ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆ ಜಯಲಲಿತಾಗೆ ಸೇರಿದ 900 ಕೋಟಿ ಆಸ್ತಿ ದೀಪಾ, ದೀಪಕ್ ಪಾಲು

|
Google Oneindia Kannada News

ಚೆನ್ನೈ, ಮೇ 27: "ಪೋಯಸ್ ಗಾರ್ಡನ್ ನನಗೆ ಹಾಗೂ ದೀಪಾಗೆ ಸೇರಿದ್ದು. ಬೇರೆ ಯಾರೂ ಅದರ ಮಾಲೀಕತ್ವ ಸ್ಥಾಪಿಸಲು ಸಾಧ್ಯವಿಲ್ಲ. ನಾನು ಹಾಗೂ ದೀಪಾ ಮಾತ್ರ ನನ್ನ ಅತ್ತೆಯ ಆಸ್ತಿಗೆ ಹಕ್ಕುದಾರರು" ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಸೋದರಳಿಯ ದೀಪಕ್ ಪ್ರತಿಪಾದಿಸಿದ್ದು ಫಲ ನೀಡಿದೆ.

ತಮಿಳರ ಪಾಲಿನ 'ಅಮ್ಮ' ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಹಾಗೂ ದೀಪಕ್ ಕುಮಾರ್ ಅವರ ಪಾಲಿಗೆ ಜಯಲಲಿತಾ ಅವರು ಸುಮಾರು 900 ಕೋಟಿ ರು ಮೌಲ್ಯದ ಆಸ್ತಿ ಲಭಿಸಿದೆ. ಇವರಿಬ್ಬರನ್ನು ಜಯಲಲಿತಾರ class II legal heirs ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗ

ಜೆ ದೀಪಾ ಹಾಗೂ ಜೆ ದೀಪಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠದ ಜಸ್ಟೀಸ್ ಎನ್ ಕಿರುಬಕರಣ್ ಹಾಗೂ ಅಬ್ದುಲ್ ಖುದ್ದೂಸ್ ಅವರು ಈ ಮಹತ್ವದ ಆದೇಶ ನೀಡಿದ್ದಾರೆ. ಈ ಮೂಲಕ ಹಕ್ಕು ಪ್ರತಿಪಾದಿಸಿ ಅರ್ಜಿ ಹಾಕಿದ್ದ ಎಐಎಡಿಎಂಕೆಯ ಕೆ ಪುಗಳೇಂದಿ ಹಾಗೂ ಪಿ ಜಾನಕಿರಾಮನ್ ಅವರಿಗೆ ನಿರಾಶೆಯಾಗಿದೆ.

ವೇದಾ ನಿಲಯಂ ನಿವಾಸ

ವೇದಾ ನಿಲಯಂ ನಿವಾಸ

ಪೋಯಸ್ ಗಾರ್ಡನ್ ನ ವೇದಾ ನಿಲಯಂ ನಿವಾಸವನ್ನು ಮುಖ್ಯಮಂತ್ರಿ ಅಧಿಕೃತ ಕಚೇರಿಯಾಗಿ ಬಳಸಲು ಕೋರ್ಟ್ ಅನುಮತಿ ನೀಡಿದೆ. ಜಯಲಲಿತಾ ವಾಸವಾಗಿದ್ದ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಮಾರ್ಪಾಡಿಸಲು ಎಐಎಡಿಎಂಕೆ ಯೋಜನೆ ಹಾಕಿಕೊಂಡಿತ್ತು.

ರಾಜಕಾರಣಿಗಳ ಹೆಸರಿನ ದೇಗುಲ, ಪ್ರತಿಮೆಗಳು..ಇತ್ಯಾದಿರಾಜಕಾರಣಿಗಳ ಹೆಸರಿನ ದೇಗುಲ, ಪ್ರತಿಮೆಗಳು..ಇತ್ಯಾದಿ

ಸ್ಮಾರಕವಾಗಿ ಕೂಡಾ ನಿವಾಸ ಬಳಕೆ

ಸ್ಮಾರಕವಾಗಿ ಕೂಡಾ ನಿವಾಸ ಬಳಕೆ

ವೇದಾ ನಿಲಯಂ ನಿವಾಸದ ಒಂದು ಭಾಗವನ್ನು ಸ್ಮಾರಕವಾಗಿ ಬಳಸಬಹುದು, ಮಿಕ್ಕ ಆಸ್ತಿ ಮೌಲ್ಯ 913, 42,68,179 ರು ಅರ್ಜಿದಾರರಾದ ದೀಪಕ್ ಹಾಗೂ ದೀಪಾ ಅವರಿಗೆ ಸಲ್ಲತಕ್ಕದ್ದು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಲಾಗಿದೆ.

ಜಯಲಲಿತಾ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ

ಜಯಲಲಿತಾ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ

ಜೆ ಜಯಲಲಿತಾ ಅವರು ಆರಂಭಿಸಿದ ಜನಪ್ರಿಯ ಯೋಜನೆಗಳನ್ನು ಜನರತ್ತ ತಲುಪಿಸಲು ಅರ್ಜಿದಾರರು ಟ್ರಸ್ಟ್ ಸ್ಥಾಪಿಸಲು ಉದ್ದೇಶಿಸಿದ್ದಾರೆ. ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ನೆರವು ತಕ್ಕದ್ದು, ಹಾಗೂ ಇಬ್ಬರಿಗೂ ಎಲ್ಲಾ ಕಾಲಕ್ಕೂ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಜಯಾಗೆ ಸೇರಿದ ಸೀರೆ, ಆಭರಣ, ಸ್ಲಿಪ್ಪರ್ ಕಥೆ ಏನು?ಜಯಾಗೆ ಸೇರಿದ ಸೀರೆ, ಆಭರಣ, ಸ್ಲಿಪ್ಪರ್ ಕಥೆ ಏನು?

ಜಯಲಲಿತಾ ಎಷ್ಟು ಪ್ರಮಾಣದ ಆಸ್ತಿ ಹಕ್ಕು ಹಂಚಿಕೆ

ಜಯಲಲಿತಾ ಎಷ್ಟು ಪ್ರಮಾಣದ ಆಸ್ತಿ ಹಕ್ಕು ಹಂಚಿಕೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರಿಗೆ ಸೇರಿದ 900 ಕೋಟಿ ರುಗಳ ಪೈಕಿ
* 20, 07, 80, 246 ರುಪಾಯಿ ಸ್ಥಿರಾಸ್ತಿ
* 1,58,30, 619 ರುಪಾಯಿ ನಗದು
* 22,53,92,334 ರುಪಾಯಿ ಮೌಲ್ಯದ ಕಟ್ಟಡಗಳು

* 5,32,00,730 ರುಪಾಯಿ ಮೌಲ್ಯದ ಚಿನ್ನಾಭರಣ
* 4,36,50,000 ರುಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು
* 3,42,62,728 ರುಪಾಯಿ ಬ್ಯಾಂಕ್ ಠೇವಣಿ, ಷೇರುಗಳ ಮೌಲ್ಯ

* 10,6424,951 ರುಪಾಯಿ ಉಳಿತಾಯ ಖಾತೆ ಬ್ಯಾಂಕ್ ಠೇವಣಿ
* 1,72,19,033 ರುಪಾಯಿ ಮೌಲ್ಯದ ವಾಹನಗಳಿವೆ.
* 1,55,35, 542 ರುಪಾಯಿ ಮೌಲ್ಯದ ಸೀರೆ, ಚಪ್ಪಲಿ, ವಾಚ್, ಪುಸ್ತಕ, ಪೀಠೋಪಕರಣ ಇತ್ಯಾದಿ ವಸ್ತುಗಳು ಸೇರಿವೆ.

ಡಿಸೆಂಬರ್ 05, 2016ರಂದು ಜಯಲಲಿತಾ ನಿಧನ

ಡಿಸೆಂಬರ್ 05, 2016ರಂದು ಜಯಲಲಿತಾ ನಿಧನ

ಡಿಸೆಂಬರ್ 05, 2016ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ರಾಧಾಕೃಷ್ಣನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರವನ್ನು ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದರು. ಜಯಾ ಅವರ ಆಸ್ತಿ ಹಕ್ಕು ಪಡೆಯಲು ದೀಪಾ, ದೀಪಕ್ ವಿರುದ್ಧವಾಗಿ ಎಐಎಡಿಎಂಕೆಯ ಕೆ ಪುಗಳೇಂದಿ ಹಾಗೂ ಪಿ ಜಾನಕಿರಾಮನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

English summary
The Madras High Court Wednesday recognised former chief minister J Jayalalithaa’s niece J Deepa and nephew J Deepak as “class II legal heirs” of her estate and other assets worth more than Rs 900 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X