ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರದ ಪ್ಯಾಕೇಟ್ ಮೇಲೆ 'ಅಮ್ಮ'ನ ಚಿತ್ರ ಅಂಟಿಸಿದವರ್ಯಾರು?

|
Google Oneindia Kannada News

ಚೆನ್ನೈ, ಡಿಸೆಂಬರ್, 05: ರಾಜ್ಯಗಳ ನೆರವನ್ನು ತಿರಸ್ಕರಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ವಿತರಣೆ ಮಾಡುತ್ತಿರುವ ಆಹಾರ ಪೊಟ್ಟಣಗಳ ಮೇಲೆ ಮುದ್ರಿತವಾಗಿರುವ 'ಅಮ್ಮ' ಸ್ಟಿಕ್ಕರ್ ಗಳು ರಾಜಕಾರಣದ ಕತೆ ಹೇಳುತ್ತಿವೆ.

ಇದು ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರ ಆಕ್ರೋಶಕ್ಕೂ ಕಾರಣವಾಗಿದೆ. ಆದರೆ ಎಐಎಡಿಎಂಕೆ ನಾವು ಅಮ್ಮಾ ಸ್ಟಿಕರ್ ಅಂಟಿಸಿಲ್ಲ. ಇದು ವಿರೋಧ ಪಕ್ಷದವರ ಷಡ್ಯಂತ್ರ ಎಂದು ಆರೋಪಿಸಿದೆ. ಒಟ್ಟಿನಲ್ಲಿ ಪ್ರವಾಹದಿಂದ ಜನ ಒಂದೆಡೆ ಸಂಕಷ್ಟಕ್ಕೆ ಗುರಿಯಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೆ ಇತ್ತ ರಾಜಕೀಯ ಪಕ್ಷಗಳು ಮೇಲಾಟ ಆರಂಭಿಸಿರುವುದು ಮಾತ್ರ ವಿಪರ್ಯಾಸ.[ಚೆನ್ನೈ ಮಹಾ ಪ್ರವಾಹಕ್ಕೆ ಜಗ್ಗದ ಕುಗ್ಗದ ಬಸ್]

ಮಳೆಯ ಪ್ರಮಾಣ ಕೊಂಚ ತಗ್ಗಿದ್ದರೂ ಪರಿಹಾರ ಕಾರ್ಯ ಮಾತ್ರ ನಿಗದಿತ ಪ್ರಮಾಣದಲ್ಲಿ ಸಾಗುತ್ತಿಲ್ಲ. ಸೈನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಶ್ರಮವಹಿಸುತ್ತಿರುವ ಮಧ್ಯದಲ್ಲೇ ಅಮ್ಮ ಸ್ಟಿಕ್ಕರ್ ಹೊಸ ವಿವಾದಕ್ಕೆ ಮುನ್ನುಡಿ ಬರೆದಿದೆ.

ಮಂತ್ರಿಗಳು ಲೇವಡಿಗೆ

ಮಂತ್ರಿಗಳು ಲೇವಡಿಗೆ

ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರದ ಮಂತ್ರಿಮಂಡಳದ ನಥಮ್ ವಿಶ್ವನಾಥನ್, ಸೆಲ್ಲೂರು ರಾಜಾ ಮತ್ತು ಗೋಕುಲ್ ಇಂದಿರಾ ಜನರಿಂದ ಲೇವಡಿ ಮತ್ತು ಟೀಕೆಗೆ ಗುರಿಯಾಗಿದ್ದಾರೆ.

ಇದು ಯಾರ ಕೆಲಸ?

ಇದು ಯಾರ ಕೆಲಸ?

ಕೊಯಂಬತ್ತೂರ್ ನಿಂದ ಆಹಾರ ಹೊತ್ತು ಬರುತ್ತಿದ್ದ ಲಾರಿಗಳನ್ನು ಶ್ರೀಪರಂಬದೂರು ಬಳಿ ನಿಲ್ಲಿಸಿದ ಗುಂಪೊಂದು ಅಮ್ಮಾ ಸ್ಟಿಕ್ಕರ್ ಗಳನ್ನು ಅಂಟಿಸಿದೆ ಎಂದು ಹೇಳಲಾಗಿದೆ.

ಅಮ್ಮಾ ವಿರುದ್ಧ ಆಕ್ರೋಶ?

ಅಮ್ಮಾ ವಿರುದ್ಧ ಆಕ್ರೋಶ?

ತಮಿಳುನಾಡು ಪ್ರವಾಹಕ್ಕೆ ಕರ್ನಾಟಕ ಸಹ 5 ಕೋಟಿ ರು. ಪರಿಹಾರ ನೀಡಿತ್ತು. ಜತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡ ಪರಿಹಾರ ನೀಡಿದ್ದವು. ಆದರೆ ಇದೆಲ್ಲವನ್ನು ಅಮ್ಮಾ ತಿರಸ್ಕಾರ ಮಾಡಿದ್ದರು. ರಾಜ್ಯದ ನಾಯಕರು ಸಹ ಅಮ್ಮಾ ಕ್ರಮಕ್ಕೆ ಪಕ್ಷತೀತವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ನೆರವಿಗೆ ಧಾವಿಸಿದ್ದ ಕೇಂದ್ರ

ನೆರವಿಗೆ ಧಾವಿಸಿದ್ದ ಕೇಂದ್ರ

ತಮಿಳುನಾಡಿನ ಪ್ರವಾಹ ಪರಿಸ್ಥಿತಿಯನ್ನು ಅರಿತ ಕೇಂದ್ರ ಸರ್ಕಾರ ತಕ್ಷಣ ನೆರವಿಗೆ ಧಾವಿಸಿತ್ತು. 1000 ಕೋಟಿ ಹೆಚ್ಚುವರಿ ನೆರವನ್ನು ನೀಡಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ಸಕಲ ಮಾಹಿತಿ ಪಡೆದುಕೊಂಡಿದ್ದರು.

ಟ್ವೀಟ್ ಸಾಕ್ಷ್ಯ ನೋಡಿ

ಅಮ್ಮ ಜಯಲಲಿತಾ ಸ್ಟಿಕರ್ ಅಂಟಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಫೋಟೋ ಸಾಕ್ಷ್ಯ ಹೇಳುತ್ತಿದೆ.

English summary
hile people in Chennai continue to battle the floods and the devastation that comes with it, the state government has suddenly caught everybody's attention and for all the wrong reasons.Many people took to Twitter and complained that relief material was being allowed only in certain areas in the state. The condition- mandatory stickers of Amma (Jayalalithaa) on the packages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X