• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರುಣಾನಿಧಿಗೆ ಲಕ್ಷಾಂತರ ಜನರ ಕಣ್ಣೀರಿನೊಂದಿಗೆ ವಿದಾಯ

|
   ಕರುಣಾನಿಧಿ ಅಂತಿಮ ವಿದಾಯಕ್ಕೆ ಸಕಲ ಸಿದ್ಧತೆ | ಚೆನ್ನೈ ನಲ್ಲಿ ಅಂತ್ಯ ಸಂಸ್ಕಾರ | Oneindia Kannada

   ಚೆನ್ನೈ, ಆಗಸ್ಟ್ 08: ಲಕ್ಷಾಂತರ ಜನರ ಕಂಬನಿ...ಯಾವುದೇ ಸಂಪ್ರದಾಯಿಕ ವಿಧಿವಿಧಾನಗಳು ಇಲ್ಲದೇ ಸಕಲ ಸರ್ಕಾರಿ ಗೌರವದೊಂದಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತ್ಯಕ್ರಿಯೆ ಮರೀನಾ ಬೀಚ್‌ನಲ್ಲಿ ಬುಧವಾರ ಸಂಜೆ 6.50ಕ್ಕೆ ನಡೆಯಿತು.

   94 ವರ್ಷದ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಂಜೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಡಿಎಂಕೆ ಪಕ್ಷದ ಲಕ್ಷಾಂತರ ಕಾರ್ಯಕರ್ತರು ಅಗಲಿದ ನಾಯಕರಿಗೆ ಕಣ್ಣೀರಿನ ವಿದಾಯ ಹೇಳಿದರು.

   ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!

   ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆಯಬೇಕು? ಎಂಬ ಕುರಿತು ಮಂಗಳವಾರ ಸಂಜೆಯಿಂದ ಚರ್ಚೆ ನಡೆದಿತ್ತು. ಮದ್ರಾಸ್ ಹೈಕೋರ್ಟ್ ಆದೇಶದಂತೆ ಮರೀನಾ ಬೀಚ್‌ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

   Live Updates: Tamil Nadu former CM M Karunanidhis last rites at Chennai

   ಅಂತ್ಯಸಂಸ್ಕಾರಕ್ಕೂ ಮುನ್ನ ಚೆನ್ನೈನ ರಾಜಾಜಿಹಾಲ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಲವು ಸಚಿವರು, ತಮಿಳು ಚಿತ್ರರಂಗದ ಹಲವು ನಟರು, ನಿರ್ಮಾಪಕರು ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

   ಎಂ ಕರುಣಾನಿಧಿ ಐದು ದಶಕಗಳ ರಾಜಕೀಯ ಬದುಕಿನ ಹಿನ್ನೋಟ

   ಕರುಣಾನಿಧಿ ಅವರನ್ನು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ಕಪ್ಪು ಕನ್ನಡಕದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' ಎಂದು, ಮತ್ತೊಂದು ಬದಿ ಕಲೈಂಗರ್ ಕರುಣಾನಿಧಿ, ಡಿಎಂಕೆ ಅಧ್ಯಕರು ಎಂದು ಬರೆಯಲಾಗಿತ್ತು.

   Read More

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Tamilnadu Former Chief Minister M.Karunanidhi laid to rest at Marina beach, Chennai next to Anna memorial on August 8, 2018.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more