ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಜಯಲಲಿತಾರನ್ನು ಆಸ್ಪತ್ರೆಗೆ ಸೇರಿಸುವಾಗಲೇ ಉಸಿರಾಡದ ಸ್ಥಿತಿಯಲ್ಲಿದ್ದರು!"

|
Google Oneindia Kannada News

ಚೆನ್ನೈ, ಡಿಸೆಂಬರ್ 16: "ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಚೆನ್ನೈನ ಅಪೊಲೋ ಆಸ್ಪತ್ರೆಗೆ ಕರೆತಂದಾಗ ಅವರು ಉಸಿರಾಡುವ ಸ್ಥಿತಿಯಲ್ಲೇ ಇರಲಿಲ್ಲ" ಎಂಬ ಬೆಚ್ಚಿಬೀಳಿಸುವ ಸತ್ಯವೊಂದನ್ನು ಅಪೋಲೋ ಆಸ್ಪತ್ರೆಯ ಉನ್ನತ ಉದ್ದೆಯ ಅಧಿಕಾರಿಯೊಬ್ಬರು ಬಯಲಿಗೆಳೆದಿದ್ದಾರೆ!

ಅಪೋಲೋ ಆಸ್ಪತ್ರೆಯ ವೈಸ್ ಚೇರ್ ಮ್ ಪ್ರೀತಾ ರೆಡ್ಡಿ ತಮಿಳು ಚಾನೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಈ ಸತ್ಯವನ್ನು ಹೊರಹಾಕಿದ್ದಾರೆ.

'ಅಮ್ಮಾ' ನಿಗೂಢ ಸಾವು ಮತ್ತು ಆ 7 ಸಂಭಾವ್ಯ ಪಿತೂರಿಗಳು!'ಅಮ್ಮಾ' ನಿಗೂಢ ಸಾವು ಮತ್ತು ಆ 7 ಸಂಭಾವ್ಯ ಪಿತೂರಿಗಳು!

"ಅವರನ್ನು ಆಸ್ಪತ್ರೆಗೆ ಸೇರಿಸುವಾಗ ಅವರು ಉಸಿರಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು ನೀಡುವಂತೆಯೂ, ಅವರನ್ನು ಬದುಕಿಸಲು ಪ್ರಯತ್ನಿಸುವಂತೆಯೂ ಹೇಳಲಾಗಿದ್ದರಿಂದ ನಾವು ಎಲ್ಲರೀತಿಯರು ಸ್ವಲ್ಪ ಗುಣಮುಖರಾಗುವ ಲಕ್ಷಣ ಕಂಡುಬಂದಿತ್ತು. ಆದರೆ ಕೊನೆಗೆ ಏನಾಯಿತೆಂಬುದು ನಿಮಗೇ ಗೊತ್ತು" ಎಂದವರು ಹೇಳಿದ್ದಾರೆ.

ಜಯಲಲಿತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲವರನ್ನು ಚಿಕಿತ್ಸೆಯ ಸಮಯದಲ್ಲಿ ಅವರ ಹಾಸಿಗೆಯ ಪಕ್ಕ ಇರುವುದಕ್ಕೆ ಅನುಮತಿ ನೀಡಲಾಗಿತ್ತು ಎಂಬ ವಿಷಯವನ್ನೂ ಅವರು ತಿಳಿಸಿದ್ದಾರೆ.

'ಅಮ್ಮ' ಇಲ್ಲವಾಗಿ ಒಂದು ವರ್ಷ! ಅನಾಥವಾಯ್ತು ತಮಿಳುನಾಡು ರಾಜಕೀಯ'ಅಮ್ಮ' ಇಲ್ಲವಾಗಿ ಒಂದು ವರ್ಷ! ಅನಾಥವಾಯ್ತು ತಮಿಳುನಾಡು ರಾಜಕೀಯ

ಅನಾರೋಗ್ಯದ ಕಾರಣ 2016 ರ ಸೆ.22 ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಡಿ.5 ರಂದು ಕೊನೆಯುಸಿರೆಳೆದಿದ್ದಾರೆಂದು ಘೋಷಿಸಲಾಗಿತ್ತು. ಅವರ 75 ದಿನಗಳ ಆಸ್ಪತ್ರೆ ವಾಸದ ಕುರಿತು ಇದುವರೆಗೂ ನಿಖರವಾದ ಯಾವ ಮಾಹಿತಿಯೂ ಲಭವಾಗಿಲ್ಲ. ಲಭ್ಯವಾಗಿಲ್ಲ. ಅವರ ಸಾವು, ಬಗೆದಷ್ಟೂ ನಿಗೂಢತೆಯನ್ನೇ ಸೃಷ್ಟಿಸುತ್ತಿದೆ.

English summary
"Jayalalithaa was brought to Apollo hospital in Chennai in breathless State" Some hospital official told. By this statement the mhystery over Jayalalith's death takes a strange twist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X