ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಮೀನುಗಾರರಿಗೆ ಬಂಪರ್ ಗಿಫ್ಟ್

|
Google Oneindia Kannada News

ಚೆನ್ನೈ, ಮಾರ್ಚ್ 19: 2019ರ ಲೋಕಸಭೆ ಚುನಾವಣೆಗಾಗಿ ಆಡಳಿತಾರೂಢ ಎಐಎಡಿಎಂಕೆ ಪಕ್ಷವು ಪ್ರಣಾಳಿಕೆಯನ್ನು ಮಂಗಳವಾರದಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪ್ರಕಟಿಸಿದರು.

ಎಐಎಂಡಿಕೆ ಪ್ರಣಾಳಿಕೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ, ರೈತಾಪಿ ವರ್ಗ, ಸಣ್ಣ ಉದ್ದಿಮೆದಾರರು, ಮೀನುಗಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ರಾಜೀವ್ ಗಾಂಧಿ ಹಂತಕರ ಬಿಡುಗಡೆ, ಡಿಎಂಕೆ ಪ್ರಣಾಳಿಕೆರಾಜೀವ್ ಗಾಂಧಿ ಹಂತಕರ ಬಿಡುಗಡೆ, ಡಿಎಂಕೆ ಪ್ರಣಾಳಿಕೆ

ಡಿಎಂಕೆ ಪ್ರಣಾಳಿಕೆಯಂತೆ ನೀಟ್ ಪರೀಕ್ಷೆಯಲ್ಲಿ ವಿನಾಯಿತಿ, ರಾಜೀವ್ ಗಾಂಧಿ ಹಂತಕರ ಬಿಡುಗಡೆ ಬಗ್ಗೆ ಕೂಡಾ ಉಲ್ಲೇಖವಿದೆ. ಉಳಿದಂತೆ ಎಐಎಡಿಎಂಕೆ ಪ್ರಣಾಳಿಕೆಯ ಮುಖ್ಯಾಂಶಗಳು ಹೀಗಿವೆ:

Lok Sabha elections 2019 : AIADMK releases Election manifesto

* ಪವರ್ ಲೂಮ್, ಕೈಮಗ್ಗ ಉದ್ಯಮದವರ ಮೇಲಿನ ಜಿಎಸ್ಟಿ ಮನ್ನಾ
* ರಾಷ್ಟ್ರಮಟ್ಟದ ಬಡತನ ನಿರ್ಮೂಲನಾ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ತಿಂಗಳು 1,500 ರು
* ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಪ್ರತ್ಯೇಕ ರಾಜ್ಯದ ಮಾನ್ಯತೆ.
* ಕೃಷಿ, ಕೈಗಾರಿಕೆ, ಸೇವಾವಲಯದ ಸಾಲಗಳ ಬಡ್ಡಿದರ ಇಳಿಕೆ ಮಾಡುವಂತೆ ಆರ್ ಬಿಐ, ನಬಾರ್ಡ್ ಹಾಗೂ ಇನ್ನಿತರ ಬ್ಯಾಂಕ್ ಗಳಿಗೆ ಮನವಿ.
* ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ನಿಗದಿ ಪಡಿಸಿ, ಗ್ರಾಹಕ ಸ್ನೇಹಿಯಾಗುವಂತೆ ಮಾಡುವುದು.
* ರೀಟೈಲ್ ಕ್ಷೇತ್ರದಲ್ಲಿ ಎಫ್ ಡಿಎ ತರುವುದನ್ನು ನಿಲ್ಲಿಸುವಂತೆ ಕೇಂದ್ರಕ್ಕೆ ಮನವಿ.
* ತಮಿಳುನಾಡಿನ ಮೀನುಗಾರರ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ ಗಳ ಬಳಕೆಗೆ ಮನವಿ.
* ರಾಷ್ಟ್ರ ಮಟ್ಟದ ಮೀನುಗಾರರ ಕಲ್ಯಾಣ ನಿಧಿ ಸ್ಥಾಪನೆಗೆ ಆಗ್ರಹ.
* ಮೀನು ರಫ್ತು, ಸಂಸ್ಕರಣಾ ಘಟಕ ಸ್ಥಾಪನೆಗಾಗಿ ವಿಶೇಷ ಆರ್ಥಿಕ ವಲಯ ಸ್ಥಾಪನೆ
* ಮೀನುಗಾರರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ 7000 ರು ಮೀಸಲು
* ನೀಟ್ ಪರೀಕ್ಷೆಯಿಂದ ತಮಿಳುನಾಡಿನ ವಿದ್ಯಾರ್ಥಿಗಳಿಗೆ ವಿನಾಯಿತಿ
* ಖಾಸಗಿ ವಲಯದಲ್ಲೂ ಮೀಸಲಾತಿ ನಿಯಮ ಜಾರಿ
* ಶೇ 33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ.
* ಮಾನವ ಕಳ್ಳಸಾಗಣೆ, ಜೀತ ಪದ್ಧತಿ ನಿರ್ಮೂಲನೆಗಾಗಿ ರಾಷ್ಟ್ರಮಟ್ಟದ ಯೋಜನೆ.
* ತಿರುಚನಾಪಳ್ಳಿ, ಪುದುಕೊಟ್ಟೈ, ಶಿವಗಂಗಾ, ರಾಮನಾಥಪುರಂಗೆ ಅನುಕೂಲವಾಗುವ 700 ಕೋಟಿ ರು ವೆಚ್ಚದ ಕಾವೇರಿ ನದಿ ಯೋಜನೆ.

ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ

ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮಧ್ಯೆ ಮೈತ್ರಿಯು ತಮಿಳುನಾಡಿನಲ್ಲಿ ಅಂತಿಮಗೊಂಡ ಮರು ದಿನವೇ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಒಪ್ಪಂದ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನಲ್ಲಿ 39 ಹಾಗೂ ಪುದುಚೆರಿಯಲ್ಲಿ 1 ಸ್ಥಾನವಿದೆ. ಕಾಂಗ್ರೆಸ್ ಗೆ 10 ಕ್ಷೇತ್ರ ಹಾಗೂ ಇತರೆ ಮಿತ್ರ ಪಕ್ಷಗಳಿಗೆ 10 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಉಳಿದ 20 ಕ್ಷೇತ್ರಗಳಲ್ಲಿ ಡಿಎಂಕೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ.

English summary
Lok Sabha elections 2019 : A national-level poverty eradication scheme that would grant a sum of Rs 1,500 a month for every family below poverty line (BPL)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X