ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಯಲ್ಲಿ ಯೂನಿವರ್ಸಲ್ ಸ್ಟಾರ್ ಸ್ಪರ್ಧೆಯಿಲ್ಲ

|
Google Oneindia Kannada News

ಚೆನ್ನೈ, ಮಾರ್ಚ್ 25: ಅಭಿಮಾನಿಗಳ ಪಾಲಿನ 'ಯೂನಿವರ್ಸಲ್ ಸ್ಟಾರ್' ಕಮಲ್ ಹಾಸನ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಲೋಕಸಭೆ ಹಾಗೂ 18 ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಗಾಗಿ ಕಮಲ್ ಅವರ ಮಕ್ಕಳ್ ನೀದಿ ಮಯ್ಯಂ(ಎಂಎನ್ಎಂ) ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.

ಭಾನುವಾರ ರಾತ್ರಿ ನಡೆದ ಬೃಹತ್ ಸಮಾವೇಶದಲ್ಲಿ ಕಮಲ್ ಹಾಸನ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದರು. ಪ್ರತಿ ಕ್ಷೇತ್ರಕ್ಕೂ ಹೆಚ್ಚೆಚ್ಚು ಆಕಾಂಕ್ಷಿಗಳಿದ್ದರು ಹಾಗೂ ತಮಗಿಂತ ಹೆಚ್ಚಿನ ಅರ್ಹತೆಯುಳ್ಳ ಅನುಭವಿಗಳಿದ್ದರು ಹೀಗಾಗಿ, ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಲ್ಲ ಎಂದರು.

Kamal Haasan not to contest LS elections 2019

ಕಮಲ್ ಹಾಸನ್ ರ ಮಕ್ಕಳ್ ನೀದಿ ಮೈಯ್ಯಂ ಪಕ್ಷದ ಮೊದಲ ಪಟ್ಟಿ ಬಿಡುಗಡೆಕಮಲ್ ಹಾಸನ್ ರ ಮಕ್ಕಳ್ ನೀದಿ ಮೈಯ್ಯಂ ಪಕ್ಷದ ಮೊದಲ ಪಟ್ಟಿ ಬಿಡುಗಡೆ

ವರ್ಷದ ಹಿಂದೆ ಎಂಎನ್ಎಂ ಸ್ಥಾಪಿಸಿದ ಕಮಲ್ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಯೇ ಪಕ್ಷದ ಮುಖ್ಯ ಉದ್ದೇಶ ಎಂದು ಘೋಷಿಸಿದ್ದರು.

ಕಮಲ್ ಹಾಸನ್ ರ ರಾಜಕೀಯ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಗುರುತು ಕಮಲ್ ಹಾಸನ್ ರ ರಾಜಕೀಯ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಗುರುತು

ಈ ಬಾರಿಯ ಲೋಕಸಭೆ ಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆಗಾಗಿ ಅಡಳಿತಾರೂಢ ಎಐಎಡಿಎಂಕೆ ಹಾಗೂ ವಿಪಕ್ಷ ಡಿಎಂಕೆ ಜತೆಯಾಗಲಿ ಕಮಲ್ ಪಕ್ಷವು ಮೈತ್ರಿ ಮಾಡಿಕೊಂಡಿಲ್ಲ. ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುತ್ತಾ ಬಂದಿರುವ ಕಮಲ್ ಅವರು ಬಿಜೆಪಿ ಜತೆ ಮೈತ್ರಿ ಎಂದಿಗೂ ಸಾಧ್ಯವಿಲ್ಲ ಎಂದು ಕಮಲ್ ಸ್ಪಷ್ಟಪಡಿಸಿದ್ದಾರೆ. (ಪಿಟಿಐ)

English summary
Makkal Needhi Maiam (MNM) president Kamal Haasan did not figure in the second and final list of candidates for the Lok Sabha election and bypolls to the 18 assembly constituencies in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X