ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲರ್ಕ್‌ ಆಗಿದ್ದ ಕಲ್ಕಿ ಭಗವಾನ್ ಸರ್ಕಾರಕ್ಕೆ ಕೋಟ್ಯಂತರ ಹಣ ವಂಚನೆ

|
Google Oneindia Kannada News

ಚೆನ್ನೈ, ಅಕ್ಟೋಬರ್ 19: ಒಂದು ಕಾಲದಲ್ಲಿ ಸಾಮಾನ್ಯ ಕ್ಲರ್ಕ್ ಆಗಿದ್ದ ವಿಜಯ್‌ಕುಮಾರ್ ಆ ನಂತರ ಸ್ವಯಂ ಘೋಷಿತ ದೇವ ಮಾನವ ಕಲ್ಕಿ ಆಗಿ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದಲ್ಲದೆ, ಸರ್ಕಾರಕ್ಕೆ ಕೋಟ್ಯಂತರ ಹಣ ತೆರಿಗೆ ವಂಚನೆ ಮಾಡಿದ್ದಾನೆ.

ಸ್ವಯಂ ಘೋಷಿತ ದೇವಮಾನವ ಕಲ್ಕಿಯ ಚೆನ್ನೈ ಮತ್ತು ಆಂಧ್ರದ ಚಿತ್ತೂರು ಜಿಲ್ಲೆಯ ವರದೈಪಾಲಂ ಸೇರಿದಂತೆ ಹಲವು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಿದ್ದು ಶೋಧ ಕಾರ್ಯ ಇನ್ನೂ ಮುಗಿದಿಲ್ಲ, ಈಗಾಗಲೇ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ, ಹಣ, ಆಭರಣಗಳನ್ನು ಐಟಿ ವಶಪಡಿಸಿಕೊಂಡಿದೆ.

ಕಲ್ಕಿ ಭಗವಾನ್ ಐಟಿ ರೇಡ್; 9 ಕೋಟಿ ಮೌಲ್ಯದ $ ಸೇರಿ 33 ಕೋಟಿ ವಶಕಲ್ಕಿ ಭಗವಾನ್ ಐಟಿ ರೇಡ್; 9 ಕೋಟಿ ಮೌಲ್ಯದ $ ಸೇರಿ 33 ಕೋಟಿ ವಶ

ಕಲ್ಕಿ ಭಗವಾನ್ ಹೆಸರಿನಿಂದ ಪರಿಚಿತನಾಗಿರುವ ವಿಜಯ್‌ಕುಮಾರ್ ಆತನನ್ನು ದೇವರ ಅವಾತರವೆಂದು ಹೇಳಿಕೊಳ್ಳುತ್ತಾನೆ. ಆತನ ಮಡದಿಯೂ ಸಹ ದೇವರ ಅವತಾರವೆಂದು ಹೇಳಿಕೊಂಡು ಕೋಟ್ಯಂತರ ಭಕ್ತಾದಿಗಳನ್ನು ಸಂಪಾದಿಸಿದ್ದಾರೆ.

IT Raid On Kalki Bhagvan Seized Crores Of Money

ಕಲ್ಕಿ ಸಂಬಂಧಿತ ಆಶ್ರಮ, ನಿವಾಸಗಳ ಮೇಲೆ ಕೆಲವು ದಿನಗಳ ಹಿಂದೆ ಐಟಿ ದಾಳಿ ನಡೆದಿದ್ದು, ನಿನ್ನೆಯ ವರೆಗೆ 500 ಕೋಟಿ ಅಕ್ರಮ ಹಣವನ್ನು ಪತ್ತೆ ಮಾಡಲಾಗಿದೆ. 88 ಕೆ.ಜಿ ಚಿನ್ನ, ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಲ್ಕಿ ಮಗ ಕೃಷ್ಣ ಮೇಲೂ ಐಟಿ ದಾಳಿ ಆಗಿದ್ದು ನಗದು, ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 2014-15 ರಿಂದಲೇ ಹಲವು ದಾಖಲೆಗಳಿಲ್ಲದ ಹಣಕಾಸು ವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದ್ದು, ತನಿಖೆ ಇನ್ನೂ ಚಾಲ್ತಿಯಲ್ಲಿದೆ.

ವಿವಾದಿತ ದೇವಮಾನವ 'ಕಲ್ಕಿ ಭಗವಾನ್' ಆಶ್ರಮದ ಮೇಲೆ ಐಟಿ ದಾಳಿವಿವಾದಿತ ದೇವಮಾನವ 'ಕಲ್ಕಿ ಭಗವಾನ್' ಆಶ್ರಮದ ಮೇಲೆ ಐಟಿ ದಾಳಿ

ಕಲ್ಕಿ ಭಗವಾನ್ ಮೊದಲಿಗೆ ಎಲ್‌ಐಸಿ ಯಲ್ಲಿ ಸಾಮಾನ್ಯ ಕ್ಲರ್ಕ್ ಆಗಿದ್ದರು, ನಂತರ ಸ್ನೇಹಿತರೊಂದಿಗೆ ಸೇರಿ ವಸತಿ ಶಾಲೆ ಆರಂಭಿಸಿದರು. ನಂತರ ಆಶ್ರಮ ಸ್ಥಾಪಿಸಿ ದೇವ ಮಾನವನೆಂಬ ಪಟ್ಟ ಸಂಪಾದಿಸಿಕೊಂಡರು. ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆ ಅವರಿಗೆ ಭಕ್ತರು ಇದ್ದಾರೆ.

English summary
IT raid on Kalki Bhagvan seized more than 500 crore money and gold. Many documents also been seized during the raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X