ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದ ದೋಣಿಯಲ್ಲಿ ಪಾಕ್‌ನಿಂದ ಬಂದ 100 ಕೆಜಿ ಮಾದಕವಸ್ತು ಪತ್ತೆ

|
Google Oneindia Kannada News

ನವದೆಹಲಿ, ನವೆಂಬರ್ 25: ಭಾರತೀಯ ಕರಾವಳಿ ಕಾವಲು ಪಡೆಯು 100 ಕೆ.ಜಿ ತೂಕದ ಹೆರಾಯಿನ್ ಸೇರಿದಂತೆ ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಶ್ರೀಲಂಕಾದ ದೋಣಿಯೊಂದರಿಂದ ವಶಪಡಿಸಿಕೊಂಡಿದೆ. ದಕ್ಷಿಣ ತೂತುಕುಡಿಯ ಸಮುದ್ರ ಪ್ರದೇಶದಲ್ಲಿ ನವೆಂಬರ್ 17ರಂದು ಆರಂಭಿಸಿದ ಒಂಬತ್ತು ದಿನಗಳ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾದಕವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾದ ಪ್ರಜೆಗಳು ಎಂದು ಗುರುತಿಸಿಕೊಂಡ ಆರು ಮಂದಿ ನೌಕಾ ಸದಸ್ಯರನ್ನು ಬಂಧಿಸಿದ ವಿಚಾರಣೆಗೆ ಒಳಪಡಿಸಲಾಗಿದೆ. ಪಾಕಿಸ್ತಾನದ ಕರಾಚಿಯ ಸಮುದ್ರದಾಚೆಯಿಂದ ಶ್ರೀಲಂಕಾದ ಹಡಗು 'ಶೆನಾಯಾ ದುವಾ'ಕ್ಕೆ ಈ ಮಾದಕವಸ್ತುಗಳನ್ನು ವರ್ಗಾಯಿಸಲಾಗಿತ್ತು ಎಂದು ದೋಣಿಯ ಸದಸ್ಯರು ತಿಳಿಸಿದ್ದಾರೆ. ಈ ಮಾದಕವಸ್ತುಗಳನ್ನು ಪಶ್ಚಿಮ ದೇಶಗಳು ಮತ್ತು ಆಸ್ಟ್ರೇಲಿಯಾಕ್ಕೆ ರವಾನಿಸಲು ಉದ್ದೇಶಿಸಲಾಗಿತ್ತು.

NCB ಕಾರ್ಯಾಚರಣೆ: ಸುಡೋಫೆಡ್ರಿನ್ ಡ್ರಗ್ ಜಾಲ ಪತ್ತೆ !NCB ಕಾರ್ಯಾಚರಣೆ: ಸುಡೋಫೆಡ್ರಿನ್ ಡ್ರಗ್ ಜಾಲ ಪತ್ತೆ !

ದೋಣಿಯಲ್ಲಿ 99 ಪ್ಯಾಕೆಟ್ ಹೆರಾಯಿನ್, 20 ಸಣ್ಣ ಪ್ಯಾಕೆಟ್‌ಗಳಷ್ಟು ಸಿಂಥೆಟಿಕ್ ಡ್ರಗ್ಸ್, ಐದು 9 ಎಂಎಂ ಪಿಸ್ತೂಲುಗಳು ಮತ್ತು ಥುರಯಾ ಉಪಗ್ರಹ ಫೋನ್ ಸೆಟ್ ದೊರಕಿವೆ ಎಂದು ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ. ದೋಣಿಯಲ್ಲಿ ಖಾಲಿ ಇಂಧನ ಟ್ಯಾಂಕ್ ಒಳಗೆ ಈ ಮಾದಕ ವಸ್ತುಗಳನ್ನು ಅಡಗಿಸಿಡಲಾಗಿತ್ತು.

Indian Coast Gaurds Seized 100 KG Heroin From Sri Lankan Boat

ಡ್ರಗ್ಸ್ ಕೇಸ್: ನಟಿ ಭಾರತಿ ಸಿಂಗ್ ಹಾಗೂ ಆಕೆ ಪತಿಗೆ ಜಾಮೀನು ಡ್ರಗ್ಸ್ ಕೇಸ್: ನಟಿ ಭಾರತಿ ಸಿಂಗ್ ಹಾಗೂ ಆಕೆ ಪತಿಗೆ ಜಾಮೀನು

ಬಂಧಿತ ನಾವಿಕರನ್ನು ತೂತುಕುಡಿಯ ಬಂದರಿಗೆ ಕರೆದೊಯ್ಯಲಾಗಿದೆ. ಅಲ್ಲಿ ವಿವಿಧ ಸಂಸ್ಥೆಗಳು ಅವರನ್ನು ವಿಚಾರಣೆಗೆ ಒಳಪಡಿಸಿವೆ. ಪಾಕಿಸ್ತಾನವು ಉಗ್ರವಾದವನ್ನು ಮಾತ್ರ ರಫ್ತು ಮಾಡುತ್ತಿಲ್ಲ. ಆದರೆ ಮಾದಕವಸ್ತುಗಳನ್ನು ಕೂಡ ರವಾನಿಸುತ್ತದೆ. ತನ್ನ ಭಯೋತ್ಪಾದನೆಗೆ ಹಣ ಸಂಗ್ರಹಿಸಲು ಅದನ್ನು ಬಳಸಿಕೊಳ್ಳುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
Indian coast gaurds has seized 100 KG heroin from a Sri Lankan boat, which were transferred by Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X