ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಶಸ್ತ್ರೀಕರಣ ವಿಶ್ವದತ್ತ ಭಾರತ ಮತ್ತೊಂದು ಹೆಜ್ಜೆ!

|
Google Oneindia Kannada News

ಚೆನ್ನೈ, ಜನವರಿ 24 : ವಿಶ್ವದಲ್ಲಿ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಪ್ರಸರಣ ತಡೆಯಲು ಶ್ರಮಿಸುವ ಅನೌಪಚಾರಿಕ ವೇದಿಕೆ ಆಸ್ಟ್ರೇಲಿಯಾ ಗುಂಪಿಗೆ (ಎಜಿ) ಹೊಚ್ಚಹೊಸ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆಗೊಂಡಿದೆ.

ಭಾರತದ ಈ ಸಾಧನೆಗೆ ಅಮೆರಿಕ ಸೇರಿದಂತೆ ವಿಶ್ವದ ಶಾಂತಿಪರ ರಾಷ್ಟ್ರಗಳು ಅಭಿನಂದಿಸಿವೆ. ಭಾರತವು ಆಸ್ಟ್ರೇಲಿಯಾ ಗುಂಪಗೆ ಸೇರುವ ಮೂಲಕ ಈ ಗುಂಪಿನ ಸದಸ್ಯರ ಸಂಖ್ಯೆ 43ಕ್ಕೆ ಏರಿದೆ.

ಈ ಸಾಧನೆಯು, ಸೂಕ್ಷ್ಮ ಸಾಮಾಗ್ರಿಗಳು ಮತ್ತು ತಂತ್ರಜ್ಞಾನಗಳು ಸೇರಿದಂತೆ ಸಾಮೂಹಿಕ ವಿನಾಶಕ್ಕೆ ಕಾರಣವಾಗುವ ಅಸ್ತ್ರಗಳ ಪ್ರಸರಣ ತಡೆ ವಿಷಯದಲ್ಲಿ ಭಾರತ ಸರ್ಕಾರ ಹೊಂದಿರುವ ಬದ್ಧತೆಯನ್ನು ಎತ್ತಿತೋರುತ್ತದೆ.

India enters Autralia Group(AG) for strenthening the global security

ಪ್ರಸರಣ ತಡೆ ಪ್ರಯತ್ನಗಳ ಪರಿಣಾಮವನ್ನು ಇದು ಎತ್ತಿ ಹಿಡಿಯುತ್ತದೆ. ಭಾರತವು ಅಣ್ವಸ್ತ್ರ ಪ್ರಸರಣ ತಡೆ ಪ್ರಯತ್ನಗಳ ಮೌಲ್ಯಯುತ ಸಹಭಾಗಿ. ಅಣ್ವಸ್ತ್ರ ಪ್ರಸರಣ ತಡೆಯು ಉಭಯ ದೇಶಗಳ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಗುಂಪಿನಲ್ಲಿ ಭಾರತದ ಜತೆಗೂಡಿ ಕೆಲಸ ಮಾಡಲು ಎದುರು ನೋಡುತ್ತೇವೆ ಎಂದು ಭಾರತ ಹೇಳಿಕೊಂಡಿದೆ. ಆಸ್ಟ್ರೇಲಿಯಾ ಗುಂಪಿನ ಕೆಲಸ, ಸದಸ್ಯತ್ವದ ಬಗೆಗಿನ ಮಾಹಿತಿ ಈ ಕೊಂಡಿಯಲ್ಲಿ ದೊರೆಯುತ್ತದೆ.

English summary
India has been entered Australia Group which is an informal forum of countries, which seeks to ensure that exports do not contribute to the development of chemical or biological weapons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X