ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಿದ್ಧ ಕುಮಾರನ್ ಸಿಲ್ಕ್ಸ್ ಮಳಿಗೆಗೆ ಬೀಗ ಜಡಿದ ಪಾಲಿಕೆ

|
Google Oneindia Kannada News

ಚೆನ್ನೈ, ಅಕ್ಟೋಬರ್ 20 : ಚೆನ್ನೈ ಮಹಾನಗರ ಪಾಲಿಕೆ ತಮಿಳುನಾಡಿನ ಪ್ರಸಿದ್ಧ ಕುಮಾರನ್ ಸಿಲ್ಕ್ಸ್ ಮಳಿಗೆಗೆ ಬೀಗ ಹಾಕಿದೆ. ಮಳಿಗೆಯಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮಾರಾಟವನ್ನು ನಡೆಸಲಾಗುತ್ತಿತ್ತು.

ಟಿ. ನಗರ ಪ್ರದೇಶದಲ್ಲಿರುವ ಕುಮಾರನ್ ಸಿಲ್ಕ್ಸ್ ಮಳಿಗೆಗೆ ಮಂಗಳವಾರ ಬೀಗ ಹಾಕಿ, ಸೀಲ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ ಬೇರೆ ಮಳಿಗೆಗಳನ್ನು ಸೀಲ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ 34 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ 34 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ

ಕುಮಾರನ್ ಸಿಲ್ಕ್ಸ್ ಮಳಿಗೆಯಲ್ಲಿ ನೂರಾರು ಜನರು ಖರೀದಿಗಾಗಿ ಮುಗಿಬಿದಿದ್ದರು. ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಕೋವಿಡ್ ಮಾರ್ಗಸೂಚಿ ಪಾಲನೆ ಆಗಿರಲಿಲ್ಲ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶಬರಿಮಲೆಗೆ ಬಂದಿದ್ದ ತಮಿಳುನಾಡು ಭಕ್ತನಿಗೆ ಕೊರೊನಾ ಸೋಂಕು ಶಬರಿಮಲೆಗೆ ಬಂದಿದ್ದ ತಮಿಳುನಾಡು ಭಕ್ತನಿಗೆ ಕೊರೊನಾ ಸೋಂಕು

Kumaran Silks Shop Sealed By Chennai Corporation

"ಮಳಿಗೆಗಳ ಮಾಲೀಕರು, ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ನಿಯಮ ಉಲ್ಲಂಘನೆ ಮಾಡಿದ ಅಂಗಡಿಗಳನ್ನು ಸೀಲ್ ಮಾಡಲಾಗುತ್ತದೆ" ಎಂದು ಚೆನ್ನೈ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ.

ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ ತಮಿಳುನಾಡು ಅನ್ ಲಾಕ್ 4.0: ಹೋಟೆಲ್, ರೆಸಾರ್ಟ್ ಪುನಾರಂಭಕ್ಕೆ ಅನುಮತಿ

ಕಳೆದ ಒಂದು ತಿಂಗಳಿನಿಂದ ಹಬ್ಬಗಳ ಹಿನ್ನಲೆಯಲ್ಲಿ ಜನರು ಬಟ್ಟೆಗಳ ಖರೀದಿಗೆ ಮುಗಿ ಬಿದ್ದಿದ್ದಾರೆ. ಮಹಾನಗರ ಪಾಲಿಕೆ ಹಲವು ಅಂಗಡಿಗಳ ಮೇಲೆ ದಾಳಿ ಮಾಡಿ ಅವುಗಳಿಗೆ ಬೀಗ ಹಾಕಿಸಿದೆ.

ದೀಪಾವಳಿ ಹಿನ್ನಲೆಯಲ್ಲಿ ಟಿ. ನಗರ ಪ್ರದೇಶದ ವಿವಿಧ ಮಳಿಗೆಯಲ್ಲಿ ಜನರು ತುಂಬಿಕೊಂಡಿದ್ದಾರೆ. ಹಬ್ಬಗಳ ಖರೀದಿಗಾಗಿ ಮುಗಿಬಿದ್ದಿದ್ದು, ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಆದ್ದರಿಂದ, ಪಾಲಿಕೆ ಕಾರ್ಯಾಚರಣೆಗೆ ಇಳಿದಿದೆ.

ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಸಮಿತಿ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿದ್ದು, "ಚೆನ್ನೈ ಪೊಲೀಸರ ಸಹಕಾರದಿಂದ ಹೆಚ್ಚು ಜನ ಸೇರದಂತೆ ತಡೆಯಲಾಗುತ್ತದೆ" ಎಂದು ಹೇಳಿದ್ದಾರೆ.

Recommended Video

Mysore Dasara : ಮೈಸೂರಿನಿಂದ ವಿಶೇಷ Trains ನಿಮಗೋಸ್ಕರ!! | Oneindia Kannada

ದೇಶದಲ್ಲಿಯೇ ಕೋವಿಡ್ ಸೋಂಕಿತರು ಹೆಚ್ಚು ಇರುವ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ತಮಿಳುನಾಡು ರಾಜ್ಯವಿದೆ. ಚೆನ್ನೈ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,90,949. ಸಕ್ರಿಯ ಪ್ರಕರಣಗಳ ಸಂಖ್ಯೆ 12,285.

English summary
T.Nagar area Kumaran Silks shop fail to follow Covid-19 safety norms Chennai corporation sealed garment store on October 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X