ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೃತ್ಕುಕ್ಷಿಯಲ್ಲಿ ರಂಧ್ರವಿರುವ ಈ ಪುಟ್ಟ ಮಗುವಿನ ಜೀವ ನಿಮ್ಮ ಕೈಯಲ್ಲಿದೆ

Google Oneindia Kannada News

ಈ ಪುಟಾಣಿ ಮಗು ಈ ಜಗತ್ತಿಗೆ ಆಗಮಿಸಿ ಕೇವಲ 25 ದಿನಗಳಾಗಿವೆ. ಮಕ್ಕಳು ಅಳುತ್ತಲೇ ಹುಟ್ಟುತ್ತವೆ. ಆದರೆ, ಹರ್ಷನ್ ಎಂಬ ಈ ಮಗು ಹುಟ್ಟಿನಿಂದಲೇ ಅಳುತ್ತಲೇ ಇದೆ. ಮಗುವಿನ ಅನಾರೋಗ್ಯದ ಕಾರಣದಿಂದಾಗಿ ಪೋಷಕರು ಕೂಡ ಕಣ್ಣೀರ ಕಡಲಿನಲ್ಲಿ ಕೈ ತೊಳೆಯುವಂತಾಗಿದೆ.

ಮಗುವಿನ ಹೃತ್ಕುಕ್ಷಿಯಲ್ಲಿ ರಂಧ್ರವುಂಟಾಗಿ (LARGE SUBPULMONIC VENTRICULAR SEPTAL DEFECT) ತೊಂದರೆ ಇರುವುದರಿಂದ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಕೊಯಮತ್ತೂರಿನಲ್ಲಿರುವ ಕುಪ್ಪುಸ್ವಾಮಿ ನಾಯ್ಡು ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗೆ ಕನಿಷ್ಠ 3 ಲಕ್ಷ ರುಪಾಯಿಯ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಮಗುವಿನ ತಂದೆ ಲೋಡ್ ಏರಿಸುವ ಮತ್ತು ಇಳಿಸುವ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದು, ಇಷ್ಟು ಹಣವನ್ನು ಹೊಂದಿಸಲು ಹರಸಾಹಸಪಡುತ್ತಿದ್ದಾನೆ. ಮಗು ಬದುಕುಳಿಯಬೇಕಿದ್ದರೆ ಚಿಕಿತ್ಸೆಗೆ ತಕ್ಷಣ ಹಣದ ಅವಶ್ಯಕತೆಯಿದೆ.

ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಕೆಲವೇ ದಿನಗಳ ಹಿಂದೆ ಈ ಜಗತ್ತಿಗೆ ಆಗಮಿಸಿರುವ ಮಗು ಬದುಕಬೇಕಿದ್ದರೆ ದಾನಿಗಳು ತಮ್ಮ ಹೃದಯಾಂತರಾಳದಿಂದ ದಾನ ಮಾಡಬೇಕಾಗಿದೆ. ಹಲವಾರು ಜನರು ಹಣ ನೀಡಲು ಆರಂಭಿಸಿದ್ದು, ಕನಿಷ್ಠ 3 ಲಕ್ಷ ರುಪಾಯಿ ಜಮಾ ಆಗಬೇಕಿದೆ.

ಮಗುವಿನ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಹೃದಯತಜ್ಞ ಡಾ. ಎಂ ಕಲ್ಯಾಣಸುಂದರಂ ಅವರು ನೀಡಿರುವ ಎಲ್ಲ ದಾಖಲೆಗಳನ್ನು ಈ ವೆಬ್ ತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ದಾನ ಮಾಡಬೇಕೆಂದುಕೊಂಡರು ದಾಖಲೆಗಳನ್ನು ಪರಿಶೀಲಿಸಿ, ನಂತರ ದಾನ ಮಾಡಬಹುದು.

ಹುಟ್ಟಿದಾಕ್ಷಣ ಮಕ್ಕಳಲ್ಲಿ ಅಲ್ಪಸ್ವಲ್ಪ ಆರೋಗ್ಯ ಏರುಪೇರಾಗುವುದು ಸಹಜ. ನಂತರ ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ದಿನಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಬರುತ್ತವೆ. ಆದರೆ, ಈ ಮಗು ಹರ್ಷನ್ ಅನುಕ್ಷಣವೂ ಉಸಿರಿಗಾಗಿ ಒದ್ದಾಡುತ್ತಿದೆ, ಹೃದಯ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಗುವಿಗಾಗಿ ಕೈಬಿಚ್ಚಿ ದಾನ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X