ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರೆಂಡಿಂಗ್ : ಮೋದಿ 'ಚೌಕಿದಾರ' ಅಭಿಯಾನದ ಬಗ್ಗೆ 'ಬಾಹ್ಮಣ' ಸ್ವಾಮಿ

|
Google Oneindia Kannada News

Recommended Video

ok sabha election 2019: ಮೋದಿ 'ಚೌಕಿದಾರ' ಅಭಿಯಾನದ ಬಗ್ಗೆ 'ಬಾಹ್ಮಣ' ಸ್ವಾಮಿ

ಚೆನ್ನೈ, ಮಾರ್ಚ್ 25: ಪ್ರಧಾನಿ ಮೋದಿ ಅವರ ಅಣತಿಯಂತೆ ದೇಶದೆಲ್ಲೆಡೆ ನಾನು 'ಚೌಕಿದಾರ' ಎಂದು ಟ್ವಿಟ್ಟರ್ ನಲ್ಲಿ ಹೆಸರು ಬದಲಾಯಿಸಿಕೊಂಡು ಟ್ರೆಂಡಿಂಗ್ ಮಾಡಲಾಯಿತು.

ಆದರೆ, ಬಿಜೆಪಿ ಹಿರಿಯ ಮುಖಂಡ, ಸುಬ್ರಮಣಿಯನ್ ಸ್ವಾಮಿ ಮಾತ್ರ ತಮ್ಮ ಟ್ವಿಟ್ಟರ್ ಖಾತೆ ಹೆಸರು ಬದಲಾಯಿಸಿಕೊಂಡಿರಲಿಲ್ಲ. ಈ ಬಗ್ಗೆ ತಮಿಳು ಸುದ್ದಿವಾಹಿನಿಯೊಂದರ ಜೊತೆ ಮಾತನಾಡುತ್ತಾ, ಚೌಕಿದಾರ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ವಾಮಿ ಹೇಳಿಕೊಂಡಿದ್ದಾರೆ.

ಮೋದಿ ಜೀ ನೀವು ಬಂದ್ರೆ 28ಕ್ಕೆ 28 ಬೆಂಬಲಿಗರಿಂದ ಟ್ವಿಟ್ಟರ್ ಟ್ರೆಂಡ್ಮೋದಿ ಜೀ ನೀವು ಬಂದ್ರೆ 28ಕ್ಕೆ 28 ಬೆಂಬಲಿಗರಿಂದ ಟ್ವಿಟ್ಟರ್ ಟ್ರೆಂಡ್

ಪ್ರಧಾನಿ ಮೋದಿ ಅವರು ಆರಂಭಿಸಿರುವ 'ನಾನು ಚೌಕೀದಾರ್'​ಎಂಬ ಅಭಿಯಾನ ಚುನಾವಣಾ ಪ್ರಚಾರ ತಂತ್ರವಾಗಿ ಬೆಳೆದಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸ್ವಾಮಿ ಹೇಳಿಕೆ ನೀಡಿದ್ದು, ನಾನು ಚೌಕಿದಾರನಲ್ಲ ಎಂದಿದ್ದಾರೆ.

ಲೋಕಸಭೆ ಚುನಾವಣೆ ವಿಶೇಷ ಪುಟ

ಮೈ ಭೀ ಚೌಕಿದಾರ್ ಅಭಿಯಾನದ ಮೂಲಕ ಎಲ್ಲರೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಇಂದು ನಾನು ಒಬ್ಬಂಟಿಯಲ್ಲ ಎಂದು ಮೋದಿ ಅವರು ಕರೆ ನೀಡಿದ್ದರು.

ಟ್ವಿಟ್ಟರಲ್ಲಿ ಸ್ವಾಮಿ ಚೌಕೀದಾರನಾಗಿರಲಿಲ್ಲ

ಟ್ವಿಟ್ಟರಲ್ಲಿ ಸ್ವಾಮಿ ಚೌಕೀದಾರನಾಗಿರಲಿಲ್ಲ

ಪ್ರಧಾನಿ ಮೋದಿ ಅವರ ಅಣತಿಯಂತೆ ದೇಶದೆಲ್ಲೆಡೆ ನಾನು 'ಚೌಕಿದಾರ' ಎಂದು ಟ್ವಿಟ್ಟರ್ ನಲ್ಲಿ ಹೆಸರು ಬದಲಾಯಿಸಿಕೊಂಡು ಟ್ರೆಂಡಿಂಗ್ ಮಾಡಲಾಯಿತು. ಆದರೆ, ಬಿಜೆಪಿ ಹಿರಿಯ ಮುಖಂಡ, ಸುಬ್ರಮಣಿಯನ್ ಸ್ವಾಮಿ ಮಾತ್ರ ತಮ್ಮ ಟ್ವಿಟ್ಟರ್ ಖಾತೆ ಹೆಸರು ಬದಲಾಯಿಸಿಕೊಂಡಿರಲಿಲ್ಲವೇಕೆ ಎಂಬ ಪ್ರಶ್ನೆಯನ್ನು ತಮಿಳು ಸುದ್ದಿವಾಹಿನಿಯ ಸಂದರ್ಶಕರೊಬ್ಬರು ಕೇಳಿದ್ದಾರೆ

ಚುನಾವಣಾ ಪ್ರಚಾರ ತಂತ್ರವಾದ ಅಭಿಯಾನ

ಚುನಾವಣಾ ಪ್ರಚಾರ ತಂತ್ರವಾದ ಅಭಿಯಾನ

2014ರಲ್ಲಿ ಚಾಯ್ ವಾಲ ಆಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ನಾನು ಈ ದೇಶದ ಚೌಕೀದಾರ (ಕಾವಲುಗಾರ) ಎಂದು ಹೇಳುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದರು.

ತಮ್ಮ ಟ್ವಿಟರ್ ಖಾತೆಯ ಹೆಸರಿನಲ್ಲೂ ಬದಲಾವಣೆ ಮಾಡಿ ಚೌಕೀದಾರ್ ನರೇಂದ್ರ ಮೋದಿ ಎಂದು ಮಾಡಿದರು. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ಮುಖ್ಯಮಂತ್ರಿಗಳು ಇದನ್ನೇ ಅನುಸರಿಸಿದರು.

ಸ್ವಾಮಿ ಹೇಳಿದ್ದೇನು?

ಸ್ವಾಮಿ ಹೇಳಿದ್ದೇನು?

ಸ್ವಾಮಿ ಹೇಳಿದ್ದೇನು?: ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಚೌಕೀದಾರ್ ಪ್ರಚಾರ ತಂತ್ರವನ್ನು ಟೀಕಿಸಿದ್ದಾರೆ. ಚೌಕೀದಾರ ಅಭಿಯಾನದ ಬಗ್ಗೆ ತಮಿಳಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ...
"ನಾನು ಬ್ರಾಹ್ಮಣ. ಚೌಕೀದಾರ ಆಗಲು ಸಾಧ್ಯವಿಲ್ಲ. ನಾನು ಹೇಳಿದಂತೆ ಚೌಕೀದಾರ ಮಾಡಬೇಕು. ಅವರೇಕೆ ತಮ್ಮ ಹೆಸರನ್ನು ಚೌಕೀದಾರ್​ಎಂದು ಬದಲಿಸಿಕೊಂಡರೋ ಗೊತ್ತಿಲ್ಲಾ" ಎಂದಿದ್ದಾರೆ.

ಟೀಕಿಸಲು ಹಿಂದೇಟು ಹಾಕದ ಸ್ವಾಮಿ

ಅಮೆರಿಕ, ಚೀನಾದ ನಂತರ ಭಾರತ ಅರ್ಥವ್ಯವಸ್ಥೆಯಲ್ಲಿ ಮೂರನೇ ಸ್ಥಾನದಲ್ಲಿದೆ ಆದರೆ, ಭಾರತವು ವಿಶ್ವದಲ್ಲಿ ಐದನೇ ಬೃಹತ್​ ಅರ್ಥವ್ಯವಸ್ಥೆ ಹೊಂದಿರುವ ದೇಶ ಎಂದು ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್​ ಜೇಟ್ಲಿ ಹೇಳುತ್ತಿದ್ದಾರೆ ಇದಕ್ಕೆ ಏನು ಹೇಳಬೇಕು ತಿಳಿಯುತ್ತಿಲ್ಲ ಎಂದು ಸ್ವಾಮಿ ಅವರು ತಮ್ಮ ಪಕ್ಷದ ನಾಯಕರಿಗೆ ಪಾಠ ಮಾಡಿದ್ದರು.

English summary
Subramanian Swamy said that he did not change his name to Chowkidar Subramanian Swamy because he is a Brahmin and he cannot be a Chowkidar. "Brahmins cannot be Chowkidars. It's a fact," he said. The video clip is now going viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X