ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್‌ ಸಮೀಕ್ಷೆ ಸುಳ್ಳಿನ ಕಂತೆ ಎಂದ ಬಿಜೆಪಿಯ ಮಿತ್ರಪಕ್ಷ!

|
Google Oneindia Kannada News

ಚೆನ್ನೈ, ಮೇ 20: ರಾಷ್ಟ್ರಮಟ್ಟದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೆಯ ಅವಧಿಗೆ ರಚನೆಯಾಗಲಿದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಆದರೆ, ಬಿಜೆಪಿಯದೇ ಮಿತ್ರಪಕ್ಷ ಈ ಎಕ್ಸಿಟ್ ಪೋಲ್‌ಗಳು ಸುಳ್ಳಿನ ಕಂತೆ ಎಂದು ಹೇಳಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ಎಕ್ಸಿಟ್ ಪೋಲ್‌ಗಳ ಮೇಲೆ ತನಗೆ ವಿಶ್ವಾಸವಿಲ್ಲ ಎಂದಿದೆ. ತಮಿಳುನಾಡು ಮುಖ್ಯಮಂತ್ರಿ ಈ. ಪಳನಿಸ್ವಾಮಿ ಎಕ್ಸಿಟ್ ಪೋಲ್‌ಗಳು ಸುಳ್ಳು ಎಂದಿದ್ದಾರೆ.

ಬಿಜೆಪಿಯನ್ನು ತಡೆಯಲಾಗದಿದ್ದ ಮೇಲೆ ಕಾಂಗ್ರೆಸ್ ಸಾಯಲೇಬೇಕು: ಯೋಗೇಂದ್ರ ಯಾದವ್ ಬಿಜೆಪಿಯನ್ನು ತಡೆಯಲಾಗದಿದ್ದ ಮೇಲೆ ಕಾಂಗ್ರೆಸ್ ಸಾಯಲೇಬೇಕು: ಯೋಗೇಂದ್ರ ಯಾದವ್

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 302 ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 122 ಮತ್ತು 118 ಸೀಟುಗಳು ಇತರೆ ಪಕ್ಷಗಳು/ಪಕ್ಷೇತರರ ಪಾಲಾಗಲಿವೆ ಎಂದು ಸಮೀಕ್ಷೆಗಳ ಸಮೀಕ್ಷೆ ಹೇಳಿದೆ.

Lok Sabha Elections 2019: tamil nadu CM Palaniswami exit poll is a lie

ಆದರೆ, ಎಐಎಡಿಎಂಕೆ ನಾಯಕ, ಮುಖ್ಯಮಂತ್ರಿ ಪಳನಿಸ್ವಾಮಿ ಎಕ್ಸಿಟ್ ಪೋಲ್‌ಅನ್ನು ಟೀಕಿಸಿರುವುದು ಪ್ರಾದೇಶಿಕವಾಗಿ ನುಡಿದಿರುವ ಭವಿಷ್ಯದ ಕುರಿತು. ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದೆ. ಅವುಗಳಲ್ಲಿ 11 ಕ್ಷೇತ್ರಗಳಲ್ಲಿ ಬಿಜೆಪಿಗೆ ಎಐಎಡಿಎಂಕೆ ಬಿಟ್ಟುಕೊಟ್ಟಿದೆ. ಆದರೆ ಬಹುತೇಕ ಸಮೀಕ್ಷೆಗಳು ಡಿಎಂಕೆ 34 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ ಎಂದು ಹೇಳಿವೆ.

ಉ.ಪ್ರದೇಶ: ಮತದಾನದ ನಂತರ ಮಿತ್ರ ಪಕ್ಷವನ್ನು ಹೊರಹಾಕಿದ ಬಿಜೆಪಿಉ.ಪ್ರದೇಶ: ಮತದಾನದ ನಂತರ ಮಿತ್ರ ಪಕ್ಷವನ್ನು ಹೊರಹಾಕಿದ ಬಿಜೆಪಿ

'ಮೈತ್ರಿಕೂಟವು ತಮಿಳುನಾಡು ಮತ್ತು ಪುದಚೆರಿಯ ಎಲ್ಲ 39 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ 37 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು.

English summary
Lok Sabha Elections 2019: Tamil Nadu Chief Minister E Palaniswami said that, Exit poll is a lie. AIADMK alliance will win all 38 seats in Tamil Nadu and Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X