ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ಮದ್ರಾಸ್‌ನಿಂದ ವಿಕಲಚೇತನರಿಗಾಗಿ ಹೊಸ ಸಂಶೋಧನೆ

|
Google Oneindia Kannada News

ಚೆನ್ನೈ, ನವೆಂಬರ್ 10: ಐಐಟಿ ಮದ್ರಾಸ್‌ನಿಂದ ವಿಕಲಚೇತನರಿಗಾಗಿ ಹೊಸ ಸಂಶೋಧನೆ ಮಾಡಿದೆ.

ವಿಕಲಚೇತನರು ವ್ಹೀಲ್‌ಚೇರ್‌ನಲ್ಲಿ ಕುಳಿತಿರಲೇಬೇಕು, ಯಾವತ್ತೂ ಎದ್ದು ನಿಲ್ಲಲ್ಲು ಅವರಿಗೆ ಸಹಾಯವಾಗುತ್ತಿರಲಿಲ್ಲ, ಆದರೆ ಇನ್ನುಮುಂದೆ ವ್ಹೀಲ್‌ಚೇರ್‌ನಲ್ಲಿಯೇ ಅವರು ನಿಂತುಕೊಳ್ಳಬಹುದಾಗಿದೆ.

ಈ ಸಮಾರಂಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್‌ ಗೆಹ್ಲೊಟ್‌ ಹಾಜರಿದ್ದರು.ಐಐಟಿ ಮದ್ರಾಸ್‌ ಹಾಗೂ ಫೋನಿಕ್ಸ್‌ ಮೆಡಿಕಲ್‌ ಸಿಸ್ಟಮ್ಸ್‌ ಎಂಬ ಸಂಸ್ಥೆ ಪರಸ್ಪರ ಕೈ ಜೋಡಿಸಿ ಈ ಉತ್ಪನ್ನವನ್ನು ತಯಾರಿಸಲಾಗಿದೆ.

IIT Madras Launches Indias First Standing Wheelchair

ಐಐಟಿ ಮದ್ರಾಸ್‌ನ 'ಟಿಟಿಕೆ ಸೆಂಟರ್‌ ಫಾರ್‌ ರಿಹಬಿಲಿಟೇಶನ್‌ ರಿಸರ್ಚ್‌ ಆ್ಯಂಡ್‌ ಡಿವೈಸ್‌ ಡೆವಲಪ್‌ಮೆಂಟ್‌' (ಆರ್‌2ಡಿ2) ವಿಭಾಗದ ಮುಖ್ಯಸ್ಥೆ ಪ್ರೊಫೆಸರ್‌ ಸುಜಾತಾ ಶ್ರೀನಿವಾಸನ್‌ ಅವರು ಈ ಉತ್ಪನ್ನದ ಮೇಲ್ವಿಚಾರಣೆ ವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶೀಯವಾಗಿ ನಿರ್ಮಿಸಲಾದ ಹೊಸ ಮಾದರಿಯ ಗಾಲಿ ಕುರ್ಚಿಗೆ 'ಅರೈಸ್‌' ಎಂದು ಹೆಸರಿಡಲಾಗಿದ್ದು, ಇದು ಸಂಪೂರ್ಣವಾಗಿ ದೇಶೀಯವಾಗಿ ಉತ್ಪಾದಿಸಲ್ಪಟ್ಟ ಸಾಧನವಾಗಿದೆ ಎಂದು ಐಐಟಿ ಮದ್ರಾಸ್‌ ವತಿಯಿಂದ ನೀಡಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
IIT Madras in collaboration with Phoenix Medical Systems launches India’s first indigenously-designed ‘Standing Wheelchair’ that enables a differently-abled person requiring a wheelchair to shift from sitting to standing position, and vice versa, independently and in a controlled manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X