ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಮುಖ ಹೋಲಿಕೆಯಾಗದ್ದಕ್ಕೆ ಪ್ರತಿಮೆಯನ್ನೇ ಬದಲಿಸಿದರು!

|
Google Oneindia Kannada News

ಚೆನ್ನೈ, ನವೆಂಬರ್ 14: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ, ಚೆನ್ನೈನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಮುಂಭಾಗದಲ್ಲಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಬದಲಿಸಿದೆ.

'100 ಕೋಟಿ ವಸೂಲಿ ಮಾಡಿರುವ 'ಸರ್ಕಾರ್' ಸಿನಿಮಾ ಭಯೋತ್ಪಾದನೆ ಕೃತ್ಯಕ್ಕೆ ಸಮ' '100 ಕೋಟಿ ವಸೂಲಿ ಮಾಡಿರುವ 'ಸರ್ಕಾರ್' ಸಿನಿಮಾ ಭಯೋತ್ಪಾದನೆ ಕೃತ್ಯಕ್ಕೆ ಸಮ'

ಜಯಲಲಿತಾ ಅವರದೇ ಗಾತ್ರವನ್ನು ಹೊಂದಿರುವ ಈ ಪ್ರತಿಮೆಯ ಅನಾವರಣ ಪಕ್ಷದ ಕಾರ್ಯಕರ್ತರಲ್ಲಿ ಕೊನೆಗೂ ನೆಮ್ಮದಿ ಮತ್ತು ಸಂತಸ ತಂದಿದೆ.

ಜಯಲಲಿತಾ, ಅಣ್ಣಾದುರೈಗೆ ಭಾರತರತ್ನ ನೀಡಲು ತ.ನಾಡು ಸರಕಾರ ಮನವಿಜಯಲಲಿತಾ, ಅಣ್ಣಾದುರೈಗೆ ಭಾರತರತ್ನ ನೀಡಲು ತ.ನಾಡು ಸರಕಾರ ಮನವಿ

2016ರ ಡಿಸೆಂಬರ್‌ನಲ್ಲಿ ನಿಧನರಾದ ಜಯಲಲಿತಾ ಅವರ ಜ್ಞಾಪಕಾರ್ಥ ಅವರ 70ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಫೆಬ್ರುವರಿಯಲ್ಲಿ ಎಐಎಡಿಎಂಕೆ ಪಕ್ಷದ ಕೇಂದ್ರ ಕಚೇರಿ ಮುಂಭಾಗದಲ್ಲಿ ಬೃಹತ್ ಕಾರ್ಯಕ್ರಮದೊಂದಿಗೆ ಜಯಲಲಿತಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿತ್ತು.

jayalalithaas new statute replaces the older statute that not resembles her

ಗುಲಾಬಿಯ ಹೂವಿನಿಂದ ಅಲಂಕರಿಸಿದ್ದ ಕಂಚಿನ ಪ್ರತಿಮೆಯು ಪಕ್ಷದ ಚಿಹ್ನೆಯಾದ ಎರಡು ಎಲೆಯನ್ನು ಸಂಕೇತಿಸುವಂತೆ ಜಯಲಲಿತಾ ಅವರು ಎರಡು ಬೆರಳುಗಳನ್ನು ಎತ್ತಿ ಹಿಡಿದಿರುವಂತೆ ಅದನ್ನು ನಿರ್ಮಿಸಲಾಗಿತ್ತು.

ಅವರ ಪ್ರತಿಮೆಯನ್ನು ಎಐಎಡಿಎಂಕೆ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆ ಪಕ್ಕದಲ್ಲಿಯೇ ಇರಿಸಲಾಗಿತ್ತು.

ಆಸ್ಪತ್ರೆಯ CCTV ಆಫ್ ಆಗಿದ್ದೇಕೆ? ಜಯಲಲಿತಾ ಪ್ರಕರಣಕ್ಕೆ ಹೊಸ ತಿರುವು?!ಆಸ್ಪತ್ರೆಯ CCTV ಆಫ್ ಆಗಿದ್ದೇಕೆ? ಜಯಲಲಿತಾ ಪ್ರಕರಣಕ್ಕೆ ಹೊಸ ತಿರುವು?!

ಆದರೆ, ಪಕ್ಷದ ಕಾರ್ಯಕರ್ತರ ಸಂಭ್ರಮ ಅಲ್ಪಾವಧಿಯದ್ದಾಗಿತ್ತು. ಆ ಪ್ರತಿಮೆಯ ಮುಖವು ಜಯಲಲಿತಾ ಅವರನ್ನು ಹೋಲುತ್ತಿರಲಿಲ್ಲ. ಸಮೀಪದಿಂದ ನೋಡಿದಾಗ ಅದು ಯಾರ ಮುಖ ಎಂಬುದೇ ಗೊತ್ತಾಗುತ್ತಿರಲಿಲ್ಲ.

ಇದರ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಕಟುವಾದ ಟೀಕೆ ವ್ಯಕ್ತವಾಗಿತ್ತು. ಮುಜುಗರಕ್ಕೆ ಒಳಗಾದ ಪಕ್ಷ ಅದನ್ನು ತೆರವುಗೊಳಿಸಿ ಹೊಸ ಪ್ರತಿಮೆಯನ್ನು ಸ್ಥಾಪಿಸಿದೆ. ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಇದು ಜಯಲಲಿತಾ ಅವರ ಮುಖವನ್ನೇ ಹೋಲುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ. ಪ್ರತಿಮೆಯ ಕಾಲಗೆ ನಮಸ್ಕರಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

English summary
Tamil Nadu AIADMK unveils new bronze statute of J Jayalilathaa replacing the one that not look like her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X