ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲ್ ಹಾಸನ್ ರ ಮಕ್ಕಳ್ ನೀದಿ ಮೈಯ್ಯಂ ಪಕ್ಷದ ಮೊದಲ ಪಟ್ಟಿ ಬಿಡುಗಡೆ

|
Google Oneindia Kannada News

ಚೆನ್ನೈ, ಮಾರ್ಚ್ 20: ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯ್ಯಂ ಬಿಡುಗಡೆ ಮಾಡಿರುವ ಲೋಕಸಭೆ ಅಭ್ಯರ್ಥಿಗಳ ಇಪ್ಪತ್ತೊಂದು ಹೆಸರಿನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು ಒಳಗೊಂಡಿದ್ದಾರೆ. ಕಮಲ್ ಹಾಸನ್ ಅವರ ಪಕ್ಷವು ತಮಿಳುನಾಡು, ಪುದುಚೆರಿ ಎರಡೂ ಕಡೆ ಚುನಾವಣೆಗೆ ಸ್ಪರ್ಧೆ ಮಾಡಲಿದೆ.

ನಾನು ಏಪ್ರಿಲ್ ಹದಿನೆಂಟರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಬಯಸಿದ್ದೆ. ಆದರೆ ಪಕ್ಷದ ಕಾರ್ಯಕಾರಿ ಸಮಿತಿಯ ಸಲಹೆ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಈಗ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ತಮಿಳುನಾಡಿನ ಇಪ್ಪತ್ತು ಕ್ಷೇತ್ರಗಳಿಗೆ ಹಾಗೂ ಪುದುಚೆರಿಯಲ್ಲಿರುವ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.

ಕಮಲ್ ಹಾಸನ್ ರ ರಾಜಕೀಯ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಗುರುತುಕಮಲ್ ಹಾಸನ್ ರ ರಾಜಕೀಯ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಗುರುತು

ಇನ್ನು ಬಾಕಿ ಹತ್ತೊಂಬತ್ತು ಸ್ಥಾನಗಳಿಗೆ ಮಾರ್ಚ್ ಇಪ್ಪತ್ನಾಲ್ಕರಂದು ಕೊಯಮತ್ತೂರಿನಲ್ಲಿ ಹೆಸರು ಘೋಷಿಸಲಾಗುವುದು. ಅದರಲ್ಲಿ ಕೆಲವು 'ಮುಖ್ಯ ಹೆಸರುಗಳನ್ನು' ಸೇರಿಸಲಾಗುವುದು ಎಂದು ಕಮಲ್ ಹಾಸನ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

Lok sabha elections 2019: Kamal Haasan releases first list of his party

ಮೊದಲ ಪಟ್ಟಿಯಲ್ಲಿ ನಾಸರ್ ಅವರ ಪತ್ನಿ ಕಮೀಲಾ ನಾಸರ್ (ಚೆನ್ನೈ ಸೆಂಟ್ರಲ್), ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ.ಮೌರ್ಯ (ಚೆನ್ನೈ ಉತ್ತರ) ಹಾಗೂ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ಗುರುವಯ್ಯ (ನಾಗಪಟ್ಟಣಂ) ಹೆಸರುಗಳಿವೆ.

English summary
A retired IPS officer and a retired district judge are among the first list of 21 candidates announced by actor-turned politician Kamal Haasan’s Makkal Needhi Maiam for the Lok Sabha elections in Tamil Nadu and Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X