ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ವೆಬ್ ತಾಣದಿಂದ ಜಯಾ ಔಟ್

By Mahesh
|
Google Oneindia Kannada News

ಚೆನ್ನೈ, ಸೆ.30: ಸ್ವಾಮಿನಿಷ್ಠೆ ಪ್ರತೀಕವೆನಿಸಿರುವ ಜಯಲಲಿತಾ ಅವರ ಆಪ್ತ ಪನ್ನೀರ್ ಸೆಲ್ವಂ ಅವರು ಕಣ್ಣೀರಿಡುತ್ತಾ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ದೊಡ್ಡ ಸುದ್ದಿಯಾಗಿದೆ. ಸೆಲ್ವಂ ಅವರ ಜೊತೆಗೆ ಅವರ ಸಚಿವ ಸಂಪುಟದ ಅನೇಕರು ಕಣ್ಣೀರಿಟ್ಟಿದ್ದಾರೆ. ಇದರ ಬೆನ್ನಲ್ಲೆ ತಮಿಳುನಾಡು ಸರ್ಕಾರದ ಅಧಿಕೃತ ವೆಬ್ ತಾಣದಿಂದ ಜಯಲಲಿತಾ ಅವರ ಭಾವಚಿತ್ರ ಔಟ್ ಆಗಿದೆ.

ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿಕೊಂಡು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ಹಾಗೂ ಸಿಎಂ ಪಟ್ಟ ಕಳಚಿ ಬಿದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ತಮಿಳುನಾಡು ಸರ್ಕಾರದ ಅಧಿಕೃತ ವೆಬ್ ತಾಣದಿಂದ ಮಾಜಿ ಸಿಎಂ ಜಯಲಲಿತಾ ಅವರ ಭಾವಚಿತ್ರ ತೆಗೆದಿರುವುದರಲ್ಲಿ ಅಚ್ಚರಿಯೇನಿಲ್ಲ.[ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ]

ಆದರೆ, ಜಯಾ ಅವರ ಪರಮಭಕ್ತ ಪನ್ನೀರ್ ಸೆಲ್ವಂ ಅವರು ಸಿಎಂ ಆದ ಮೇಲೆ ನಡೆದುಕೊಂಡಿರುವ ರೀತಿ ನೋಡಿದರೆ ರಾಮಾಯಣದ ಶ್ರೀರಾಮಚಂದ್ರ ಹಾಗೂ ಭರತನ ಕಥೆ ನೆನಪಿಗೆ ಬರುತ್ತದೆ. ರಾಮ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು 14 ವರ್ಷಗಳ ಕಾಲ ಅಯೋಧ್ಯೆಯ ರಾಜ್ಯಭಾರ ಮಾಡಿದ ಭರತನಂತೆ ಪನ್ನೀರ್ ಸೆಲ್ವಂ ಅವರು 'ಅಮ್ಮ' ನ ಹೆಸರಿನಲ್ಲಿ ತಮಿಳುನಾಡು ಸರ್ಕಾರ ನಡೆಸಲಿದ್ದಾರೆ.

ತಮಿಳುನಾಡಿನಲ್ಲಿ ಇತಿಹಾಸ ಮರುಕಳಿಸಿದೆ

ತಮಿಳುನಾಡಿನಲ್ಲಿ ಇತಿಹಾಸ ಮರುಕಳಿಸಿದೆ

ಈ ಹಿಂದೆ ತಾನ್ಸಿ ಭೂ ಹಗರಣ ಕೇಸಿನಲ್ಲಿ ಜಯಲಲಿತಾ ಅವರಿಗೆ ಜೈಲುಶಿಕ್ಷೆಯಾದಾಗ ಆರು ತಿಂಗಳುಗಳ ಕಾಲ ಪನ್ನೀರ್ ಸೆಲ್ವಂ ಸಿಎಂ ಕುರ್ಚಿ ಏರದೇ ಆಡಳಿತ ನಡೆಸಿದರು.

* ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪನ್ನೀರ್ ಸೆಲ್ವಂ ಅವರು ಜಯಲಲಿತಾ ಅವರು ಕೂರುತ್ತಿದ್ದ ಕುರ್ಚಿಯಲ್ಲಿ ಕೂರಲಿಲ್ಲ. ಸರ್ಕಾರಿ ಕಡತಗಳಿಗೆ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದರು. ಅಮ್ಮನ ಸಲಹೆ ಇಲ್ಲದೆ ಒಂದಡಿ ಮುಂದಿಡುತ್ತಿರಲಿಲ್ಲ.
* 2002ರ ಮಾರ್ಚ್ ನಲ್ಲಿ ಪನ್ನೀರ್ ಸೆಲ್ವಂ ಅವರು ಸಂತೋಷದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಾನ್ಸಿ ಭೂ ಹಗರಣದಲ್ಲಿ ಜಯಲಲಿತಾ ಅವರು ದೋಷಮುಕ್ತರಾಗಿದ್ದರು.
* ಜಯಲಲಿತಾ ಅವರು ಅಧಿಕಾರ ವಹಿಸಿಕೊಂಡ ಮೇಲೆ ಮತ್ತೊಮ್ಮೆ ಲೋಕೋಪಯೋಗಿ ಸಚಿವರಾಗಿ ಪೆನ್ನಿರ್ ಸೆಲ್ವಂ ಮುಂದುವರೆದರು.

ಹೆಚ್ಚಿನ ರೀತಿಯ ಗೌರವಾದರ ತೋರುತ್ತಿದ್ದಾರೆ

ಹೆಚ್ಚಿನ ರೀತಿಯ ಗೌರವಾದರ ತೋರುತ್ತಿದ್ದಾರೆ

ಜಯಾ ಕೋಣೆಗೆ ಬೀಗ: ಜಯಾ ಅವರ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ಪನ್ನೀರ್ ಸೆಲ್ವಂ ಅವರು ತಮಗೆ ನೀಡಿದ್ದ ಕೊಠಡಿಯಲ್ಲೇ ಕಾರ್ಯಭಾರ ನಡೆಸಲು ನಿರ್ಧರಿಸಿದ್ದಾರೆ. ಜಯಾ ಅವರ ಕಚೇರಿಯನ್ನು ಸ್ವಚ್ಛಗೊಳಿಸಿ ಬೀಗ ಹಾಕಲಾಗಿದ್ದು, ಅವರು ಬರುವ ತನಕ ಸಿಎಂ ಕಚೇರಿ ಪ್ರವೇಶಿಸದಿರಲು ಸೆಲ್ವಂ ನಿರ್ಧರಿಸಿದ್ದಾರೆ.

 ಪ್ರಮಾಣ ವಚನ ಸ್ವೀಕಾರ ಸಂದರ್ಭ

ಪ್ರಮಾಣ ವಚನ ಸ್ವೀಕಾರ ಸಂದರ್ಭ

ಸೋಮವಾರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಜಯಲಲಿತಾ ಅವರ ಭಾವಚಿತ್ರವನ್ನು ಜೇಬಿನಲ್ಲಿ ಇರಿಸಿಕೊಂಡಿದ್ದ ಸೆಲ್ವಂ ಅವರು ಸದ್ಯ ಬೆಂಗಳೂರಿನಲ್ಲಿದ್ದು, ಅಮ್ಮನ ದರ್ಶನಕ್ಕಾಗಿ ಕಾದಿದ್ದಾರೆ. ಅಳು ಸಾಂಕ್ರಾಮಿಕವಾಗಿ ಹಬ್ಬಿ ಸೆಲ್ವಂ ಕ್ಯಾಬಿನೆಟ್ ನ ಇತರೆ ಸದಸ್ಯರು ಕೂಡಾ ಕಣ್ಣೀರಿಡುತ್ತಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. [ಪ್ರಮಾಣ ವಚನ ಸ್ವೀಕರಿಸಿದ ಪನ್ನೀರ್]

ಜಯಾ-ಸೆಲ್ವಂ ಭೇಟಿ ರದ್ದು ಸಂಭವ

ಜಯಾ-ಸೆಲ್ವಂ ಭೇಟಿ ರದ್ದು ಸಂಭವ

ಜಯಲಲಿತಾ ಅವರು ತಾವು ಯಾರನ್ನೂ ಭೇಟಿ ಮಾಡಲು ಇಷ್ಟಪಡುವುದಿಲ್ಲ ಎಂದು ಜೈಲರ್ ಹತ್ತಿರ ಹೇಳಿದ್ದಾರಂತೆ. ಪನ್ನೀರ್ ಸೆಲ್ವಂ ಅವರು ತಮ್ಮ ಪಾಡಿಗೆ ರಾಜ್ಯಭಾರ ಮಾಡಲಿ, ಇಲ್ಲಿ ಬಂದು ಭೇಟಿಯಾಗಬೇಕಿಲ್ಲ ಎಂದು ಹೇಳಿದ್ದಾರೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಸಂಜೆ ಚೆನ್ನೈನಿಂದ ತನ್ನ ಕ್ಯಾಬಿನೆಟ್ ಸದಸ್ಯರೊಂದಿಗೆ ಅಮ್ಮನ ಭೇಟಿಗಾಗಿ ಬೆಂಗಳೂರಿಗೆ ಸೆಲ್ವಂ ಬಂದಿದ್ದರು.

ಆದರೆ, ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಸೇರಿದಂತೆ ಪರಪ್ಪನ ಅಗ್ರಹಾರ ಜೈಲಿನ ಬಾಗಿಲು ತಟ್ಟುತ್ತಿರುವವರ ಅಭಿಮಾನಿಗಳಿಗೆ ನಿರಾಶೆ ಕಾದಿದೆ.

ವಿಐಪಿಗಳಾದರೂ ಪ್ರವೇಶವಿಲ್ಲ

ವಿಐಪಿಗಳಾದರೂ ಪ್ರವೇಶವಿಲ್ಲ

ಬೆಂಗಳೂರಿನ ಪರಪ್ಪನ ಅಗ್ರಹಾರದ ಬಯಲು ಬಂದೀಖಾನೆಯಲ್ಲಿ ಜನಾರ್ದನ ರೆಡ್ಡಿ, ಸೈಕೋ ಶಂಕರ್, ಅಬ್ದುಲ್ ಮದನಿ ಸೇರಿದಂತೆ ವಿವಿಐಪಿ ಖೈದಿಗಳಿರುವುದರಿಂದ ಪೂರ್ವ ಅನುಮತಿ ಇಲ್ಲದೆ ಯಾವುದೇ ಖೈದಿಯನ್ನು ಅವರ ಕಡೆಯವರು ಭೇಟಿಯಾಗುವಂತಿಲ್ಲ.

ಪರಪ್ಪನ ಅಗ್ರಹಾರದಲ್ಲಿ ಕಟ್ಟುನಿಟ್ಟಿನ ಕ್ರಮ

ಪರಪ್ಪನ ಅಗ್ರಹಾರದಲ್ಲಿ ಕಟ್ಟುನಿಟ್ಟಿನ ಕ್ರಮ

ಜೈಲಿನ ನಿಯಮ ಎಲ್ಲರಿಗೂ ಅನ್ವಯವಾಗುತ್ತಿದ್ದು, ಪಾಸ್ ಕೌಂಟರ್ ನಲ್ಲಿ ಸಂದರ್ಶನಾರ್ಥಿಗಳು ತಮ್ಮ ಗುರುತು ವಿವರ ತೋರಿಸಿ, ಜಯಾ ಅವರನ್ನು ಭೇಟಿ ಮಾಡುವ ಉದ್ದೇಶವನ್ನು ದಾಖಲಿಸಬೇಕಾಗುತ್ತದೆ. ಹೊರಗೆ ಬಂದಿರುವ ಸಂದರ್ಶಕರನ್ನು ಭೇಟಿ ಮಾಡಲು ಜಯಲಲಿತಾ ಅವರು ಇಚ್ಛಿಸಿದ್ದಲ್ಲಿ ಮಾತ್ರ ಜೈಲಿನೊಳಗೆ ಸಂದರ್ಶಕರಿಗೆ ಪ್ರವೇಶ ಸಾಧ್ಯ. ಅಲ್ಲದೆ ಸಂದರ್ಶನ ವೇಳೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಹೀಗಾಗಿ ತಮಿಳುನಾಡಿನ ಸಂಸದರು, ಶಾಸಕರು ಸೇರಿದಂತೆ ಮಾಜಿ ಪ್ರಧಾನಿ ದೇವೇಗೌಡರಿಗೂ ಜಯಲಲಿತಾ ಭೇಟಿ ಸಾಧ್ಯವಾಗಿಲ್ಲ.

ತಮಿಳುನಾಡು ವೆಬ್ ಸೈಟ್ ನಲ್ಲಿ ಏನಿದೆ?

ತಮಿಳುನಾಡು ವೆಬ್ ಸೈಟ್ ನಲ್ಲಿ ಏನಿದೆ?

ಎಲ್ಲಾ ಸರ್ಕಾರಿ ವೆಬ್ ತಾಣಗಳಲ್ಲಿರುವಂತೆ ತಮಿಳುನಾಡು ಸರ್ಕಾರದ ವೆಬ್ ಸೈಟ್ ನಲ್ಲಿ ಮುಖ್ಯಮಂತ್ರಿ ವಿವರ, ಶಾಸಕರು, ಸಂಸದರು, ಜಿಲ್ಲಾಧಿಕಾರಿ, ನ್ಯಾಯಾಧೀಶರ ಬಗ್ಗೆ ಮಾಹಿತಿ ಸಿಗುತ್ತದೆ. ಜೊತೆಗೆ ಸರ್ಕಾರದ ಯೋಜನೆಗಳು, ಆದೇಶಗಳು ಇಲ್ಲಿವೆ. ತಮಿಳು ಹಾಗೂ ಇಂಗ್ಲೀಷ್ ಎರಡರಲ್ಲೂ ಇದು ಲಭ್ಯವಿದೆ. ಜಯಲಲಿತಾ ಅವರ ಮಹತ್ವದ ಯೋಜನೆ ಅಮ್ಮ ಕ್ಯಾಂಟೀನ್ ನ ಚಿತ್ರವೂ ಪ್ರಚಾರ ರೂಪದಲ್ಲಿ ಬಳಕೆಯಾಗಿದೆ.

English summary
Former Chief Minister Jayalalitha's photos have been removed from Tamil Nadu Government's official web site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X