ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ವಿರುದ್ಧ ಸಮರ ಸಾರಿರುವ 'ಮೋದಿ ಭಕ್ತ' ಮಾರಿದಾಸ

|
Google Oneindia Kannada News

ಚೆನ್ನೈ, ಆಗಸ್ಟ್ 27: ಡಿಎಂಕೆ ಸದ್ಯ ಅಧಿಕಾರದಲ್ಲಿಲ್ಲದಿರಬಹುದು, ಆದರೆ, ಮೋದಿ ಸರ್ಕಾರದ ನಡೆಯನ್ನು ಎಲ್ಲೆಡೆ ಖಂಡಿಸುವುದನ್ನು ನಿಲ್ಲಿಸಿಲ್ಲ. ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಅಧಿಕಾರ ಕಲಂ 370ರದ್ದುಗೊಳಿಸಿದ್ದನ್ನು ಡಿಎಂಕೆ ತೀವ್ರವಾಗಿ ವಿರೋಧಿಸಿತ್ತು. ಆದರೆ, ಡಿಎಂಕೆಯನ್ನು ತಮಿಳುನಾಡಿನಲ್ಲಿ ಎದುರಿಸಿ, ಪ್ರತಿಯಾಗಿ ಏಟು ನೀಡುವುದರಲ್ಲಿ ಮಧುರೈ ನಿವಾಸಿ, ಮೋದಿ ಹಿಂಬಾಲಕ ಮಾರಿದಾಸ್ ಪ್ರಮುಖರು. ತಮಿಳುನಾಡಿನ ಬಿಜೆಪಿ ಘಟಕ ಮಾಡುವ ಕೆಲಸವನ್ನು ಏಕಾಂಗಿಯಾಗಿ ಮಾರಿದಾಸ್ ಮಾಡುತ್ತಾ ಬಂದಿದ್ದಾರೆ.

ಮೋದಿ ವಿರೋಧಿ ಪ್ರತಿಭಟನೆಗಳ ವಿರುದ್ಧ ಸಮರ್ಥವಾಗಿ ತಿರುಗೇಟು ನೀಡುತ್ತಾ, ಡಿಎಂಕೆ ಹುಳುಕುಗಳನ್ನು ಪುಸ್ತಕ, ವಿಡಿಯೋ, ಭಾಷಣಗಳ ಮೂಲಕ ತೋರಿಸುತ್ತಿದ್ದ ಮಾರಿದಾಸ್ ಗೆ ಡಿಎಂಕೆ ಕಿರುಕುಳ ತಪ್ಪಿಲ್ಲ.

'ನಾನ್ ಎನ್ ಮೋದಿ ಆದರಿಕ್ಕಿರೇನ್(Why I'm supporting Modi- part 1) ಪುಸ್ತಕದ ಮೂಲಕ ಜನಪ್ರಿಯತೆ ಗಳಿಸಿದ ಮಾರಿದಾಸ್ ಎಂದೂ, ಎಲ್ಲೂ ಯಾವುದೇ ಧರ್ಮ, ಜಾತಿ ನಿಂದನೆ ಮಾಡಿಲ್ಲ. #IsupportMaridhas ಟ್ವಿಟ್ಟರಲ್ಲಿ ಟ್ರೆಂಡ್ ಆಗುತ್ತಿದ್ದು, ಆಡಳಿತಾರೂಢ ಎಐಎಡಿಎಂಕೆ ಸರ್ಕಾರಕ್ಕೂ ನಾಗರಿಕರು ಛಾಟಿ ಬೀಸಿದ್ದಾರೆ. ಮಾರಿದಾಸ್ ಪರ ಟ್ವೀಟ್ ಗಳು ಬಂದಿವೆ.

#Isupportmaridhas: Twitterati Reacts On Maridhass Ideology

ಯಾರೀತ ಮಾರಿದಾಸ್?:
ಮಧುರೈನ ಕಾಲೇಜಿನಲ್ಲೊ ಪ್ರೊಫೆಸರ್ ವೃತ್ತಿಯಲ್ಲಿರುವ ಮಾರಿದಾಸ್ ಅವರು ಮೋದಿ ಪರ ಬರವಣಿಗೆ, ಲೇಖನಗಳ ಮೂಲಕ ಸ್ಥಳೀಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದರು. ಬ್ರಾಹ್ಮಣ ಸಮುದಾಯಕ್ಕೆ ಸೇರದ ಮಾರಿದಾಸ್ ರನ್ನು ಬ್ರಾಹ್ಮಣವಾದಿ ಸಿದ್ಧಾಂತ ಪ್ರತಿಪಾದಕ ಎಂದು ಜರೆಯಲಾಗಿದೆ.

ಮಾರಿದಾಸ್ ಎಂದಿಗೂ ತನ್ನ ವಿದ್ಯಾರ್ಥಿಗಳಿಗೆ ಮೋದಿ ಪರ ಮತ ಹಾಕಿ ಎಂದು ಕೇಳಿಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ವೈರಲ್ ಸಂದೇಶಗಳನ್ನು ಪರಿಶೀಲಿಸಿ ನಂತರ ಚರ್ಚಿಸಿ ಎಂದು ಸಂದೇಶ ನೀಡಿದ್ದಾರೆ. ಸದ್ಯ ಟ್ವಿಟ್ಟರಲ್ಲಿ ಮಾರಿದಾಸ್ ತತ್ತ್ವ ಸಿದ್ಧಾಂತದ ಬಗ್ಗೆ ಚರ್ಚೆ ಮುಂದುವರೆದಿದೆ.

English summary
a Madurai native Maridhas, who is doing the job that BJP's Tamil Nadu has failed to do countering anti-Modi campaigns. He is demolishing 'DMK' with facts and data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X