• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ರೋದಿಂದ ರಿಸ್ಯಾಟ್-2ಬಿ ರೆಡಾರ್ ಉಪಗ್ರಹ ಉಡಾವಣೆ ಯಶಸ್ವಿ

|

ಶ್ರೀಹರಿಕೋಟ, ಮೇ 22: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ರಿ ಸ್ಯಾಟ್ 2 ಬಿ ಎನ್ನುವ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಪಿಎಸ್ ಎಲ್ ವಿ - ಸಿ 46 ಉಡಾವಣಾ ವಾಹಕದ ಮೂಲಕ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿದೆ. ಹವಾಮಾನ ವೈಪರೀತ್ಯದ ಸಂದರ್ಭ ಎದುರಾದಲ್ಲಿ ಮಾತ್ರ ಈ ವೇಳಾಪಟ್ಟಿ ಬದಲಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿದೆ.

ಭಾರತವು ಅತ್ಯಾಧುನಿಕ ಮೋಡ ನಿರೋಧಕ ಗೂಢಾಚಾರ್ಯ ರೆಡಾರ್ ಉಪಗ್ರಹದ ಯಶಸ್ವಿ ಪರೀಕ್ಷೆ ನಡೆಸಿ ಪ್ರತಿಕೂಲ ವಾತಾವರಣವನ್ನು ಹಾಗೂ ಮೋಡವಿರುವಾಗಲೂ ವಿರೋದಿ ಪಡೆಗಳ ಯುದ್ಧ ವಿಮಾನ ಕ್ಷಿಪಣಿ ಹಾಗೂ ಇತರೆ ವೈರುಧ್ಯಗಳನ್ನು ಈ ರೆಡಾರ್ ಉಪಗ್ರಹ ಪತ್ತೆ ಹಚ್ಚಲಿದೆ.

ಇದರಿಂದ ಸೇನಾ ಕಾರ್ಯಾಚರಣೆ ಇನ್ನಷ್ಟು ಸುಲಭವಾಗಲಿದೆ, ಹಾಗೂ ಎದುರಾಳಿಗಳ ಚಲನ ವಲನಗಳ ಮೇಲೆ ನಿಗಾ ಇಡಲು ಸುಲಭವಾಗಲಿದೆ.ಇಸ್ರೋ ಈ ಉಪಗ್ರಹವನ್ನು ಪರೀಕ್ಷೆ ನಡೆಸಿದ್ದು, ಪಿಎಸ್‌ಎಲ್‌ವಿ ಮೂಲಕ 615 ಕೆಜಿಯ ರಿಸ್ಯಾಟ್ 2ಬಿ ಈ ಉಪಗ್ರಹವನ್ನು ನಭಕ್ಕೆ ಹಾರಿ ಬಿಡಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ: EMISAT ಸೇರಿ 29 ಉಪಗ್ರಹಗಳ ಉಡಾವಣೆ

ಏತನ್ಮಧ್ಯೆ ಇಸ್ರೋದಲ್ಲಿ ಪ್ರಯೋಗವು ಮೋಡ ಹಾಗೂ ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಂತಾಗಿದೆ.ಇತ್ತೀಚೆಗೆ ಇಂಗ್ಲಿಷ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಮೋದಿ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರತಿಕೂಲ ವಾತಾವರಣ ಹಾಗೂ ಮೋಡ ನೆರವಾಗಿದ್ದನ್ನು ಉಲ್ಲೇಖಿಸಿದ್ದರು.

ಮೋಡವಿದ್ದರಿಂದ ಪಾಕಿಸ್ತಾನದ ರೆಡಾರ್‌ಗಳಿಗೆ ಭಾರತದ ಯುದ್ಧ ವಿಮಾನವನ್ನು ಪತ್ತೆ ಹಚ್ಚಲಾಗಲಿಲ್ಲ, ಇದೇ ಕಾರಣಕ್ಕೆ ಮೋಡವಿದ್ದರೂ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸೂಚನೆ ನೀಡಿದ್ದೆ ಎಂದು ಮೋದಿ ಹೇಳಿಕೊಂಡಿದ್ದರು.

ಮಳೆ, ಮೋಡ, ರೆಡಾರ್ ಹಾಗೂ ಮೋದಿ ಹೇಳಿಕೆ, ರಮ್ಯಾ ಗೇಲಿ

ಆದರೆ ಈ ಹೇಳಿಕೆ ಸಾಮಾಜಿಕ ಜಾಲತಾಣ, ರಾಜಕೀಯ ವಲಯಗಳಲ್ಲಿ ಟೀಕೆ ಹಾಗೂ ಟ್ರೋಲ್‌ಗೆ ಕಾರಣವಾಗಿತ್ತು. ಮೋದಿ ಹಾಗೂ ಮೋಡಕ್ಕೆ ಸಂಬಂಧಿಸಿ ಸಾಕಷ್ಟು ಕಾರ್ಟೂನ್‌ಗಳು ಕೂಡ ರಚನೆಯಾಗಿದ್ದವು. ಆದರೆ ವೈಜ್ಞಾನಿಕವಾಗಿ ಮೋದಿ ಹೇಳಿಕೆ ನಿಜ ಎನ್ನುವುದನ್ನು ಇಸ್ರೋ ಪರೋಕ್ಷವಾಗಿ ಸಮರ್ಥಿಸಿದೆ.

English summary
Indian Space Research Organisation (ISRO) to launched successfully of PSLV-C46 from Satish Dhawan Space Centre, Sriharikota. Polar Satellite Launch Vehicle (PSLV-C46) launched at 5.30 am. PSLV-C46 launched the RISAT-2B radar earth observation satellite into a 555-km-altitude orbit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X