ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರವಣ ಸ್ಟೋರ್ಸ್‌ನ 74 ಮಳಿಗೆಗಳ ಮೇಲೆ ಐಟಿ ದಾಳಿ

|
Google Oneindia Kannada News

ಚೆನ್ನೈ, ಜನವರಿ 29: ತಮಿಳುನಾಡಿನ ಪ್ರಸಿದ್ಧ ವ್ಯಾಪಾರ ಅಂಗಡಿ ಶರವಣ ಸ್ಟೋರ್ಸ್‌ನ 74 ಮಳಿಗೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಚೆನ್ನೈ ಮತ್ತು ಕೊಯಮತ್ತೂರಿನಲ್ಲಿರುವ ಶರವಣ ಸ್ಟೋರ್ಸ್‌ನ 74 ಮಳಿಗೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.

ಸಚಿವ ರಾಜಶೇಖರ ಪಾಟೀಲ್ ಸಂಬಂಧಿಗಳ ಮೇಲೆ ಐಟಿ ದಾಳಿ? ಸಚಿವ ರಾಜಶೇಖರ ಪಾಟೀಲ್ ಸಂಬಂಧಿಗಳ ಮೇಲೆ ಐಟಿ ದಾಳಿ?

ರಿಯಾಲಿಟಿ ವ್ಯವಹಾರ ಮತ್ತು ಶರವಣ ಸ್ಟೋರ್ಸ್ ನಡೆಸುತ್ತಿರುವ ಜಿ ಸ್ಕ್ವೇರ್/ಲೋಟಸ್ ಸಮೂಹಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ದಾಖಲೆಗಳ ಶೋಧ ಕಾರ್ಯಾಚರಣೆ ನಡೆಸಲಾಗಿದೆ. 74 ಸ್ಥಳಗಳ ಪೈಕಿ ಎರಡು ಮಾತ್ರ ಕೊಯಮತ್ತೂರಿನಲ್ಲಿದ್ದು, ಉಳಿದ ಎಲ್ಲ ಮಳಿಗೆಗಳೂ ಚೆನ್ನೈನಲ್ಲಿವೆ ಎಂದು ಐಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

income tax raids 74 branches of saravana stores in chennai coimbatore

ಯಶ್ ಅವರ ಆಡಿಟರ್ ಬಸವರಾಜ್ ಕಚೇರಿ ಮೇಲೆ ಐಟಿ ದಾಳಿ ಯಶ್ ಅವರ ಆಡಿಟರ್ ಬಸವರಾಜ್ ಕಚೇರಿ ಮೇಲೆ ಐಟಿ ದಾಳಿ

ಸಮೂಹದ ಎರಡು ರಿಯಾಲ್ಟಿ ಕಂಪೆನಿಗಳು ಮತ್ತು ಶರವಣ ಸ್ಟೋರ್ಸ್ ಸಂಸ್ಥಾಪಕ ಯೋಗರತ್ನಂ ಅವರ ಮಗ ಪೊಂಡುರೈ ಅವರ ನಿವಾಸದ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಅಳಿಲಿನಷ್ಟು ತಪ್ಪು ಮಾಡಿದ್ದೇನೆ, ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ: ಸುದೀಪ್ ಅಳಿಲಿನಷ್ಟು ತಪ್ಪು ಮಾಡಿದ್ದೇನೆ, ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ: ಸುದೀಪ್

ತೆರಿಗೆ ವಂಚನೆ ಮತ್ತು ದಾಖಲೆಗಳಿಲ್ಲದ ಹಣ ಹೊಂದಿರುವ ಬಗ್ಗೆ ಮಾಹಿತಿ ಬಂದಿದೆ. ಅವರ ಆದಾಯ ಮತ್ತು ತೆರಿಗೆ ಪಾವತಿಯ ದಾಖಲೆಗಳನ್ನು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
The Income Tax investigation wing on Tuesday raided at 74 branches of the retail store chain Saravana Stores in Chennai and Coimbatore, on the basis of information on tax evasion and unaccounted money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X