• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈನ ಅಮೆರಿಕಾ ದೂತವಾಸ ಕಾನ್ಸಲ್ ಜನರಲ್ ಹುದ್ದೆಗೆ ಜ್ಯುಡಿತ್‌ ರೇವಿನ್

|

ಚೆನ್ನೈ, ಸೆಪ್ಟೆಂಬರ್.06: ಚೆನ್ನೈನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕಾನ್ಸುಲ್ ಜನರಲ್ ಆಗಿ ಜ್ಯುಡಿತ್‌ ರೇವಿನ್ ಸೆ.06ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಕೊರೊನಾವೈರಸ್ ಸೋಂಕು ಸಾಂಕ್ರಾಮಿಕದ ಈ ಐತಿಹಾಸಿಕ ಕಷ್ಟದ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಭಾಗ್ಯವಾಗಿದೆ ಎಂದು ಕಾನ್ಸುಲ್ ಜನರಲ್ ರೇವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚೆನ್ನೈಗೆ ಬರುವ ಮೊದಲು, ಕಾನ್ಸುಲ್ ಜನರಲ್ ರೇವಿನ್ ಪೆರುವಿನ ಲಿಮಾದಲ್ಲಿರುವ ಯು.ಎಸ್. ರಾಯಭಾರ ಕಚೇರಿಯಲ್ಲಿ ಸಾರ್ವಜನಿಕ ವ್ಯವಹಾರಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು ವಾಷಿಂಗ್ಟನ್ ಡಿ.ಸಿ.ಯ ಹೈಟಿ ವಿಶೇಷ ಸಂಯೋಜಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕಂಡು ಕೇಳರಿಯದ ಹಾನಿ ಮಾಡುತ್ತೇವೆ: ಭಾರತಕ್ಕೆ ಚೀನಾ ಖಡಕ್ ಎಚ್ಚರಿಕೆ

ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ಡೆಪ್ಯುಟಿ ಕಲ್ಚರಲ್ ಆಫೀಸರ್ ಆಗಿ ಬಳಿಕ ಕಲ್ಚರಲ್ ಆಫೀಸರ್ ಆಗಿ ಕೆಲಸ ಮಾಡಿರುವ ಅನುಭವವು ರೇವಿನ್ ಅವರಿಗಿದೆ. ಈ ಅವಧಿಯಲ್ಲಿ ಅಮೆರಿಕಾ ಸರ್ಕಾರದ ಅತ್ಯಂತ ದೊಡ್ಡ ವಿನಿಮಯ ಕಾರ್ಯಕ್ರಮ ನಿರ್ವಹಿಸಿದ ಹಿರಿಮೆ ಅವರಿಗೆ ಸೇರಿದ್ದಾಗಿದೆ.

2003ರಲ್ಲಿ ಸೇವೆ ಆರಂಭಿಸಿದ ರೇವಿನ್:

ಡೊಮಿನಿಕಲ್ ರಿಪಬ್ಲಿಕ್ ಸ್ಯಾಂಟೋ ಡೊಮಿಂಗೊ, ಸುಡಾನ್ ಖರ್ತೋಂ, ಕ್ಯಾಮರೂನ್ ಯುವಾಂಡೆ ಹಾಗೂ ಮೆಕ್ಸಿಕೋನ ಸಿಯುಡಾಡ್ ಜುವಾರೆನ್ ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. 2003ರಲ್ಲಿ ಸ್ಟೇಟ್ ಡಿಪಾರ್ಟ್ ಮೆಂಟ್ ನಲ್ಲಿ ಸೇವೆ ಆರಂಭಿಸಿದ ರೇವಿನ್ ಅವರು 2003-2005ರಲ್ಲಿ ಮೆಕ್ಸಿಕೋ ಸಿಯುಡಾಡ್ ಜುವಾರೆನ್ ದೂತಾವಾಸದಲ್ಲಿ ವೈಸ್ ಕಾನ್ಸಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ಸಂಪಾದಕಿ, ಅನುವಾದಕಿ ಮತ್ತು ಪತ್ರಕರ್ತೆಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಅನುಭವವೂ ಇವರಿಗಿದೆ.

English summary
JUDITH RAVIN Takes Leadership As U.S. Consul General In Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X