ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ಡಿಎಂಕೆ-ಕಾಂಗ್ರೆಸ್ ಜಯಭೇರಿ, ಆಡಳಿತ ಪಕ್ಷಕ್ಕೆ ಮುಖಭಂಗ

|
Google Oneindia Kannada News

ಚೆನ್ನೈ, ಮೇ 23: ಲೋಕಸಭೆ ಚುನಾವಣೆಯಲ್ಲಿ ಎಲ್ಲೆಡೆ ಬಿಜೆಪಿ ಜಯಭೇರಿ ಭಾರಿಸಿದೆ. ಆದರೆ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಅದರ ಕಳಪೆ ಸಾಧನೆ ಮುಂದುವರೆದಿದೆ.

ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಅವರ ಮೈತ್ರಿ ಪಕ್ಷ ಎಐಡಿಎಂಕೆ ಭಾರಿ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಮತ್ತು ಮಿತ್ರ ಪಕ್ಷ ಡಿಎಂಕೆಯು ಅತಿ ಹೆಚ್ಚಿನ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು 38 ರಲ್ಲಿ 23 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ಎಂಟು ಕ್ಷೇತ್ರಗಳಲ್ಲಿ ಗೆದ್ದಿದೆ. ಎರಡೂ ಸೇರಿ ಒಟ್ಟು 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

Lok sabha election results 2019: Tamil nadu result

ಆಡಳಿತ ಪಕ್ಷವಾದ ಎಐಡಿಎಂಕೆ ಪಕ್ಷವು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಮುನ್ನಡೆಯಲ್ಲಿದ್ದು, ಭಾರಿ ಮುಖಭಂಗ ಅನುಭವಿಸಿದೆ. ಇದು ಬಿಜೆಪಿ ಮಿತ್ರವೂ ಆಗಿದೆ.

ಇನ್ನುಳಿದಂತೆ ಸಿಪಿಐ ಎರಡು ಕ್ಷೇತ್ರಗಳಲ್ಲಿ, ಸಿಪಿಐ(ಎಂ) ಎರಡು ಕ್ಷೇತ್ರಗಳಲ್ಲಿ ಹಾಗೂ ಐಯುಎಂಎಲ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ.

ಆಡಳಿತ ಪಕ್ಷವಾದ ಎಐಡಿಎಂಕೆಗೆ ಈ ಸಾರ್ವತ್ರಿಕ ಚುನಾವಣೆಯು ಭಾರಿ ಹಿನ್ನಡೆಯನ್ನು ತಂದಿದ್ದು, ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ, ಕರುಣಾನಿಧಿ ಕಾಳವಾದ ಬಳಿಕ ಕೆಲವು ಗೊಂದಲದಲ್ಲಿದ್ದ ಡಿಎಂಕೆ ಪಕ್ಷಕ್ಕೆ ವಿಶ್ವಾಸ ತುಂಬಿದೆ. ಅದರ ಮೂಲಕ ಕಾಂಗ್ರೆಸ್‌ಗೆ ಸಹ ಲೋಕಸಭೆ ಯಲ್ಲಿ ಶಕ್ತಿ ತುಂಬುವ ಕೆಲಸ ಮಾಡಲಿದೆ.

English summary
Lok sabha election results 2019 : Tamil nadu results update in Kannada. congress alliance DMK gain big win. AIDMK only able to win in one constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X