ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಡಿಯೋ: ಜಲ್ಲಿಕಟ್ಟು ಹೋರಿ ಹಿಡಿಯಲು ಹೋದವನೇ ಹೋದ ಹಾರಿ!

|
Google Oneindia Kannada News

ಚೆನ್ನೈ, ಜನವರಿ.15: ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಪ್ರಯುಕ್ತ ನಡೆಯುವ ಜಲ್ಲಿಕಟ್ಟು ಆಚರಣೆ ಸಂಭ್ರಮದಿಂದ ನಡೆಯುತ್ತಿದೆ. ಹೋರಿಗಳನ್ನು ಹಿಡಿಯಲು ಯುವಕರು ನಾ ಮುಂದು ತಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ.

ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಅದ್ಧೂರಿಯಾಗಿ ಆಯೋಜನೆ ಮಾಡಲಾಗಿದೆ. ಒಂದೇ ದಿನ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಬರೋಬ್ಬರಿ 750ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿವೆ.

ಅಲ್ಲಿ ಬಾನಿಗೆ ಚಿತ್ತಾರ:ಇಲ್ಲಿ ಹೋರಿ ಅಬ್ಬರ, ಇದಪ್ಪಾ ಸಂಕ್ರಾಂತಿ ಸಡಗರಅಲ್ಲಿ ಬಾನಿಗೆ ಚಿತ್ತಾರ:ಇಲ್ಲಿ ಹೋರಿ ಅಬ್ಬರ, ಇದಪ್ಪಾ ಸಂಕ್ರಾಂತಿ ಸಡಗರ

ಬೆನ್ನೇರಿದ ನಾಲ್ಕೈದು ಯುವಕರನ್ನು ಹೋರಿ ಅಟ್ಟಾಡಿಸಿದೆ. ಎಲ್ಲರನ್ನೂ ನೆಲಕ್ಕೆ ಕೆಡವಿ ಅಬ್ಬರಿಸಿತ್ತಾ ಮುಂದೆ ಓಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ ಈ ಬಾರಿ ತಮಿಳುನಾಡಿನಲ್ಲಿ ಮೂರು ದಿನಗಳ ಕಾಲ, ಮೂರು ಕಡೆಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿದೆ.

Jallikattu 750 Bulls Competitions In Madurais Avaniyapuram

ತಮಿಳುನಾಡಿನಲ್ಲಿ ಮೂರು ದಿನ ಜಲ್ಲಿಕಟ್ಟು ಸ್ಪರ್ಧೆ:

ಜನವರಿ.15ರಂದು ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದ್ದು ಅದಕ್ಕಾಗಿ 750 ಹೋರಿಗಳು ಭಾಗವಹಿಸಲಿವೆ. ಜನವರಿ.16ರಂದು ಪಲಮೇಡುನಲ್ಲಿ ಜಲ್ಲಿಕಟ್ಟು ಸ್ಪರ್ಧೆಗಾಗಿ 650 ಹೋರಿಗಳು ಭಾಗಿಯಾಗಲಿವೆ. ಇನ್ನು, 17ರಂದು ಅಲಂಕನಲ್ಲೂರ ಗ್ರಾಮದಲ್ಲಿ ಜರುಗುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 700 ಹೋರಿಗಳು ಭಾಗವಹಿಸಲಿದೆ.

ಇದರ ಜೊತೆಗೆ ತಮಿಳುನಾಡಿನಲ್ಲಿ ಥಾಯ್ ಪೊಂಗಲ್ ಎಂಬ ಹೆಸರಿನಲ್ಲಿ ನಾಲ್ಕು ದಿನ ಹಬ್ಬವನ್ನು ಆಚರಿಸಲಾಗುತ್ತದೆ. ಮೊದಲನೇ ದಿನ ಭೋಗಿ ಪಂಡಿಗೈ, ಎರಡನೇ ದಿನ ಥಾಯ್ ಪೊಂಗಲ್, ಮೂರನೇ ದಿನವನ್ನು ಮಾಟ್ಟು ಪೊಂಗಲ್ ಮತ್ತು ಕೊನೆ ದಿನವನ್ನು ಕಾನುಂ ಪೊಂಗಲ್ ಎಂಬ ಹೆಸರಿನಿಂದ ಆಚರಿ ಸುತ್ತಾರೆ. ಕೊನೆ ದಿನ ಸೂರ್ಯೋದಯಕ್ಕೂ ಮುನ್ನವೇ ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸಲಾಗುತ್ತದೆ.

English summary
Video Viral: Jallikattu 750 Bulls Competitions In Madurai District Avaniyapuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X