ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ- ಕಾಂಗ್ರೆಸ್ ಕ್ಷೇತ್ರ ಹಂಚಿಕೆ ಪಟ್ಟಿ ಪ್ರಕಟಿಸಿದ ಎಂಕೆ ಸ್ಟಾಲಿನ್

|
Google Oneindia Kannada News

ಚೆನ್ನೈ, ಮಾರ್ಚ್ 15: ಮುಂಬರುವ ಲೋಕಸಭೆ ಚುನಾವಣೆಗಾಗಿ ಡಿಎಂಕೆ ಹಾಗೂ ಮಿತ್ರಪಕ್ಷಗಳು ಎಲ್ಲೆಲ್ಲಿ ಸ್ಪರ್ಧಿಸಲಿವೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಏಪ್ರಿಲ್ 18ರ ಚುನಾವಣೆಗೆ ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರು ಶುಕ್ರವಾರದಂದು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮಧ್ಯೆ ಮೈತ್ರಿಯು ತಮಿಳುನಾಡಿನಲ್ಲಿ ಅಂತಿಮಗೊಂಡ ಮರು ದಿನವೇ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನಲ್ಲಿ 39 ಹಾಗೂ ಪುದುಚೆರಿಯಲ್ಲಿ 1 ಸ್ಥಾನವಿದೆ.

ಲೋಕಸಭಾ ಚುನಾವಣೆ ಹೊತ್ತಲ್ಲಿ ರಂಗೇರಲಿದೆ ತಮಿಳುನಾಡು ರಾಜಕೀಯ!ಲೋಕಸಭಾ ಚುನಾವಣೆ ಹೊತ್ತಲ್ಲಿ ರಂಗೇರಲಿದೆ ತಮಿಳುನಾಡು ರಾಜಕೀಯ!

ಕಾಂಗ್ರೆಸ್ ಗೆ 10 ಕ್ಷೇತ್ರ ಹಾಗೂ ಇತರೆ ಮಿತ್ರ ಪಕ್ಷಗಳಿಗೆ 10 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಉಳಿದ 20 ಕ್ಷೇತ್ರಗಳಲ್ಲಿ ಡಿಎಂಕೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಯಾವ ಕ್ಷೇತ್ರವನ್ನು ಯಾವ ಪಕ್ಷ ಪ್ರತಿನಿಧಿಸಲಿದೆ ಎಂಬುದನ್ನು ಮಾರ್ಚ್ 07ರಂದೇ ಪ್ರಕಟಿಸಬೇಕಿತ್ತು. ಆದರೆ, ಕಾರಣಾಂತರದಿಂದ ತಡವಾಗಿ ಪ್ರಕಟಿಸಲಾಗಿದೆ ಎಂದು ಸ್ಟಾಲಿನ್ ಹೇಳಿದರು. ಈ ಸಂದರ್ಭದಲ್ಲಿ ಟಿಎನ್ ಸಿಸಿ ಅಧ್ಯಕ್ಷ ಕೆಎಸ್ ಅಳಗಿರಿ, ಎಂಡಿಎಂಕೆ ಪಕ್ಷದ ವೈಕೋ ಅವರು ಉಪಸ್ಥಿತರಿದ್ದರು.

ಡಿಎಂಕೆ ಪಾಲಿನ 20 ಕ್ಷೇತ್ರಗಳು

ಡಿಎಂಕೆ ಪಾಲಿನ 20 ಕ್ಷೇತ್ರಗಳು

ಚೆನ್ನೈ ಉತ್ತರ, ಚೆನ್ನೈ ಸೆಂಟ್ರಲ್, ಚೆನ್ನೈ ದಕ್ಷಿಣ, ಶ್ರೀಪೆರಂಬದೂರು, ಕಾಂಚೀಪುರಂ(ಎಸ್ ಸಿ), ಕಲ್ಲಕುರಿಚಿ, ಅರಕ್ಕೋನಂ, ಕಡಲೂರ್, ತಿರುವಣ್ಣಾಮಲೈ ಹಾಗೂ ವೆಲ್ಲೂರ್, ಧರ್ಮಪುರಿ, ಸೇಲಂ, ನೀಲಗಿರೀಸ್(ಎಸ್ ಸಿ), ಪೊಲ್ಲಾಚಿ, ದಿಂಡಿಗಲ್, ತೂತ್ತುಕುಡಿ, ತೆಂಕಾಸಿ(ಎಸ್ ಸಿ), ತಿರುನಲ್ವೇಲಿ, ಮಯಿಲಡುಥುರೈ ಹಾಗೂ ತಂಜಾವೂರ್

ಕಾಂಗ್ರೆಸ್ ಪಾಲಿನ 10 ಕ್ಷೇತ್ರಗಳು

ಕಾಂಗ್ರೆಸ್ ಪಾಲಿನ 10 ಕ್ಷೇತ್ರಗಳು

ತಿರುವಳ್ಳುರ್, ಕೃಷ್ಣಗಿರಿ, ಅರಣಿ, ಕರೂರ್, ತಿರುಚಿರಪಲ್ಲಿ, ಶಿವಗಂಗೈ, ಥೇಣಿ, ವಿರುಧನಗರ್, ಕನ್ಯಾಕುಮಾರಿ ಹಾಗೂ ಪುದುಚೇರಿವ್

ಎಡ ಪಕ್ಷಗಳಿಗೂ ಟಿಕೆಟ್ ಹಂಚಿದ ಸ್ಟಾಲಿನ್

ಎಡ ಪಕ್ಷಗಳಿಗೂ ಟಿಕೆಟ್ ಹಂಚಿದ ಸ್ಟಾಲಿನ್

ಲಿಬರೇಷನ್ ಸಿಟಿಜನ್ ಪಕ್ಷ 2
ವಿಲ್ಲುಪುರಂ, ಚಿದಂಬರಂ
***
ಸಿಪಿಐ(ಎಂ) 2
ಮಧುರೈ, ಕೊಯಮತ್ತೂರು
**
ಸಿಪಿಐ 2
ನಾಗಪಟ್ಟಿಣಂ, ತಿರುಪುರ್

***

ಎಂಡಿಎಂ 1
ಈರೋಡ್
***
ಇಂಡಿಯನ್ ಮುಸ್ಲಿಂ ಲೀಗ್ 1
ರಾಮನಾಥಪುರ
***
ಕೊಂಗನಾಡು ಪೀಪಲ್ ನ್ಯಾಷನಲ್ ಪಾರ್ಟಿ 1
ನಾಮಕ್ಕಲ್
**
ಇಂಡಿಯನ್ ಡೆಮಾಕ್ರಾಟಿಕ್ ಪಕ್ಷ 1
ಪೆರಂಬಳೂರು

ಡಿಎಂಕೆ ಮಿತ್ರಪಕ್ಷಗಳು

ಡಿಎಂಕೆ ಮಿತ್ರಪಕ್ಷಗಳು

ಸಿಪಿಐ, ಸಿಪಿಎಂ, ವೈಕೋ ಎಂಡಿಎಂಕೆ, ವಿಡುದಲೈ ಚಿರುತೈಗಳ್ ಕಚ್ಚಿ, ಇಂದಿಯಾ ಜನನಾಯಕ ಕಚ್ಚಿ(ಐಜೆಕೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೂಡಾ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಗೆ ಬೆಂಬಲ ವ್ಯಕ್ತಪಡಿಸುತ್ತಿವೆ.

English summary
The opposition DMK Friday announced the names of the constituencies the party and its allies will contest from in Tamil Nadu and Puducherry in the April 18 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X