ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ತಮಿಳು ಚಿತ್ರ ನಿರ್ಮಾಪಕರು, ವಿತರಕರ ಮನೆ ಮೇಲೆ ಐಟಿ ದಾಳಿ

|
Google Oneindia Kannada News

ಚೆನ್ನೈ, ಆ.02: ತಮಿಳು ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ತಮಿಳುನಾಡಿನ ನಲವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕಲೈಪುಲಿ ಥಾನು, ಎಸ್‌ಆರ್ ಪ್ರಭು, ಅನ್ಬು ಚೆಜಿಯನ್ ಮತ್ತು ಜ್ಞಾನವೇಲ್ ರಾಜಾ ಸೇರಿದಂತೆ ಸುಮಾರು 10 ತಮಿಳು ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

IT Raid On Big Names Linked To Tamil Film Industry

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಚಿತ್ರ ನಿರ್ಮಾಪಕ ಕಲೈಪುಲಿ ಎಸ್ ಥಾನು ಅವರ ಚೆನ್ನೈನಲ್ಲಿರುವ ಟಿ-ನಗರ ಕಚೇರಿ ಮೇಲೆ ಮತ್ತು ಚಿತ್ರ ನಿರ್ಮಾಪಕ ಎಸ್‌ಆರ್ ಪ್ರಭು ತೇನಂಪೇಟೆ ನಿವಾಸದ ಮೇಲೂ ಐಟಿ ದಾಳಿಯಾಗಿದೆ.

ಅಧಿಕಾರಿಗಳು ಮಧುರೈನಲ್ಲಿರುವ ಫೈನಾನ್ಷಿಯರ್ ಮತ್ತು ನಿರ್ಮಾಪಕ ಜಿಎನ್ ಅನ್ಬು ಚೆಜಿಯಾನ್ ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಅನ್ಬು ಚೆಜಿಯಾನ್ ಮೇಲೆ ತೆರಿಗೆ ವಂಚನೆ ಆರೋಪವಿದೆ. ಅವರ ನಿವಾಸಗಳು ಮತ್ತು ಕಚೇರಿಗಳಲ್ಲಿ ಮುಂಜಾನೆಯಿಂದಲೇ ಶೋಧ ಪ್ರಾರಂಭವಾಗಿದೆ.

ತಮಿಳು ಚಲನಚಿತ್ರೋದ್ಯಮದಲ್ಲಿ ಹೆಸರಾಂತ ಚಲನಚಿತ್ರ ಫೈನಾನ್ಷಿಯರ್ ಆಗಿರುವ ಅನ್ಬು ಅವರು ಹಲವಾರು ಸಿನಿಮಾಗಳಿಗೆ ಹಣಕಾಸು ಒದಗಿಸಿದ್ದಾರೆ. ಅವರು ತಮ್ಮ ಗೋಪುರಂ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುತ್ತಾರೆ. ಜೊತೆಗೆ ಸಿನಿಮಾ ವಿತರಣೆಯನ್ನು ಮಾಡುತ್ತಾರೆ.

Recommended Video

ಪುನೀತ್ ರಾಜಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಚಕ್ರವರ್ತಿ ಸೂಲಿಬೆಲೆ ಕ್ಷಮೆಯಾಚನೆ | OneIndia Kannada

ಫೆಬ್ರವರಿ 5, 2020 ರಂದು ತಮಿಳು ಚಲನಚಿತ್ರೋದ್ಯಮಕ್ಕೆ ಸೇರಿದ ಪ್ರಮುಖ ವ್ಯಕ್ತಿಗಳ ಮೇಲೆ ತೆರಿಗೆ ವಂಚನೆ ಆರೋಪ ಕೇಳಿ ಬಂದಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡಿನಾದ್ಯಂತ 38 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ನಟ ವಿಜಯ್ ಮತ್ತು ಫೈನಾನ್ಶಿಯರ್ ಅನ್ಬು ಚೆಜಿಯಾನ್ ಸೇರಿದಂತೆ ಕಾಲಿವುಡ್‌ನ ನಾಲ್ವರು ಪ್ರಮುಖ ವ್ಯಕ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

English summary
Income Tax Department conducted raid on Tamil film producers and distributors. over suspected tax evasion. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X