ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ದನಿ ಎತ್ತಿದ್ದಕ್ಕೆ ವಿದ್ಯಾರ್ಥಿಗಳಿಗೆ ನಿಷೇಧ?

By Mahesh
|
Google Oneindia Kannada News

ಚೆನ್ನೈ, ಮೇ 29: ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಾರ್ಯವೈಖರಿ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಿದ್ದ ವಿದ್ಯಾರ್ಥಿಗಳ ಮೇಲೆ ಮದ್ರಾಸ್ ಐಐಟಿ ನಿಷೇಧ ಹೇರಿದೆ. ಮೋದಿ ಸರ್ಕಾರದ ನೀತಿಗಳನ್ನು ಖಂಡಿಸಿ, ದ್ವೇಷಪೂರಿತ ಸಂದೇಶ ಹಂಚಲಾಗುತ್ತಿದೆ ಎಂದು ಅನಾಮಿಕ ವ್ಯಕ್ತಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸ್ಟಡಿ ಗ್ರೂಪ್ ಮೇಲೆ ಕ್ರಮ ಜರುಗಿಸಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವಾಲಯದ ಸೂಚನೆ ಮೇರೆಗೆ ಐಐಟಿ ಮದ್ರಾಸ್‌ಈ ಕ್ರಮಕೈಗೊಂಡಿದ್ದು, ವಿಚಾರ ಸಂಕಿರಣ ಏರ್ಪಡಿಸಿದ್ದ ಐಐಟಿಯ ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್‌ನ ವಿದ್ಯಾರ್ಥಿಗಳ ಸಂಘಟನೆಯ ಮೇಲೆ ಈ ನಿರ್ಬಂಧ ಹೇರಲಾಗಿದೆ.

ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್ ಸಂಘಟನೆಯ ವಿದ್ಯಾರ್ಥಿಗಳು ಮೋದಿ ಆಡಳಿತದ ಬಗ್ಗೆ ಇಂಥದ್ದೊಂದು ವಿಚಾರ ಸಂಕಿರಣ ಆಯೋಜಿಸಿದ್ದಾರೆ ಎಂಬ ಮಾಹಿತಿ ಮೇ.15ಕ್ಕೆ ಗೃಹ ಇಲಾಖೆಗೆ ರವಾನೆಯಾಗಿದೆ.

ಈ ವಿದ್ಯಾರ್ಥಿ ಸಂಘಟನೆಯ ಎಲ್ಲಾ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವುದು ಹಾಗೂ ಕ್ಯಾಂಪಸಿನ ಆಡಿಟೋರಿಯಂ ಬಳಸುವುದನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ ಐಐಟಿ ಮದ್ರಾಸ್ ಗೆ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ನಂತರ ವಿದ್ಯಾರ್ಥಿ ಸಂಘಟನೆ ಮೇಲೆ ಐಐಟಿ ಮದ್ರಾಸ್ ಕ್ರಮ ಜರುಗಿಸಿದೆ.

ದೂರು ಕೊಡಲು ಬಿಡುತ್ತಿಲ್ಲ: ವಿದ್ಯಾರ್ಥಿಗಳ ಅಳಲು

ದೂರು ಕೊಡಲು ಬಿಡುತ್ತಿಲ್ಲ: ವಿದ್ಯಾರ್ಥಿಗಳ ಅಳಲು

ನರೇಂದ್ರ ಮೋದಿ ಸರ್ಕಾರದ ಹಿಂದಿ ಹೇರಿಕೆ, ಗೋಹತ್ಯೆ ನಿಷೇಧ, ಭೂಸ್ವಾಧೀನ ಕಾಯ್ದೆಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳನ್ನು ಸಂಘಟಿಸಲು ಪೆರಿಯಾರ್ ಫೋರಮ್ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಬಗ್ಗೆ ದೂರು ಕೊಡುವುದಕ್ಕೂ ನಿರ್ಬಂಧ ಹೇರಲಾಗಿದೆ. ಐಐಟಿ ಕ್ಯಾಂಪಸ್ ಆಡಿಟೋರಿಯಂ ಬಳಸದಂತೆ ನಿಷೇಧ ಹೇರಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಪ್ರಜಾತಂತ್ರಕ್ಕೇ ಗಂಡಾಂತರಕಾರಿ ಕ್ರಮ

ಪ್ರಜಾತಂತ್ರಕ್ಕೇ ಗಂಡಾಂತರಕಾರಿ ಕ್ರಮ

ಮಾನವ ಸಂಪನ್ಮೂಲ ಸಚಿವಾಲಯ, ಐಐಟಿ ಮದ್ರಾಸ್ ತೆಗೆದುಕೊಂಡಿರುವ ನಿರ್ಣಯವನ್ನು ಖಂಡಿಸಿರುವ ಜೆಡಿಯು ನಾಯಕ ಅಲಿ ಅನ್ವರ್, ಇದು ಕೇಂದ್ರದ ಅತ್ಯಂತ ಅಪಾಯಕಾರಿ ನಡೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಪ್ರಜಾತಂತ್ರಕ್ಕೇ ಗಂಡಾಂತರಕಾರಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್‌ಡಿಎ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

ಏನಿದು ಘಟನೆ, ಏಕೆ ನಿರ್ಬಂಧ ಹೇರಿಕೆ?

ಏನಿದು ಘಟನೆ, ಏಕೆ ನಿರ್ಬಂಧ ಹೇರಿಕೆ? ಸುದ್ದಿ ವಿಡಿಯೋ ನೋಡಿ

ಹಿರಿಯ ಪತ್ರಕರ್ತ ರಾಜದೀಪ್ ಪ್ರತಿಕ್ರಿಯೆ

ಹಿರಿಯ ಪತ್ರಕರ್ತ ರಾಜದೀಪ್ ಪ್ರತಿಕ್ರಿಯಿಸಿ, ಪ್ರಧಾನಿ ವಿರುದ್ಧ ವಿದ್ಯಾರ್ಥಿಗಳು ದನಿ ಎತ್ತಿಲ್ಲ. ಮೀಸಲಾತಿ ಸಿಕ್ಕಿಲ್ಲ ಎಂದು ಆಗ್ರಹಿಸಿದ್ದಾರೆ.

ಅಯ್ಯೋ ಸುಳ್ಳು ಸುದ್ದಿ ಹರಡುತ್ತಿದೆ

ಐಐಟಿ ಮದ್ರಾಸ್ ಕ್ಯಾಂಪಸ್ ಬಳಸಲು ಅನುಸರಿಸಬೇಕಾದ ಕನಿಷ್ಠ ನಿಯಮಗಳನ್ನು ಪಾಲಿಸದ ಕಾರಣ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಲಾಗಿದೆ. ಪ್ರಧಾನಿಗೂ ಇದಕ್ಕೂ ಸಂಬಂಧವೇ ಇಲ್ಲ. ಸುಳ್ಳು ಸುದ್ದಿ ಹರಡುತ್ತಿದೆ.

ವಿವಾದಕ್ಕೆ ಏನು ಕಾರಣ

ವಿವಾದಕ್ಕೆ ಏನು ಕಾರಣ, ವಿದ್ಯಾರ್ಥಿಗಳ ಮೇಲೆ ನಿರ್ಬಂಧ ಹೇರಲು ಕಾರಣವಾದ ಅಂಶ ಏನು? ಮಾನವ ಸಂಪನ್ಮೂಲ ಸಚಿವಾಲಯ ತ್ವರಿತವಾಗಿ ಅದೇಶ ಹೊರಡಿಸಿದ್ದೇಕೆ?

ಯಾವ ಸಂಘಟನೆಯಾದರೂ ಕ್ರಮ ಸರಿ

ಯಾವ ಸಂಘಟನೆಯಾದರೂ ಸರಿ, ಐಐಟಿ ಮದ್ರಾಸ್ ತೆಗೆದುಕೊಂಡ ಕ್ರಮ ಸಮರ್ಪಕವಾಗಿದೆ.

ಮಿಲಿಟರಿ ಪೊಲೀಸ್

ಐಐಟಿ ಮದ್ರಾಸ್ ವಿದ್ಯಾರ್ಥಿಗಳೇ, ಮಿಲಿಟರಿ ಪೊಲೀಸ್ ಬರುತ್ತಾರೆ ಕಾಯುತ್ತಿರಿ.

English summary
The Indian Institute of Technology (IIT) Madras has taken action against a students' study group after receiving an anonymous complaint that it was criticising the policies of the Narendra Modi government and spreading hatred against him, reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X