• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಕಾಲ ಸಂಕಷ್ಟ, ತನ್ನ ಮನೆಯನ್ನೇ ದೋಚಿದ ನಟಿ

By ಚೆನ್ನೈ ಪ್ರತಿನಿಧಿ
|

ಚೆನ್ನೈ, ಸೆ. 16: ಕೊರೊನಾವೈರಸ್ ಆರ್ಥಿಕ ಸಂಕಷ್ಟ, ಲಾಕ್ಡೌನ್ ನಡುವೆಯೂ ಬಾಳ ಸಂಗಾತಿಯನ್ನು ಹುಡುಕಿಕೊಂಡಿದ್ದ ತಮಿಳು ಕಿರುತೆರೆ ನಟಿ ಸುಚಿತ್ರಾ ಸದ್ಯ ಕಳ್ಳಿ ಎಂಬ ಪಟ್ಟ ಹೊತ್ತು ನಾಪತ್ತೆಯಾಗಿದ್ದಾರೆ.

ಆರ್ಥಿಕ ಪರಿಸ್ಥಿತಿಗಳು ಯಾರಾನ್ನಾದರೂ ಒಂದು ಹೆಜ್ಜೆ ಕುಗ್ಗುವಂತೆ ಮಾಡುತ್ತದೆ ಎಂಬುದನ್ನು ಈ ಘಟನೆ ತಿಳಿಸುತ್ತದೆ. ತಮಿಳು ಚಿತ್ರರಂಗ, ಕಿರುತೆರೆಯ ನಟಿ ಸುಚಿತ್ರಾ ಅವರು ತಮ್ಮ ಪ್ರಿಯಕರನಿಗಾಗಿ ತಮ್ಮ ಮನೆಯನ್ನೇ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಲಾಕ್ಡೌನ್ ಸಂದರ್ಭದಲ್ಲಿ ಮಣಿಕಂದನ್ ಎಂಬವನ ಸ್ನೇಹ ಬೆಳೆಸಿ ಮದುವೆ ಮಾಡಿಕೊಂಡ ಸುಚಿತ್ರಾಗೆ ಹಣದ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಪತಿ ಬಗ್ಗೆ ಹೇಳಿಕೊಂಡಿದ್ದಳು.

ನಟಿ ಶ್ರಾವಣಿ ಆತ್ಮಹತ್ಯೆ ಕೇಸ್: ನಿರ್ಮಾಪಕ ಅಶೋಕ್ ರೆಡ್ಡಿ ಪೊಲೀಸರಿಗೆ ಶರಣು

ಸುಚಿತ್ರಾ ಹಾಗೂ ಮಣಿಕಂದನ್ ಇಬ್ಬರು ಮಣಿಕಂದನ್ ಮನೆಗೆ ತೆರಳಿದ್ದಾರೆ. ನೂತನ ದಂಪತಿಯನ್ನು ಮಣಿಕಂದನ್ ಅಪ್ಪ-ಅಮ್ಮ ಮೊದಲಿಗೆ ಮನೆಗೆ ಸೇರಿಸುವುದಿಲ್ಲ. ನಂತರ ಇಬ್ಬರನ್ನು ಒಳಗೆ ಬಿಟ್ಟುಕೊಂಡಿದ್ದಾರೆ.

ಕಳ್ಳತನವೇ ಮಾರ್ಗ:

ಕಳ್ಳತನವೇ ಮಾರ್ಗ:

ನಮ್ಮ ಸಂಕಷ್ಟಗಳು ದೂರಾಗಬೇಕಾದರೆ ನಿಮ್ಮ ಅಪ್ಪ ಅಮ್ಮ ಬಳಿ ಇರುವ ನಗ ನಾಣ್ಯ ಒಡವೆ ವಸ್ತ್ರಗಳನ್ನು ಕದಿಯಬೇಕು, ಕೇಳಿ ಪಡೆಯುವ ಸ್ಥಿತಿ ಈಗ ಉಳಿದಿಲ್ಲ ಎಂದು ಮಣಿಕಂದನ್ ಕಿವಿಯೂದಿದ್ದಾಳೆ ಸುಚಿತ್ರಾ.

ಸುಚಿತ್ರಾ ಹಾಕಿಕೊಟ್ಟ ಯೋಜನೆಯಂತೆ ಮಣಿಕಂದನ್ ತನ್ನ ಮನೆಯಲ್ಲೇ ಕನ್ನ ಹಾಕಿದ್ದಾನೆ. ಈ ಸಂದರ್ಭದಲ್ಲಿ ನಗರದಿಂದ ಹೊರಗೆ ಚಿತ್ರೀಕರಣವಿದೆ ಎಂದು ಸುಚಿತ್ರಾ ತೆರಳಿರುತ್ತಾಳೆ.

ಮನೆಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು

ಮನೆಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು

ಮನೆಯಲ್ಲಿ ಕಳ್ಳತನವಾಗಿದೆ ಎಂದು ಮಣಿಕಂದನ್ ಅಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ತಕ್ಷಣವೇ ಇದು ಮನೆ ಕಳ್ಳರದ್ದೇ ಕೃತ್ಯ ಎಂದು ತಿಳಿದು ಬಂದಿದೆ. ಸದ್ಯ ಮಣಿಕಂದನ್ ಸೆರೆ ಸಿಕ್ಕಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಸುಚಿತ್ರಾ ಇನ್ನೂ ನಾಪತ್ತೆಯಾಗಿದ್ದಾಳೆ.

ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟಿ.

ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟಿ.

ಸುಚಿತ್ರಾ ತಮಿಳು ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟಿ. ದೈವಮಗಳ್ ಹೆಸರಿನ ಸನ್ ಟಿವಿ ಧಾರಾವಾಹಿ ಮೂಲಕ ತಮಿಳು ಜನ ಮನೆ ಮನೆ ತಲುಪಿದ್ದಾಳೆ. ಆದರೆ, ಲಾಕ್ಡೌನ್ ನಿಂದಾಗಿ ಧಾರಾವಾಹಿ ಚಿತ್ರೀಕರಣ ನಿಂತಿತ್ತು. ಈ ಸಂದರ್ಭದಲ್ಲಿ ಸಿಕ್ಕವನೇ ಡ್ರೈವರ್ ಮಣಿಕಂದನ್. ಮಣಿಕಂದನ್ ಜೊತೆ ಕಾರಿನಲ್ಲಿ ಸುತ್ತಾಡುತ್ತಾ ಇಬ್ಬರು ಆತ್ಮೀಯರಾಗಿದ್ದರು.

  BSY ಪುತ್ರನಿಗೆ ರಾಜ್ಯ ರಾಜಕೀಯದಲ್ಲಿ ಏನು ಕೆಲಸ | Vijayendra | Oneindia Kannada
  ಚಾಲಕನಾಗಿದ್ದ ಮಣಿಕಂದನ್

  ಚಾಲಕನಾಗಿದ್ದ ಮಣಿಕಂದನ್

  ಚಿತ್ರರಂಗ ಸೇಸೇರುವ ಉದ್ದೇಶದಿಂದ ಚೆನ್ನೈಗೆ ಆಗಮಿಸಿದ್ದ ಮಣಿಕಂದನ್ ಅವಕಾಶ ಸಿಗದ ಕಾರಣ, ಧಾರಾವಾಹಿ ನಟಿಯರಿಗೆ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಸುಚಿತ್ರಾ ಜೊತೆಗಿನ ಕೆಲ ತಿಂಗಳ ಸ್ನೇಹ ಗಾಢವಾಗುತ್ತಿದ್ದಂತೆ ಪ್ರೇಮಿಗಳಾಗಿ ದಂಪತಿಗಳಾದರು ಕೊನೆಗೆ ಪಾರ್ಟ್ನರ್ ಇನ್ ಕ್ರೈಂ ಎನಿಸಿಕೊಂಡಿದ್ದಾರೆ. ಮನೆ ಕಳ್ಳತನದ ಬಗ್ಗೆ ತಿಳಿಯಲು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿದ್ದರು ಎಂದು ತಿಳಿದು ಬಂದಿದೆ.

  English summary
  Lockdown Effect: Tamil Actor Suchithra Robs Her Own House And Goes Absconding, Police Nabs Her Husband Chennai police have reportedly nabbed her husband.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X