ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಚುನಾವಣೆ: 25,000 ರೂ ಕೊಟ್ಟು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

|
Google Oneindia Kannada News

ಚೆನ್ನೈ, ಫೆಬ್ರುವರಿ 16: ವಿಧಾನಸಭೆ ಚುನಾವಣೆಗೆ ತಮಿಳುನಾಡು ಸಜ್ಜಾಗುತ್ತಿದ್ದು, ಮಕ್ಕಳ ನೀದಿಮಯ್ಯಂ ಮುಖ್ಯಸ್ಥ ಕಮಲ ಹಾಸನ್ ಪಕ್ಷದಿಂದ ಸ್ಪರ್ಧಿಸಲು ಬಯಸುವ ಟಿಕೆಟ್ ಆಕಾಂಕ್ಷಿಗಳು ಪಕ್ಷದ ವೆಬ್ ಸೈಟ್ ಮೂಲಕ ಅರ್ಜಿ ಪಡೆದುಕೊಳ್ಳಲು ಸೂಚಿಸಿದ್ದಾರೆ.

ಇದೇ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ತಮಿಳುನಾಡು ಹಾಗೂ ಪುದುಚೆರಿ ಚುನಾವಣೆಗಳು ನಡೆಯುವ ನಿರೀಕ್ಷೆಯಿದ್ದು, ಫೆಬ್ರುವರಿ 21ರ ನಂತರ ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಪಡೆಯಬಹುದು ಎಂದು ಸೂಚಿಸಿದ್ದಾರೆ.

ಕಮಲ ಹಾಸನ್ ಮಕ್ಕಳನೀದಿಮಯ್ಯಂ ಪಕ್ಷದ ಕಮಲ ಹಾಸನ್ ಮಕ್ಕಳನೀದಿಮಯ್ಯಂ ಪಕ್ಷದ "ಕಾಯಂ ಅಧ್ಯಕ್ಷ"

ಈ ಅರ್ಜಿಗೆ 25,000ರೂಗಳನ್ನು ನಿಗದಿಪಡಿಸಿದ್ದು, ಹಣ ಹಿಂದಿರುಗಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಪಕ್ಷೇತರ ಸದಸ್ಯರೂ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಅರ್ಜಿಗೆ ಒತ್ತು ನೀಡಿರುವ ಪಕ್ಷ, ಅರ್ಹತೆ ಇದ್ದ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

Kamal Haasan Calls For Online Applications For Aspirants To Contest In Tamil Nadu Assembly Election 2021

"ಪಕ್ಷದ ಖರ್ಚಿಗೆ ಈ ಹಣವನ್ನು ಬಳಸಿಕೊಳ್ಳಲಾಗುವುದು. ಈ ಅರ್ಜಿಯು ಒಪ್ಪಿತವಾಗಲಿ, ಒಪ್ಪಿತವಾಗದೇ ಇರಲಿ, ಹಣವನ್ನು ವಾಪಸ್ ನೀಡಲಾಗುವುದಿಲ್ಲ. ಪ್ರಾಮಾಣಿಕ ಪಕ್ಷಕ್ಕೆ ನಿಮ್ಮ ಕೊಡುಗೆಯಾಗುತ್ತದೆ" ಎಂದು ಕಮಲ ಹಾಸನ್ ಹೇಳಿದ್ದಾರೆ.

ಅರ್ಜಿಯನ್ನು ಪಕ್ಷದ ಕಚೇರಿ ಹಾಗೂ ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ 234 ಸೀಟುಗಳಿಗೆ ಹಾಗೂ ಪುದುಚೆರಿಯಲ್ಲಿ 30 ಸೀಟುಗಳಿಗೆ ಚುನಾವಣೆ ನಡೆಯಲಿದೆ.

English summary
Makkal Needhi Maiam founder Kamal Haasan asked aspirants who like to contest in Tamil Nadu and Puducherry Assembly elections to get applications online,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X