ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಸಿಎಂ ಆಗಲು ಸ್ಟಾಲಿನ್ ಸೂಕ್ತ: ಸಮೀಕ್ಷೆ

By Mahesh
|
Google Oneindia Kannada News

ನವದೆಹಲಿ, ಜನವರಿ 18: ತಮಿಳುನಾಡಿನಲ್ಲಿ ಈ ಸಮಯಕ್ಕೆ ವಿಧಾನಸಭೆ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಎಂಬ ಪ್ರಶ್ನೆಯೊಂದಿಗೆ ಇಂಡಿಯಾ ಟುಡೇ ಹಾಗೂ ಕಾರ್ವಿ ಸಂಸ್ಥೆಯಿಂದ ಸುಮಾರು 77 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಇದರ ಜತೆಗೆ ಹಾಲಿ ರಾಜಕಾರಣಿಗಳ ಪೈಕಿ ಮುಂದಿನ ಮುಖ್ಯಮಂತ್ರಿಯಾಗಲು ಯಾರು ಸೂಕ್ತ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದರ ಫಲಿತಾಂಶದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮೈತ್ರಿಕೂಟಕ್ಕೆ ಪೊಂಗಲ್ ಉಡುಗೊರೆ ಸಿಕ್ಕಿದೆ. ತಮಿಳುನಾಡಿನ ಜನತೆ ಆಡಳಿತದಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ದಿಕ್ಸೂಚಿ ಹೇಳುತ್ತಿದೆ. ಹಳೆ ಸಿಎಂಗಳ ಪೈಕಿ ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಅವರು ಉತ್ತಮ ಎಂದು ಜನರು ಹೇಳಿದ ಬೆನ್ನಲ್ಲೇ ಈ ಸಂದರ್ಭದಲ್ಲಿ ಸಿಎಂ ಆಗಲು ಡಿಎಂಕೆ ಕಾರ್ಯಾಧ್ಯಕ್ಷ ಎಂಕೆ ಸ್ಟಾಲಿನ್ ಅವರು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

India Today-Karvy survey : DMK working president MK Stalin most suitable to become TN CM

ಎಂ . ಕರುಣಾನಿಧಿ-ಸ್ಟಾಲಿನ್ ನೇತೃತ್ವದ ಡಿಎಂಕೆ, ಕಾಂಗ್ರೆಸ್ ಹಾಗೂ ಐಯುಎಂಎಲ್ ಮೈತ್ರಿಕೂಟಕ್ಕೆ ಶೇ 34ರಷ್ಟು ಶೇಕಡಾವರು ಮತ ಪಾಲಿನೊಂದಿಗೆ 130 ಸೀಟುಗಳನ್ನು ಗೆಲ್ಲಲಿದೆ.

ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಅವರು ಇಲ್ಲಿ ತನಕ ತಮಿಳುನಾಡು ಕಂಡಿರುವ ಉತ್ತಮ ಮುಖ್ಯಮಂತ್ರಿ ಎಂದು ಶೇ 29ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಎಂಜಿಆರ್ ಹಾಗೂ ಜೆ ಜಯಲಲಿತಾ ಅವರಿಗೆ ಕ್ರಮವಾಗಿ ಶೇ 25 ಹಾಗೂ ಶೇ 21ರಷ್ಟು ಮತಗಳು ಸಿಕ್ಕಿವೆ.

ಎಂಕೆ ಸ್ಟಾಲಿನ್ ಸೂಕ್ತ: ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್ ಅವರು ಸಿಎಂ ಆಗಲು ಸೂಕ್ತ ಎಂದು ಶೇ50ರಷ್ಟು ಮಂದಿ ಹೇಳಿದ್ದಾರೆ. ರಜನಿಕಾಂತ್ ಅವರು ಶೇ17ರಷ್ಟು ಮಂದಿ ಮತ ಹಾಕಿದ್ದಾರೆ. ಹಾಲಿ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂಗೆ ಶೇ11ರಷ್ಟು ಹಾಗೂ ಇಡಪ್ಪಾಡಿ ಕೆ ಪಳನಿಸ್ವಾಮಿಗೆ ಶೇ5ರಷ್ಟು ಮತಗಳು ಸಿಕ್ಕಿವೆ.

English summary
On the question of the most suitable to become chief minister, DMK working president M K Stalin got 50% nod, followed by Rajinikanth at a distant second with 17% popular support. While deputy chief minister O Panneerselvam got 11% support for the chief minister's chair, the incumbent Edappadi K Palaniswami received a mere 5% support for the top post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X