ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗ ಎಂ.ಕೆ.ಸೂರಪ್ಪ ತ.ನಾಡಿನ ಅಣ್ಣಾ ವಿ.ವಿ. ಉಪಕುಲಪತಿಯಾಗಿ ನೇಮಕ

|
Google Oneindia Kannada News

ಚೆನ್ನೈ, ಏಪ್ರಿಲ್ 5 : ಎರಡು ವರ್ಷಗಳ ನಂತರ ತಮಿಳುನಾಡಿನ ಅಣ್ಣಾ ವಿಶ್ವಾವಿದ್ಯಾಲಯಕ್ಕೆ ಉಪ ಕುಲಪತಿಗಳನ್ನು ನೇಮಕ ಮಾಡಲಾಗಿದೆ. ಕನ್ನಡಿಗರಾದ ಎಂ.ಕೆ.ಸೂರಪ್ಪ ಅವರನ್ನು ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ನೇಮಿಸಿ, ಅಲ್ಲಿನ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ಆದೇಶ ಹೊರಡಿಸಿದ್ದಾರೆ.

ಐಐಎಂಬಿಯಲ್ಲಿ ಹಿಂದಿ ಪ್ರಮಾಣ ಪತ್ರದ ಕಿರಿಕ್ಐಐಎಂಬಿಯಲ್ಲಿ ಹಿಂದಿ ಪ್ರಮಾಣ ಪತ್ರದ ಕಿರಿಕ್

ನೇಮಕವಾದ ದಿನದಿಂದ ಮೂರು ವರ್ಷದ ಅವಧಿಗೆ ಸೂರಪ್ಪ ಅವರು ಉಪ ಕುಲಪತಿ ಆಗಿರುತ್ತಾರೆ ಎಂದು ತಮಿಳುನಾಡು ರಾಜಭವನದ ಪ್ರಕಟಣೆ ತಿಳಿಸಿದೆ. 2016 ಮೇನಲ್ಲಿ ರಾಜಾರಾಮ್ ಅವರು ಅಣ್ಣಾ ವಿಶ್ವವಿದ್ಯಾಲಯದ ಉಪಕುಲಪತಿ ಸ್ಥಾನದಿಂದ ನಿರ್ಗಮಿಸಿದ ನಂತರ ಯಾರ ನೇಮಕಾತಿಯೂ ಆಗಿರಲಿಲ್ಲ.

MK Surappa

ಸೂರಪ್ಪ ಅವರು ಐಐಟಿ- ರೋಪರ್ ನ ನಿರ್ದೇಶಕರಾಗಿ 2009ರಿಂದ 2015 ಕಾರ್ಯ ನಿರ್ವಹಿಸಿದ್ದರು. ಮೆಟಲರ್ಜಿಕಲ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

governor Order

ಮೂವತ್ತು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಸೂರಪ್ಪ ಅವರು, ಆ ಪೈಕಿ ಇಪ್ಪತ್ನಾಲ್ಕು ವರ್ಷ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಹೆಸರಲ್ಲಿ ನೂರೈವತ್ತರಷ್ಟು ಸಂಶೋಧನಾ ಲೇಖನಗಳು ಪ್ರಕಟವಾಗಿವೆ.

English summary
Tamil Nadu Anna University has finally got a vice-chancellor. Tamil Nadu Governor Banwarilal Purohit on Thursday appointed former director of IIT-Ropar M K Surappa as the vice-chancellor of the university for a period of 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X