ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಕೆ ಅಣ್ಣಾಮಲೈ

|
Google Oneindia Kannada News

ಚೆನ್ನೈ, ಜುಲೈ 8: ನಿವೃತ್ತ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಪೊಲೀಸ್ ಹುದ್ದೆ ತೊರೆದು ರಾಜಕೀಯ ರಂಗ ಪ್ರವೇಶಿಸಿದ್ದು ಗೊತ್ತಿರಬೇಕಲ್ಲ. ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೂ, ಕರ್ನಾಟಕದಲ್ಲಿ ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈಗೆ ಬಿಜೆಪಿ ಮಹತ್ವದ ಹುದ್ದೆ ನೀಡಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

Recommended Video

ಅಣ್ಣಾಮಲೈ ಪೊಲೀಸ್ ಕೆಲಸ ಬಿಟ್ಟಿದ್ದು ಇದೆ ಕಾರಣಕ್ಕೆ | Oneindia Kannada

ತಮಿಳುನಾಡಿನ ಕರೂರು ಮೂಲದ ಕೆ ಅಣ್ಣಾಮಲೈರನ್ನು ಚುನಾವಣೆಗೂ ಮುನ್ನ ತಮಿಳುನಾಡು ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ ಹಾಲಿ ಅಧ್ಯಕ್ಷ ಡಾ ಲೋಗನಾಥನ್ ಮುರಗನ್ ಅವರು ಮೋದಿ ಸಚಿವ ಸಂಪುಟ ಸೇರಿದ್ದರಿಂದ ಅಣ್ಣಾಮಲೈಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವರಾಗಿ ಡಾ. ಲೋಗನಾಥನ್ ಮುರುಗನ್ ಅವರಿಂದು ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರ ಸಮಕ್ಷಮದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಧಾನ ಮಂತ್ರಿ ಅವರು ತಮ್ಮ ಸಂಪುಟದಲ್ಲಿ ತಮಿಳುನಾಡಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಿರುವುದಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ

ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಅಣ್ಣಾಮಲೈಗೆ ಅರವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ರಾಜ್ಯದ ಬಿಜೆಪಿ ಉಸ್ತುವಾರಿ ಸಿ. ಟಿ. ರವಿ ಸೇರಿದಂತೆ ಹಲವು ನಾಯಕರು ಅಣ್ಣಾಮಲೈ ಪರವಾಗಿ ಪ್ರಚಾರ ನಡೆಸಿದ್ದರು. ಅಣ್ಣಾಮಲೈ 68 ಸಾವಿರ ಮತಗಳನ್ನು ಪಡೆದು ಸೋಲು ಕಂಡಿದ್ದರು.

JP Nadda appointed K Annamalai as State president of Tamil Nadu.

"ಅರವಕುರುಚಿ ಕ್ಷೇತ್ರದಲ್ಲಿ 68,000 ಮತಗಳನ್ನು ನೀಡಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಜೊತೆಗೆ ಎಂದಿಗೂ ಇರುತ್ತೇನೆ" ಎಂದು ಸೋಲಿನ ಬಳಿಕ ಟ್ವೀಟ್‌ನಲ್ಲಿ ಅಣ್ಣಾಮಲೈ ತಿಳಿಸಿದ್ದರು.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ ಅವರು 2019ರ ಮೇ 28ರಂದು ಐಜಿ- ಡಿಜಿಪಿ ಹಿರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ಕಳಿಸಿ ಐಪಿಎಸ್ ಹುದ್ದೆ ತೊರೆದಿದ್ದರು. 2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.

English summary
BJP president JP Nadda has appointed former Karnataka IPS officer K Annamalai as State president of Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X