ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ರಾಜಕೀಯ : ಡಿಎಂಕೆ ಹಾಗೂ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ

|
Google Oneindia Kannada News

ಚೆನ್ನೈ, ಮಾರ್ಚ್ 05: ಮುಂಬರುವ ಲೋಕಸಭೆ ಚುನಾವಣೆಗಾಗಿ ತಮಿಳುನಾಡಿನಲ್ಲಿ ಮೈತ್ರಿ ಮಾಡಿಕೊಳ್ಳುವ ರಾಜಕೀಯ ಮುಗಿದಿದ್ದು, ಈಗ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಡಿಎಂಕೆ ಹಾಗೂ ಮಿತ್ರಪಕ್ಷಗಳ ನಡುವೆ ಯಾವ ಪಕ್ಷಕ್ಕೆ ಎಷ್ಟು ಸೀಟುಗಳು ಸಿಗಲಿವೆ ಎಂಬುದು ಇತ್ಯರ್ಥವಾಗಿದೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮಧ್ಯೆ ಮೈತ್ರಿಯು ತಮಿಳುನಾಡಿನಲ್ಲಿ ಅಂತಿಮಗೊಂಡ ಮರು ದಿನವೇ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನಲ್ಲಿ 39 ಹಾಗೂ ಪುದುಚೆರಿಯಲ್ಲಿ 1 ಸ್ಥಾನವಿದೆ.

Lok Sabha elections 2019: DMK contest in 20 seats, Congres and other get 10 each

ತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿ ಘೋಷಣೆತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿ ಘೋಷಣೆ

ಈ ಪೈಕಿ ಡಿಎಂಕೆ 25 ರಿಂದ 28 ಸ್ಥಾನಗಳಲ್ಲಿ ಸ್ಪರ್ಧಿಸುವ ಭರವಸೆ ಇದೆ. ಕಾಂಗ್ರೆಸ್ 16 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಯಿತ್ತು. ಆದರೆ, ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ಮಂಗಳವಾರ(ಮಾರ್ಚ್ 05) ಸುದ್ದಿಗಾರರೊಂದಿಗೆ ಮಾತನಾಡಿ, ಸೀಟು ಹಂಚಿಕೆ ವಿವರ ನೀಡಿದರು.

ಲೋಕಸಭಾ ಚುನಾವಣೆ ಹೊತ್ತಲ್ಲಿ ರಂಗೇರಲಿದೆ ತಮಿಳುನಾಡು ರಾಜಕೀಯ!ಲೋಕಸಭಾ ಚುನಾವಣೆ ಹೊತ್ತಲ್ಲಿ ರಂಗೇರಲಿದೆ ತಮಿಳುನಾಡು ರಾಜಕೀಯ!

ಕಾಂಗ್ರೆಸ್ ಗೆ 10 ಕ್ಷೇತ್ರ ಹಾಗೂ ಇತರೆ ಮಿತ್ರ ಪಕ್ಷಗಳಿಗೆ 10 ಕ್ಷೇತ್ರಗಳನ್ನು ಬಿಟ್ಟುಕೊಡಲಾಗುತ್ತದೆ. ಉಳಿದ 20 ಕ್ಷೇತ್ರಗಳಲ್ಲಿ ಡಿಎಂಕೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಯಾವ ಕ್ಷೇತ್ರವನ್ನು ಯಾವ ಪಕ್ಷ ಪ್ರತಿನಿಧಿಸಲಿದೆ ಎಂಬುದನ್ನು ಮಾರ್ಚ್ 07ರಂದು ಪ್ರಕಟಿಸಲಾಗುವುದು ಎಂದು ಹೇಳಿದರು. ಸಿಪಿಐ, ಸಿಪಿಎಂ, ವೈಕೋ ಎಂಡಿಎಂಕೆ, ವಿಡುದಲೈ ಚಿರುತೈಗಳ್ ಕಚ್ಚಿ, ಇಂದಿಯಾ ಜನನಾಯಕ ಕಚ್ಚಿ(ಐಜೆಕೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡಾ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಗೆ ಬೆಂಬಲ ವ್ಯಕ್ತಪಡಿಸುತ್ತಿವೆ.

English summary
DMK President MK Stalin: We have allocated 10 seats to our alliance partner Congress & other 10 have been given to our other alliance partners. DMK will contest on the remaining 20 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X