ಚೆನ್ನೈ, ಮೇ 03; ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 234 ಕ್ಷೇತ್ರಗಳ ಪೈಕಿ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಫಲಿತಾಂಶ ನಿರಾಸೆ ಮೂಡಿಸಿದೆ.

Recommended Video

ತಮಿಳುನಾಡಲ್ಲಿ ಗೆಲುವಿಗಾಗಿ ಹರಸಾಹಸ ಪಡುತ್ತಿರುವ ಕೆ ಅಣ್ಣಾಮಲೈ

ವಿಧಾನಸಭೆ ಚುನಾವಣೆ ಘೋಷಣೆಗೂ ಮೊದಲು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿ ಸೇರಿದ್ದರು. ಪಕ್ಷ ಅವರನ್ನು ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ಮಾಡಿತ್ತು.

ಕರ್ನಾಟಕದ ಮುಖ ತೋರಿಸುವಂತೆ ಮಾಡಬೇಡಿ ಎಂದು ಬೆದರಿಕೆ ಹಾಕಿದ ಅಣ್ಣಾಮಲೈ ವಿರುದ್ಧ ಎಫ್‌ಐಆರ್ಕರ್ನಾಟಕದ ಮುಖ ತೋರಿಸುವಂತೆ ಮಾಡಬೇಡಿ ಎಂದು ಬೆದರಿಕೆ ಹಾಕಿದ ಅಣ್ಣಾಮಲೈ ವಿರುದ್ಧ ಎಫ್‌ಐಆರ್

ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಕ ಅಣ್ಣಾಮಲೈಗೆ ಅರವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ರಾಜ್ಯದ ಬಿಜೆಪಿ ಉಸ್ತುವಾರಿ ಸಿ. ಟಿ. ರವಿ ಸೇರಿದಂತೆ ಹಲವು ನಾಯಕರು ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸಿದ್ದರು.

ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ

 Losses Are Part Of Life Have Seen Many K Annamalai Tweet

ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಅಣ್ಣಾಮಲೈ 60 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಆಡಳಿತಾರೂಢ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆಡಳಿತ ಪಕ್ಷವ 74 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

 ತಮಿಳುನಾಡು: 2016ರಲ್ಲಿ ಎಕ್ಸಿಟ್ ಪೋಲ್‌ಗೆ ಮಣ್ಣು ಮುಕ್ಕಿಸಿದ್ದ ಫಲಿತಾಂಶ ತಮಿಳುನಾಡು: 2016ರಲ್ಲಿ ಎಕ್ಸಿಟ್ ಪೋಲ್‌ಗೆ ಮಣ್ಣು ಮುಕ್ಕಿಸಿದ್ದ ಫಲಿತಾಂಶ

ಅಣ್ಣಾಮಲೈ ಟ್ವೀಟ್; ಚುನಾವಣೆ ಫಲಿತಾಂಶದ ಬಳಿಕ ಟ್ವೀಟ್ ಮಾಡಿರುವ ಅಣ್ಣಾಮಲೈ, "ಸೋಲು ಜೀವನದ ಭಾಗ. ಇಂತಹ ಹಲವನ್ನು ನೋಡಿದ್ದೇನೆ. ಇಂದು ಸಹ ಅಂತಹದ್ದೇ ಒಂದು ದಿನ. ಗೆಲುವಿನ ರೇಖೆಯನ್ನು ದಾಟಲು ಆಗಿಲ್ಲ" ಎಂದು ಹೇಳಿದ್ದಾರೆ.

"ಅರವಕುರುಚಿ ಕ್ಷೇತ್ರದಲ್ಲಿ 68,000 ಮತಗಳನ್ನು ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಜೊತೆಗೆ ಎಂದಿಗೂ ಇರುತ್ತೇನೆ" ಎಂದು ಟ್ವೀಟ್‌ನಲ್ಲಿ ಅಣ್ಣಾಮಲೈ ತಿಳಿಸಿದ್ದಾರೆ.

ತಮಿಳುನಾಡಿನ ರಾಜಕೀಯ ವ್ಯವಸ್ಥೆಯನ್ನೇ ಬದಲಾವಣೆ ಮಾಡುವ ನಿರೀಕ್ಷೆ ಹೊತ್ತು ಅಣ್ಣಾಮಲೈ ಚುನಾವಣಾ ಕಣಕ್ಕಿಳಿದಿದ್ದರು. ಆದರೆ, ಮೊದಲ ಪ್ರಯತ್ನದಲ್ಲಿ ಸೋಲಾಗಿದೆ. ಖಡಕ್ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ ಅಣ್ಣಾಮಲೈಗೆ ಜನರು ಬೆಂಬಲ ನೀಡಿಲ್ಲ.

English summary
In Tamil Nadu assembly election 2021 former IPS officer K. Annamalai lost at Aravakurichi. Losses are part of life. Have seen many BJP candidate tweeted after election result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X