• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕಾದಲ್ಲಿ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾದರೆ ಭಾರತದಲ್ಲಿ ಸಂಭ್ರಮ!

|

ಚೆನ್ನೈ, ನವೆಂಬರ್.08: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಗೆಲುವಿನ ಸಂಭ್ರಮವು ಭಾರತದವರೆಗೂ ವ್ಯಾಪಿಸಿದೆ. ತಮಿಳುನಾಡಿನಲ್ಲಿ ಇರುವ ಕಮಲಾ ಹ್ಯಾರಿಸ್ ಅವರ ಪೂರ್ವಜರ ಗ್ರಾಮದಲ್ಲಿ ಗೆಲುವನ್ನು ವಿಶೇಷವಾಗಿ ಆಚರಿಸಲಾಗಿದೆ.

ತಮಿಳುನಾಡಿನ ತಿರುವಾರೂರ್ ಜಿಲ್ಲೆಯ ತುಳಸೇಂದ್ರಪುರಂ ಗ್ರಾಮದಲ್ಲಿ ಕಮಲ ಹ್ಯಾರಿಸ್ ಅವರ ಗೆಲುವಿನ ಸಂಭ್ರಮವಾಗಿ ವಿಶೇಷ ರಂಗೋಲಿಯನ್ನು ಚಿತ್ರಿಸಲಾಗಿತ್ತು. "ಕಮಲಾ ಹ್ಯಾರಿ ಅವರಿಗೆ ಶುಭಾಷಯಗಳು, ಅವರು ನಮ್ಮ ಗ್ರಾಮದ ಹೆಮ್ಮೆಯಾಗಿದ್ದು, ಅಮೆರಿಕನ್ನರಿಗೆ ವಂದನೆಗಳು" ಎಂದು ರಂಗೋಲಿಯಲ್ಲಿ ಬರೆಯಲಾಗಿದೆ.

ಅಮೆರಿಕದ ಉಪಾಧ್ಯಕ್ಷೆಯಾಗಿ ಕಮಲಾ, ಹೊಸ ಇತಿಹಾಸ ನಿರ್ಮಾಣ

ಅಮೆರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಪೂರ್ವಜರು ಮೂಲತಃ ತಮಿಳುನಾಡಿನ ತುಳಲೇಂದ್ರಪುರಂ ಗ್ರಾಮದವರು ಎನ್ನಲಾಗಿದೆ. ಈ ಹಿನ್ನೆಲೆ ಗ್ರಾಮದಲ್ಲಿ ಕಮಲಾ ಹ್ಯಾರಿಸ್ ಅವರ ಗೆಲುವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ತುಳಸೇಂದ್ರಪುರಂನಲ್ಲಿ ಸಿಹಿ ಹಂಚಿಕೆ:

ಅಮೆರಿಕಾದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ಹಲವು ದಾಖಲೆಗಳನ್ನು ರೂಪಿಸಿರುವ ಕಮಲಾ ಹ್ಯಾರಿಸ್ ಅವರ ಗ್ರಾಮದ ಹಲವೆಡೆ ಪೋಸ್ಟರ್ ಬ್ಯಾನರ್ ಗಳನ್ನು ಹಾಕಲಾಗಿದೆ. ಇದರ ಜೊತೆಗೆ ಗ್ರಾಮದಾದ್ಯಂತ ಜನರಿಗೆ ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸಲಾಗಿದೆ.

ಕಮಲಾ ಹ್ಯಾರಿಸ್ ತಂದೆ ಜಮೈಕಾದವರಾಗಿದ್ದರೆ, ತಾಯಿ ಶ್ಯಾಮಲಾ ಗೋಪಾಲನ್ ಭಾರತದ ತಮಿಳುನಾಡು ಮೂಲದವರಾಗಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಿಂದ 320 ಕಿಲೋಮೀಟರ್ ದೂರದಲ್ಲಿರುವ ಗ್ರಾಮವೇ ತುಳಸೇಂದ್ರಪುರಂ. ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳುವ ಮೊದಲು ಶ್ಯಾಮಲಾ ಗೋಪಾಲನ್ ಅವರು ತಮಿಳುನಾಡಿನ ಇದೇ ತುಳಸೇಂದ್ರಪುರಂ ಗ್ರಾಮದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

English summary
Kamala Harris' Ancestral Village In Tamil Nadu Celebrates Her Win With Special Rangoli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X