• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಕೊರೊನಾ ಪಾಸಿಟಿವ್

|

ಚೆನ್ನೈ, ಆಗಸ್ಟ್ 03: ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಈ ಕುರಿತು ಸ್ವತಃ ಕಾರ್ತಿ ಚಿದಂಬರಂ ಸೋಮವಾರ ಟ್ವಿಟ್ಟರ್‌ನಲ್ಲಿ ಖಚಿತಪಡಿಸಿದ್ದು, ''ನನಗೆ ಕೊವಿಡ್ ಪಾಸಿಟಿವ್ ಬಂದಿದೆ. ಲಘು ಲಕ್ಷಣಗಳನ್ನು ಹೊಂದಿದ್ದೇನೆ'' ಎಂದು ತಿಳಿಸಿದ್ದಾರೆ.

ಅಮಿತ್ ಶಾಗೆ ಕೊರೊನಾ, ಮೋದಿ ಸೇರಿ ಕೇಂದ್ರ ನಾಯಕರಿಗೆ ಆತಂಕ!

''ನಾನು ಕೊರೊನಾ ವೈರಸ್‌ ಪಾಸಿಟಿವ್ ಹೊಂದಿದ್ದೇನೆ. ಸೌಮ್ಯ ಲಕ್ಷಣಗಳನ್ನು ಹೊಂದಿದ್ದು ವೈದ್ಯರ ಸಲಹೆಯಂತೆ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಇತ್ತೀಚಿಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಪ್ರೋಟೋಕಾಲ್ ಅನುಸರಿಸಿಲು ನಾನು ಒತ್ತಾಯಿಸುತ್ತೇನೆ'' ಎಂದು ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಇತ್ತೀಚಿಗಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊವಿಡ್ ಸೋಂಕು ತಗುಲಿತ್ತು. ಭಾನುವಾರ ಸಂಜೆ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಕೊರೊನಾ ಸೋಂಕು ದೃಢವಾಗಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಣ್ ಗೂ ಕೊವಿಡ್ ತಗುಲಿತ್ತು. ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಗೂ ಸೋಂಕು ಅಂಟಿಕೊಂಡಿದೆ.

English summary
Karti Chidambaram, Congress MP and son of former union minister P.Chidambaram, tests positive for COVID19, goes into home-quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X