ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿಯಲ್ಲಿ 15 ಕೋಟಿ Mi ಫೋನ್ ಇದ್ದ ಟ್ರಕ್ ದೋಚಿ, ಪರಾರಿ

|
Google Oneindia Kannada News

ಕೃಷ್ಣಗಿರಿ(ತಮಿಳುನಾಡು), ಅ. 22: ಮುಂಬೈನಿಂದ ಚೆನ್ನೈಗೆ ತೆರಳುತ್ತಿದ್ದ ಟ್ರಕ್ ಮೇಲೆ ಕಣ್ಣಿಟ್ಟಿದ್ದ ಕಳ್ಳರು, ಕೃಷ್ಣಗಿರಿ ಹೆದ್ದಾರಿಯಲ್ಲಿ ಟ್ರಕ್ ನಿಲ್ಲಿಸಿ ದೋಚಿದ್ದಾರೆ. ಆ ಟ್ರಕ್ ತುಂಬಾ ಇದ್ದದ್ದು ಎಂಐ ಕಂಪನಿ ಮೊಬೈಲ್ ಫೋನ್, ಟ್ರಕ್ ನಲ್ಲಿದ್ದ ಒಟ್ಟು ಸರಕು ಮೌಲ್ಯ ಸುಮಾರು 15 ಕೋಟಿ ರು.

ಸರಕು ಸಾಗಣೆ ಪರವಾನಗಿ ಪಡೆದು ಕೊವಿಡ್ 19 ನಿಯಮಗನುಸಾರವಾಗಿ ಟ್ರಕ್ ಮುಂಬೈನಿಂದ ಚೆನ್ನೈ ಕಡೆಗೆ ತೆರಲುತ್ತಿದ್ದ ಟ್ರಕ್ ಅಡ್ಡಗಟ್ಟಿ ಟ್ರಕ್ ನಲ್ಲಿದ್ದ ಸುಮಾರು 1,400 ಶಿಯೋಮಿ ಮೊಬೈಲ್ ಫೋನ್ ಕದ್ದು ಪರಾರಿಯಾಗಿರುವ ಘಟನೆ ಕೃಷ್ಣಗಿರಿ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ.

ಆಂಧ್ರಪ್ರದೇಶದ ನಗಾರಿ ಕ್ಷೇತ್ರದಲ್ಲಿ ಮೊನ್ನೆ ಇದೇ ರೀತಿ ಹೆದ್ದಾರಿ ಕಳ್ಳತನ ನಡೆದಿತ್ತು. ಆದರೆ, ತಮಿಳುನಾಡಿನ ಹೆದ್ದಾರಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ ವರದಿಯಾಗಿದೆ.

Krishnagiri: Truck Carrying Mi Mobile Phones Robbed

ಮೇಲುಮಲೈ ಬಳಿ ಟ್ರಕ್ ತಡೆಗಟ್ಟಿದ ಬಗ್ಗೆ ಮಾಹಿತಿ ಸಿಕ್ಕಿದೆ. ನಂತರ ಟ್ರಕ್ ಚಾಲಕನನ್ನು ಬೆದರಿಸಿ, ಟ್ರಕ್ ಖಾಲಿ ಮಾಡಿ, ನಿರ್ಜನ ಪ್ರದೇಶದಲ್ಲಿ ಟ್ರಕ್ ಬಿಟ್ಟು ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಟ್ರಕ್ ನಿಲ್ಲಿಸಿರುವ ಜಾಗಕ್ಕೆ ಬಂದಿರುವ ಪೊಲೀಸರು, ಬೆರಳಚ್ಚು ತಜ್ಞರು ತನಿಖೆ ಆರಂಭಿಸಿದ್ದಾರೆ.

Recommended Video

CSK ತಂಡದ DJ Bravo ಇನ್ನುಳಿದ ಪಂದ್ಯದಲ್ಲಿ ಆಗೋದಿಲ್ಲ , ಏಕೆ | Oneindia Kannada

ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದ ಗ್ಯಾಂಗ್ ಬಳಿ ಅಪಾರ ಪ್ರಮಾಣದ ಸ್ಮಾರ್ಟ್ ಫೋನ್ ಗಳು ಪತ್ತೆಯಾಗಿತ್ತು. ಈ ಗ್ಯಾಂಗಿಗೂ ತಮಿಳುನಾಡಿನ ರಾಬರಿ ಪ್ರಕರಣಕ್ಕೂ ಸಾಮ್ಯತೆ ಕಂಡು ಬಂದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಕೃಷ್ಣಗಿರಿ ಪೊಲೀಸರು ಹೇಳಿದ್ದಾರೆ.

English summary
Krishnagiri: A gang robbed a truck looted items worth Rs 15 crore in Krishnagiri highway. Truck was was carrying mi mobile phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X