ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಎಡಿಎಂಕೆ, ಡಿಎಂಕೆ ಜತೆ ಬಿಲ್‌ಕುಲ್ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ಕಮಲ್ ಹಾಸನ್

|
Google Oneindia Kannada News

ಚೆನ್ನೈ, ಡಿಸೆಂಬರ್ 21:ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಡಿಎಂಕೆ ಹಾಗೂ ಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಕಾಂಚಿಪುರಂನಲ್ಲಿಂದು ಮಾತನಾಡಿದ ಅವರು, ತಮ್ಮ ಪಕ್ಷ ಆರ್ಥಿಕ ಕ್ರಾಂತಿಯ ಕಡೆಗೆ ಗಮನ ಹರಿಸಬೇಕಾಗಿದೆ ಎಂದರು.

ರಜನಿಕಾಂತ್ ಜತೆ ಕಮಲ್ ರಾಜಕೀಯ ಕಮಾಲ್ ಸಾಧ್ಯತೆರಜನಿಕಾಂತ್ ಜತೆ ಕಮಲ್ ರಾಜಕೀಯ ಕಮಾಲ್ ಸಾಧ್ಯತೆ

ಅಂತರ್ಜಾಲವನ್ನು ಮಾನವ ಮೂಲಭೂತ ಹಕ್ಕಾಗಿ ಘೋಷಿಸಲಾಗುವುದು, ಉಚಿತವಾಗಿ ಎಲ್ಲಾ ಮನೆಗಳಿಗೂ 200 ಎಂಬಿಪಿಎಸ್ ಇಂಟರ್ ನೆಟ್ ಸೌಕರ್ಯವನ್ನು ಒದಗಿಸಲಾಗುವುದು ಎಂದು ಕಮಲ್ ಹಾಸನ್ ತಿಳಿಸಿದರು.

ಭ್ರಷ್ಟಾಚಾರ ಮತ್ತು ಒತ್ತಡದಿಂದಾಗಿ ಐಎಎಸ್ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂತೋಷ್ ಬಾಬು ತಮ್ಮ ಪಕ್ಷವನ್ನು ಸೇರಿಕೊಂಡಿದ್ದು, ವಿಧಾನಸಭಾ ಚುನಾವಣೆ ನಂತರ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಕಲ್ಯಾಣದ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ಮನೆಬಾಗಿಲಿಗೆ ಸೇವೆ

ಮನೆಬಾಗಿಲಿಗೆ ಸೇವೆ

ಸೇವೆಗಳನ್ನು ಜನರ ಬಾಗಿಲಿಗೆ ಕೊಂಡೊಯ್ಯಲಾಗುವುದು, ಎಲ್ಲಾ ಮನೆಗಳನ್ನೂ ಡಿಜಿಟಲೀಕರಣಗೊಳಿಸಲಾಗುವುದು, ನಗರ ಪ್ರದೇಶದಲ್ಲಿನ ಮೂಲಸೌಕರ್ಯಗಳನ್ನು ಹಳ್ಳಿಗಳಿಗೂ ಕಲ್ಪಿಸಲಾಗುವುದು, ಇದರಿಂದಾಗಿ ವಲಸೆ ಸಮಸ್ಯೆ ತಪ್ಪಲಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಹೇಳಿದರು.

ರಜನೀಕಾಂತ್ ಜತೆ ಮೈತ್ರಿ?

ರಜನೀಕಾಂತ್ ಜತೆ ಮೈತ್ರಿ?

ತಮಿಳುನಾಡಿನ ಜನರಿಗೆ ನಮ್ಮ ಮೈತ್ರಿಯಿಂದ ಸಹಾಯವಾಗುತ್ತದೆ ಎನ್ನುವುದಾದರೆ ನಾನು ರಜನಿಕಾಂತ್ ಅವರೊಂದಿಗೆ ಕೈಜೋಡಿಸುವ ಆಲೋಚನೆ ಮಾಡುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದರು. ನಮ್ಮಿಬ್ಬರ ಸಿದ್ಧಾಂತ, ಚಿಂತನೆಗಳು ಹೊಂದಾಣಿಕೆಯಾದರೆ, ಆ ಹೊಂದಾಣಿಕೆ ತಮಿಳುನಾಡಿನ ಜನರಿಗೆ ಸಹಾಯಕ್ಕೆ ಬರುತ್ತದೆ ಎಂದಾದರೆ, ನಾನು ಸಹಕಾರ ನೀಡಲು ಸಿದ್ಧ ಎಂದಿದ್ದರು.

ಜನವರಿಯಲ್ಲಿ ರಜನೀಕಾಂತ್ ವಪಕ್ಷದ ಚಿಹ್ನೆ ಘೋಷಣೆ

ಜನವರಿಯಲ್ಲಿ ರಜನೀಕಾಂತ್ ವಪಕ್ಷದ ಚಿಹ್ನೆ ಘೋಷಣೆ

ಜನವರಿ 2021ಕ್ಕೆ ನಟ ರಜನಿಕಾಂತ್ ಕೂಡ ಪಕ್ಷದ ಹೆಸರು, ಚಿಹ್ನೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ಇಬ್ಬರೂ ತಮಿಳು ನಟರು ರಾಜಕೀಯವಾಗಿ ಒಂದಾದರೆ, ಚುನಾವಣೆಯ ಫಲಿತಾಂಶ, ತಮಿಳುನಾಡಿನ ರಾಜಕೀಯ ಬೆಳವಣಿಗೆ ಬಗ್ಗೆಯೂ ಅಪಾರ ನಿರೀಕ್ಷೆ ವ್ಯಕ್ತಗೊಂಡಿದೆ.

2019ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿತ್ತು

2019ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿತ್ತು

2019ರ ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಪಕ್ಷವು ಮೊದಲಬಾರಿಗೆ ಚುನಾವಣೆ ಎದುರಿಸಿತ್ತು. ತಮಿಳುನಾಡಿನ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಒಟ್ಟಾರೆ ಶೇ.3.77ರಷ್ಟು ಮತವನ್ನು ಗಳಿಸಿತ್ತು. ಪಕ್ಷದ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ತೃತೀಯ ರಂಗವೇನಾದರೂ ರಚನೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಅದು ಯಾವಾಗ ಸಂಭವಿಸುತ್ತದೆ ಎಂದು ಬಹಿರಂಗ ಪಡಿಸುವುದು ಅಸಾಧ್ಯ ಎಂದು ಹೇಳಿದ್ದಾರೆ.

English summary
In a recent development, Makkal Needhi Maiam (MNM) chief Kamal Haasan on Monday said that his party would not forge any alliance with Kazhagam parties, apparently refering to DMK and AIADMK, in the forthcoming Tamil Nadu Assembly Polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X