ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್ ಪಕ್ಷದ ಪ್ರಣಾಳಿಕೆ: ಸ್ಲಂ ಫ್ರೀ, ಟೋಲ್ ಫ್ರೀ ತಮಿಳುನಾಡು

|
Google Oneindia Kannada News

ಚೆನ್ನೈ, ಮಾರ್ಚ್ 26: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಹಾಗೂ ಜನರ ಪರವಾಗಿ ಕೆಲಸ ಮಾಡಲು ಮಕ್ಕಳ್ ನೀದಿ ಮಯ್ಯಂ (ಎಂಎನ್ಎಂ) ಸ್ಥಾಪಿಸಿದ ಕಮಲ್ ಹಾಸನ್ ಅವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಪ್ರಕಟಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸ್ಲಂ-ಮುಕ್ತ ತಮಿಳುನಾಡು, ಹೆದ್ದಾರಿ ಟೋಲ್ ತೆಗೆದುಹಾಕುವುದು, ಉಚಿತ ವೈಫೈ, ಐವತ್ತು ಲಕ್ಷ ಉದ್ಯೋಗ ಸೃಷ್ಟಿಯಂಥ ಅಂಶಗಳನ್ನು ಕಮಲ್ ಹಾಸನ್ ಪ್ರಣಾಳಿಕೆ ಒಳಗೊಂಡಿದೆ.

ಜ್ಯೋತಿಷ್ಯ: ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯ ಪಕ್ಷದ ಭವಿಷ್ಯ ಏನು? ಜ್ಯೋತಿಷ್ಯ: ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯ ಪಕ್ಷದ ಭವಿಷ್ಯ ಏನು?

ಅಭಿಮಾನಿಗಳ ಪಾಲಿನ 'ಯೂನಿವರ್ಸಲ್ ಸ್ಟಾರ್' ಕಮಲ್ ಹಾಸನ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಲೋಕಸಭೆ ಹಾಗೂ 18 ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಗಾಗಿ ಕಮಲ್ ಅವರ ಮಕ್ಕಳ್ ನೀದಿ ಮಯ್ಯಂ(ಎಂಎನ್ಎಂ) ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ.

Lok Sabha Elections 2019 : Makkal Neethi Maiam (MNM) Election Manifesto

ಸರ್ವರಿಗೂ ಶುದ್ಧ ಕುಡಿಯುವ ನೀರು, ಮನೆ ಮನೆಗೆ ಪಡಿತರ ಸೇವೆ ವಿತರಣೆ, ಮತ್ತು ಮಹಿಳೆಯರಿಗೂ ಸಮಾನ ವೇತನ ಈ ಬಾರಿಯ ಕಮಲ್ ಹಾಸನ್ ಅವರ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿವೆ.

ಲೋಕಸಭೆ ಚುನಾವಣೆಯಲ್ಲಿ ಯೂನಿವರ್ಸಲ್ ಸ್ಟಾರ್ ಸ್ಪರ್ಧೆಯಿಲ್ಲ ಲೋಕಸಭೆ ಚುನಾವಣೆಯಲ್ಲಿ ಯೂನಿವರ್ಸಲ್ ಸ್ಟಾರ್ ಸ್ಪರ್ಧೆಯಿಲ್ಲ

ಬಡತನದಿಂದ ರೇಖೆಗಿಂತ ಕೆಳಗಿರುವ 60 ಲಕ್ಷಕ್ಕೂ ಅಧಿಕ ಕುಟುಂಬಗಳ ಅಭಿವೃದ್ಧಿ, ಉಚಿತ ಹಾಗೂ ಸಬ್ಸಿಡಿದರದಲ್ಲಿ ವಸತಿ ಯೋಜನೆ, ಲೋಕಾಯುಕ್ತ ನೇಮಕ, ರೈತರ ಅನುಕೂಲಕ್ಕಾಗಿ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.

ಶಿವಗಂಗಾ ಕ್ಷೇತ್ರದಿಂದ ಸಾಹಿತಿ ಸ್ನೇಹನ್(ಕಾರ್ತಿ ಚಿದಂಬರಂ, ಎಚ್ ರಾಜ ವಿರುದ್ಧ), ಪೊಲ್ಲಾಚ್ಚಿಯಿಂದ ಮೂಕಂಬಿಗೈ, ನಟ ನಾಸರ್ ಅವರ ಪತ್ನಿ ಕಮೀಲಾ ನಾಸರ್ ಅವರು ಸೆಂಟ್ರಲ್ ಚೆನ್ನೈನಿಂದ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

English summary
MNM manifesto included doorstep delivery of ration items; equal pay for women; employment reservation for women; free WiFi; abolition of highway toll; creation of 50 lakh jobs; upliftment of 60 lakh below poverty level families; free or subsidised housing; appointment of Lok Ayuktas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X