• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೀಟ್ ವಿರೋಧಿಸಿ ಸೂರ್ಯ ಟ್ವೀಟ್ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ಪತ್ರ

|

ಚೆನ್ನೈ, ಸೆ .14: ವೈದ್ಯಕೀಯ ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ National Eligibility-cum-Entrance Test(NEET)ವಿರುದ್ಧ ತಮಿಳನಾಡಿನ ಸಿನಿಮಾ ನಟ ಸೂರ್ಯ ಶಿವಕುಮಾರ್ ದನಿಯೆತ್ತಿದ್ದಾರೆ. ದೇಶದಲ್ಲಿ 15 ಲಕ್ಷಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಪರೀಕ್ಷೆ ಬರೆಯುವ ವೇಳೆಗೆ ತಮಿಳುನಾಡಿನಲ್ಲಿ ಮೂವರು ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ನೊಂದ ನಟ ಸೂರ್ಯ ಈ ಬಗ್ಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ನ್ಯಾಯಾಂಗ ಪ್ರಕ್ರಿಯೆಗೆ ವಿರುದ್ಧವಾದ ಹೇಳಿಕೆಗಳಿಗೆ ಎಂದು ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ದೂರಿನ ರೂಪದಲ್ಲಿ ಪತ್ರ ಬರೆಯಲಾಗಿದೆ.

ನಟ ಸೂರ್ಯ ನೀಡಿದ್ದ ಹೇಳಿಕೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎಸ್.ಎಂ. ಸುಬ್ರಮಣಿಯಂ ಅವರು ಮುಖ್ಯ ನ್ಯಾಯಮೂರ್ತಿ ಅಮರೇಶ್ವರ ಪ್ರತಾಪ್ ಸಾಹಿಗೆ ಪತ್ರ ಬರೆದಿದ್ದಾರೆ.

NEET: ಸಂಸತ್ ಆವರಣದಲ್ಲಿ ಡಿಎಂಕೆ ಸಂಸದರ ಪ್ರತಿಭಟನೆ

ತಮಿಳು ನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ವೈಫಲ್ಯದ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದ್ಯಾರ್ಥಿಗಳ ಪ್ರಾಣ ತೆಗೆಯುವ ಪರೀಕ್ಷೆ, ಆ ಮೂವರ ಕುಟುಂಬಕ್ಕಾಗಿರುವ ನೋವಿನ ಬಗ್ಗೆ ಸೂರ್ಯ ಬರೆದುಕೊಂಡಿದ್ದರು. ಕೋಚಿಂಗ್, ಇಂಟರ್ನೆಟ್ ಇಲ್ಲದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೊವಿಡ್ 19 ಸಂದರ್ಭದಲ್ಲಿ ದಿನನಿತ್ಯದ ಜೀವನ ಸಾಗಿಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಪರೀಕ್ಷೆ ಅಗತ್ಯವೇನಿತ್ತು ಎಂದು ವ್ಯವಸ್ಥೆ ವಿರುದ್ಧ ದನಿಯೆತ್ತಿದ್ದರು.

 ಕೊವಿಡ್ 19 ಸಂದರ್ಭದಲ್ಲಿ ಕೋರ್ಟ್

ಕೊವಿಡ್ 19 ಸಂದರ್ಭದಲ್ಲಿ ಕೋರ್ಟ್

ಮುಂದುವರೆಯುತ್ತಾ, ಕೊವಿಡ್ 19 ಸಂದರ್ಭದಲ್ಲಿ ಕೋರ್ಟ್ ನಡೆಸಲೇಬೇಕು ಎಂದು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯವನ್ನು ನೀಡುವ ನ್ಯಾಯಾಲಯ, ವಿದ್ಯಾರ್ಥಿಗಳನ್ನು ಮಾತ್ರ ನಿರ್ಭಯವಾಗಿ ಹೋಗಿ ಪರೀಕ್ಷೆಗಳನ್ನು ಬರೆಯುವಂತೆ ಆದೇಶಿಸುತ್ತದೆ ಎಂಬರ್ಥದಲ್ಲಿ ಬರೆದಿದ್ದಾರೆ ಎಂದು ಜಸ್ಟೀಸ್ ಸುಬ್ರಮಣಿಯಂ ಹೇಳಿದ್ದಾರೆ. ಆದರೆ, ಇದು ತಮಿಳು ಭಾಷೆಯಲ್ಲಿರುವ ಪತ್ರದ ಕೆಟ್ಟ ಇಂಗ್ಲೀಷ್ ಅನುವಾದ ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.

 ಇಂಗ್ಲೀಷ್ ಭಾಷೆ ವಿವಾದಿತ ಪ್ಯಾರಾಗ್ರಾಫ್

ಇಂಗ್ಲೀಷ್ ಭಾಷೆ ವಿವಾದಿತ ಪ್ಯಾರಾಗ್ರಾಫ್

ತಮಿಳಿನಿಂದ ಇಂಗ್ಲೀಷ್ ಭಾಷೆಗೆ ಗೂಗಲ್ ಟಾನ್ಸ್ ಲೇಟ್ ಬಳಸಿದರೆ ಬಂದ ಫಲಿತಾಂಶ: "Fear for life due to fear of Corona The court which administers justice through video conferencing orders students to go and write exams without fear" ಎಂದು ಬರುತ್ತದೆ. ಜೀವ ಭಯ ವಿದ್ಯಾರ್ಥಿಗಳಿಗೆ ಇಲ್ಲವೇ ಎಂಬುದನ್ನು ಉಲ್ಲೇಖಿಸಿ ಜಸ್ಟೀಸ್ ಪತ್ರದಲ್ಲಿ ಬರೆದಿದ್ದಾರೆ.

ತಮಿಳುನಾಡು: ಮೆಡಿಕಲ್ ಕೋರ್ಸ್ ಆಕಾಂಕ್ಷಿಗಳ ಆತ್ಮಹತ್ಯೆ

 ನ್ಯಾಯಾಂಗ ನಿಂದನೆ ಆರೋಪ

ನ್ಯಾಯಾಂಗ ನಿಂದನೆ ಆರೋಪ

ಅದೇನೇ ಇರಲಿ, ನ್ಯಾಯಾಲಯದ ಪ್ರಕ್ರಿಯೆ, ಆದೇಶವನ್ನು ಗೌರವಿಸದೆ ಸೂರ್ಯ ಈ ರೀತಿ ಹೋಲಿಕೆ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಅವರಿಗೆ ನ್ಯಾಯಾಧೀಶರು, ಕೋರ್ಟ್ ಮೇಲೆ ನಂಬಿಕೆಯಿಲ್ಲ ಎಂದೆನಿಸುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಆದರೆ, ಜಸ್ಟೀಸ್ ಸುಬ್ರಮಣಿಯಂ ಆರೋಪದ ಬಗ್ಗೆ ಸೂರ್ಯ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ #TNStandWithSuriya ಹಾಗೂ #SURIYAagainstNEET ಟ್ರೆಂಡ್ ನಲ್ಲಿವೆ.

  ಪ್ರಧಾನಿ ಕಚೇರಿಗೆ ಹೊಸ ಸೇರ್ಪಡೆ Amrapali IAS | Oneindia Kannada
   ಅಡ್ವೋಕೇಟ್ ಜನರಲ್ ವಿಜಯ್ ಪ್ರತಿಕ್ರಿಯೆ

  ಅಡ್ವೋಕೇಟ್ ಜನರಲ್ ವಿಜಯ್ ಪ್ರತಿಕ್ರಿಯೆ

  ಮುಂದೇನು?: ಆ ಟ್ವೀಟ್, ಸೂರ್ಯ ನೀಡಿರುವ ವಿಡಿಯೋ ಬೈಟ್ ಹಾಗೂ ಈ ಪತ್ರವನ್ನು ಆಧಾರವಾಗಿಟ್ಟುಕೊಂಡು ಯಾರಾದರೂ ನ್ಯಾಯಾಂಗ ನಿಂದನೆ ಅರ್ಜಿ ಹಾಕಿದರೆ ಪ್ರಕರಣವನ್ನು ಹೈಕೋರ್ಟ್ ಪರಿಗಣಿಸಲಿದೆ. ಅಥವಾ ಅಗತ್ಯ ಬಿದ್ದರೆ ಕೋರ್ಟ್ ಸುಮೋಟೊ ಕೇಸ್ ತೆಗೆದುಕೊಳ್ಳಬಹುದು. ಆದರೆ, ಸದ್ಯಕ್ಕಂತೂ ಇದು ಪತ್ರ ವ್ಯವಹಾರ, ಇದನ್ನು ಮುಖ್ಯ ನ್ಯಾಯಾಧೀಶರು ಹೇಗೆ ಪರಿಗಣಿಸುತ್ತಾರೋ ಕಾದು ನೋಡಬೇಕಿದೆ ಎಂದು ತಮಿಳುನಾಡಿನ ಅಡ್ವೋಕೇಟ್ ಜನರಲ್ ವಿಜಯ್ ನಾರಯಣ್ ಹೇಳಿದ್ದಾರೆ.

  ನೀಟ್ ವಿರುದ್ಧ 'ಸುಪ್ರೀಂ' ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

  English summary
  Justice SM Subramaniam of the Madras High Court has urged Chief Justice AP Sahi to initiate criminal contempt proceedings against Tamil actor Suriya over his comments on the conduct of the National Eligibility Entrance Test (NEET) amid the COVID-19 pandemic.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X