ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ನಾಯಕಿ ಕನಿಮೊಳಿ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

|
Google Oneindia Kannada News

ಚೆನ್ನೈ, ಏಪ್ರಿಲ್ 16: ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಡಿಎಂಕೆ ನಾಯಕಿ ಕನಿಮೊಳಿ ಅವರ ಮನೆ ಮೇಲೆ ಮಂಗಳವಾರ ಸಂಜೆ ಆದಾಯ ಇಲಾಖೆ ದಾಳಿ ನಡೆದಿದೆ. ಐಟಿ ಮೂಲಗಳ ಪ್ರಕಾರ, ತೂತ್ತುಕುಡಿಯ ಕುರಿಂಜಿ ನಗರದಲ್ಲಿ ಇರುವ ಕನಿಮೊಳಿ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ.

ಅಂದಹಾಗೆ, ಕನಿಮೊಳಿ ಅವರು ತೂತ್ತುಕುಡಿ ಲೋಕಸಭಾ ಕ್ಷೇತ್ರದಿಂದ ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರ್ ರಾಜನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ವೆಲ್ಲೂರು ಹೊರತುಪಡಿಸಿ ಉಳಿದ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ಹದಿನೆಂಟರಂದು ಮತದಾನ ನಡೆಯಲಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಸೋದರಿಯೇ ಕನಿಮೊಳಿ.

ತಮಿಳುನಾಡಿನ ಏಳು ಕಡೆಗಳಲ್ಲಿ ಆದಾಯ ತೆರಿಗೆ ದಾಳಿತಮಿಳುನಾಡಿನ ಏಳು ಕಡೆಗಳಲ್ಲಿ ಆದಾಯ ತೆರಿಗೆ ದಾಳಿ

ಚುನಾವಣೆ ಆಯೋಗವು ತಮಿಳುನಾಡಿನ ಜನರ ಜತೆಗೆ ಕೆಟ್ಟ ತಮಾಷೆ ಮಾಡುತ್ತಿದೆ ಎಂದು ಡಿಎಂಕೆ ವಕ್ತಾರ ಎ.ಸರವಣನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಚೆನ್ನೈನಲ್ಲಿ ಕಳೆದ ಭಾನುವಾರ ರಾತ್ರಿ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣೆ ಆಯೋಗದ ತಂಡವು ತಮಿಳುನಾಡು ಕಂದಾಯ ಸಚಿವ ಆರ್.ಬಿ.ಉದಯ್ ಕುಮಾರ್ ಹಾಸ್ಟೆಲ್ ಕೋಣೆ ಮೇಲೆ ದಾಳಿ ನಡೆಸಿತ್ತು. ಆದರೆ ಅಲ್ಲೇನೂ ದೊರೆತಿರಲಿಲ್ಲ.

Kanimozhi

ಕಳೆದ ವಾರ ಚೆನ್ನೈ, ನಾಮಕ್ಕಲ್ ಮತ್ತು ತಿರುನಲ್ವೇಲಿಯಲ್ಲಿನ ನಿರ್ಮಾಣ ಸಂಸ್ಥೆಗಳ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ದಾಳಿ ನಡೆದಿತ್ತು. ಇನ್ನು ಮಧ್ಯಪ್ರದೇಶದ್ ಮುಖ್ಯಮಂತ್ರಿ ಕಮಲ್ ನಾಥ್ ಆಪ್ತರ ಮೇಲೆ ಕೂಡ ಈಚೆಗೆ ಐಟಿ ದಾಳಿ ನಡೆದು, ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಕಳೆದ ಕೆಲವು ವಾರಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಆದಾಯ ತೆರಿಗೆ ಇಲಾಖೆಗಳು ದಾಳಿ ನಡೆಸಿವೆ.

English summary
The income tax department raided the house of DMK leader Kanimozhi in Tamil Nadu’s Thoothukudi on Tuesday evening. I-T department sources said the raids are being conducted at Kanimozhi’s house in Kurinji Nagar area of Thoothukudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X