ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧಿತ ನಕ್ಸಲರು ಕೇರಳದ ಮೇಲೆ ಕಣ್ಣಿಟ್ಟಿದ್ದರು

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಮೇ 6 : ಕೊಯಮತ್ತೂರಿನಲ್ಲಿ ಸೋಮವಾರ ರಾತ್ರಿ ಬಂಧಿಸಿದ ಐವರು ನಕ್ಸಲರ ವಿಚಾರಣೆ ಮುಂದುವರೆದಿದ್ದು, ಕೇರಳದಲ್ಲಿ ಸಂಘಟನೆಯನ್ನು ಬಲಪಡಿಸಲು ಯೋಜನೆ ರೂಪಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಜಾರ್ಖಂಡ್‌ನಲ್ಲಿನ ನಕ್ಸಲರು ಇವರಿಗೆ ಬೆಂಬಲ ನೀಡುತ್ತಿದ್ದರು ಎಂಬುದು ಬಹಿರಂಗಗೊಂಡಿದೆ.

ಬಂಧಿತನಾದ ನಕ್ಸಲ್ ನಾಯಕ ರೂಪೇಶ್ ಮಾರ್ಗದರ್ಶನದಲ್ಲಿ ಕೇರಳದ ಉತ್ತರ ಭಾಗದಲ್ಲಿ ಚಟುವಟಿಕೆಯನ್ನು ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲಿನ ರೈತರು ಮತ್ತು ಆದಿವಾಸಿಗಳ ನೆರವು ಪಡೆದು ಹೋರಾಟ ಆರಂಭಿಸಲು ನಕ್ಸಲರು ಸಿದ್ಧತೆ ನಡೆಸಿದ್ದರು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. [ಕೊಯಮತ್ತೂರಿನಲ್ಲಿ ಸಿಕ್ಕಿಬಿದ್ದ ನಕ್ಸಲರು ಯಾರು?]

Coimbatore

ಕೇರಳದಲ್ಲಿ ಕ್ಯಾಂಪ್ : ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕೇರಳದಲ್ಲಿ ಕ್ಯಾಂಪ್ ತೆರೆದು ಹೋರಾಟ ಆರಂಭಿಸಲು ನಕ್ಸಲರು ಸಿದ್ಧವಾಗಿದ್ದರು. ಜಾರ್ಖಂಡ್‌ನಲ್ಲಿನ ನಕಲ್ಸರು ಇದಕ್ಕೆ ಸಹಹಾರ ನೀಡುತ್ತಿದ್ದರು ಎಂದು ತನಿಖೆ ವೇಳೆ ಬಂಧಿತ ನಕ್ಸಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.[ಕೊಯಮುತ್ತೂರಿನಲ್ಲಿ ಐವರು ಶಂಕಿತ ನಕ್ಸಲರ ಬಂಧನ]

ಪಾಲಕ್ಕಾಡ್, ಕೊಚ್ಚಿ ಮುಂತಾದ ಸ್ಥಳಗಳಲ್ಲಿ ಭೂಮಿ ಇಲ್ಲದ ಜನರನ್ನು ಗುರುತಿಸಿ ಹೋರಾಟ ಸಂಘಟಿಸಲು ಸಿದ್ಧತೆ ನಡೆದಿತ್ತು. ಆದಿವಾಸಿಗಳು ವಾಸ ಮಾಡುತ್ತಿರುವ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸುವ ಸರ್ಕಾರ ನಿರ್ಧಾರದ ವಿರುದ್ಧ ಹೋರಾಟ ಸಂಘಟಿಸಲು ಸಂಚು ರೂಪಿಸಿದ್ದರು.

ಮಂಗಳೂರು ಲಿಂಕ್ : ಮಂಗಳೂರಿನಲ್ಲಿಯೂ ಹೋರಾಟ ಆರಂಭಿಸಲು ನಕ್ಸಲರು ಸಿದ್ಧತೆ ಮಾಡಿಕೊಂಡಿದ್ದರು. ಮಂಗಳೂರಿನಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಆರ್ಥಿಕ ಚಟುವಟಿಗಳ ಮಾಹಿತಿ ಸಂಗ್ರಹಿಸಿದ್ದ ನಕ್ಸಲರು ರೈತರನ್ನು ಸರ್ಕಾರ ಲೂಟಿ ಮಾಡುತ್ತಿದೆ ಎಂದು ರೈತರನ್ನು ಸಂಘಟಿಸಲು ಸಿದ್ಧತೆ ಆರಂಭಿಸಿದ್ದರು.

ಕರ್ನಾಟಕ ಮತ್ತು ಕೇರಳದಲ್ಲಿ ದೊಡ್ಡದಾದ ನಕ್ಸಲ್ ದಾಳಿ ನಡೆದಿಲ್ಲ. ಆದರೆ, ಕರಪತ್ರಗಳನ್ನು ಹಂಚಿ ಮುಂದಿನ ದಿನಗಳಲ್ಲಿ ದೊಡ್ಡದಾದ ದಾಳಿ ಮಾಡುವ ಎಚ್ಚರಿಕೆಯನ್ನು ನಕ್ಸಲರು ರವಾನಿಸಿದ್ದರು. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಿಸಲು ನಕ್ಸಲರು ಸಿದ್ಧವಾಗಿದ್ದರು.

English summary
The investigations being conducted following the arrest of five maoists in Coimbatore has opened up the Pandora’s box and startling details about their operations especially in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X