ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬರುತ್ತೇನೆ.. ಆಕ್ಷನ್ ಎಂಟ್ರಿ..: ನಿತ್ಯಾನಂದ ಘೋಷಣೆ

|
Google Oneindia Kannada News

ಚೆನ್ನೈ ಜೂನ್ 7: 'ನಾನು ಸಮಾಧಿಯಲ್ಲಿರುತ್ತೇನೆ ಅಲ್ಲಿಂದಲೇ ಫೇಸ್‌ಬುಕ್‌ನಲ್ಲಿ ರಿಪ್ಲೈ ಮಾಡುತ್ತೇನೆ' ಎಂದಿದ್ದ ನಿತ್ಯಾನಂದ ಮತ್ತೊಂದು ಸಂದೇಶವನ್ನು ಕಳುಹಿಸಿದ್ದು ಭಕ್ತರು ಸಂಭ್ರಮಿಸಿದ್ದಾರೆ. 'ನಾನು ಮತ್ತೆ ಬರುತ್ತೇನೆ' ಎಂದು ನಿತ್ಯಾನಂದ ಘೋಷಣೆ ಮಾಡಿದ್ದು ಶಿಷ್ಯರು ರೋಮಾಂಚನಗೊಂಡಿದ್ದಾರೆ. ಈ ಪೋಸ್ಟ್‌ನಿಂದಾಗಿ ತಮ್ಮದೇ ಕೈಲಾಸ ದೇಶ ಸೃಷ್ಟಿಸಿ, ಅಲ್ಲಿ ತಮ್ಮದೇ ರಿಸರ್ವ್ ಬ್ಯಾಂಕ್, ಕರೆನ್ಸಿ ಹೊಂದಿರೋ ಬಿಡದಿ ಧ್ಯಾನಪೀಠದ ವಿವಾದಿತ ಸ್ವಾಮೀಜಿ ಮತ್ತೆ ಸುದ್ದಿಯಾಗಿದ್ದಾರೆ.

ನಿತ್ಯಾನಂದ ಬೆಂಗಳೂರು ಸಮೀಪದ ಬಿಡದಿಯಲ್ಲಿ ಆಶ್ರಮ ಸ್ಥಾಪಿಸಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆಶ್ರಮದಲ್ಲಿ ಮಹಿಳಾ ಶಿಷ್ಯೆಯರನ್ನು ಬಲವಂತವಾಗಿ ಬಂಧಿಸಿ ಅತ್ಯಾಚಾರ ಎಸಗಿರುವುದು ಸೇರಿದಂತೆ ಹಲವಾರು ಆರೋಪಗಳು, ದೂರುಗಳು ಅವರ ಮೇಲಿದ್ದವು. ಪೊಲೀಸರಿಗೆ ಬೇಕಾಗಿದ್ದ ನಿತ್ಯಾನಂದ ಕೈಲಾಸ ವೆಬ್ ಸೈಟ್‌ನಲ್ಲಿ ಕಾಣಿಸಿಕೊಂಡು ಪ್ರತ್ಯೇಕ ದ್ವೀಪ ದೇಶ ಖರೀದಿಸಿ ನೆಲೆಸಿರುವುದಾಗಿ ಪ್ರಕಟಿಸಿದ್ದಾನೆ.

'My daughter join a cult'- ನಿತ್ಯಾನಂದನ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ'My daughter join a cult'- ನಿತ್ಯಾನಂದನ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ

ವದಂತಿಗಳಿಗೆ ತೆರೆ ಎಳೆದ ನಿತ್ಯಾನಂದ

ವದಂತಿಗಳಿಗೆ ತೆರೆ ಎಳೆದ ನಿತ್ಯಾನಂದ

ಇತ್ತೀಚೆಗಷ್ಟೇ ನಿತ್ಯಾನಂದ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದು, ಊಟಕ್ಕೂ ಪರದಾಡುವಂತಾಗಿದೆ ಎಂದು ವರದಿಯಾಗಿತ್ತು. ಅಲ್ಲದೇ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿತ್ಯಾನಂದ ಅವರು ಆರೋಪವನ್ನು ನಿರಾಕರಿಸಿದ್ದು, ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡುತ್ತಿವೆ ಎಂದು ಹೇಳಿದ್ದಾರೆ.

'ನಾನು ಸಮಾಧಿಯಲ್ಲಿರುತ್ತೇನೆ ಅಲ್ಲಿಂದಲೇ ಫೇಸ್‌ಬುಕ್‌ ಮೂಲಕ ರಿಪ್ಲೈ ಮಾಡುತ್ತೇನೆ ಎಂದು ಹೇಳಿದ್ದರು. ನಾನು ಸತ್ತು ಹೋಗಿದ್ದೇನೆ ಎಂದು ಕೆಲವರು ಹೇಳುತ್ತಾರೆ. ನಾನು ಸತ್ತೂ ಹೋಗಿಲ್ಲ. ಎಲ್ಲಿಯೂ ಓಡಿ ಹೋಗಿಲ್ಲ. ಸಮಾಧಿಯಲ್ಲಿದ್ದೇನೆ. ಅಲ್ಲಿಂದಲೇ ರಿಪ್ಲೈ ಮಾಡುತ್ತೇನೆ. ಎಂದು ವದಂತಿಗಳಿಗೆ ಪ್ರತಿಕ್ರಿಯಿಸಿದ್ದರು. ಅನುಮಾನವಿದ್ದರೆ ತಿರುವಣ್ಣಾಮಲೈ ಅರುಣಗಿರಿಯ ಯೋಗೇಶ್ವರ ಸಮಾಧಿಗೆ ಹೋಗಿ, ದೀಪ ಬೆಳಗಿಸಲಿ. ಆಗ ನೀವು ನನ್ನನ್ನು ಸ್ಪಷ್ಟವಾಗಿ ನೋಡುತ್ತೀರಿ. ನಾನು ಇನ್ನೂ ವೈದ್ಯಕೀಯ ಆರೈಕೆಯಿಂದ ಹೊರಗಿಲ್ಲ. 27 ವೈದ್ಯರು ಇಲ್ಲಿ ಭಕ್ತರು ಸಂಶೋಧಕರಂತೆ ಇದ್ದಾರೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಹಿಂದೂ ಸಮುದಾಯ ನಿಂತಿರುವುದು ಬ್ರಾಹ್ಮಣರ 'ಡಿಎನ್ಎ'ದಿಂದ: ನಿತ್ಯಾನಂದ ಸ್ವಾಮಿಹಿಂದೂ ಸಮುದಾಯ ನಿಂತಿರುವುದು ಬ್ರಾಹ್ಮಣರ 'ಡಿಎನ್ಎ'ದಿಂದ: ನಿತ್ಯಾನಂದ ಸ್ವಾಮಿ

ಆತಂಕದಲ್ಲಿದ್ದ ನಿತ್ಯಾನಂದನ ಭಕ್ತರು

ಆತಂಕದಲ್ಲಿದ್ದ ನಿತ್ಯಾನಂದನ ಭಕ್ತರು

ಫೇಸ್‌ಬುಕ್ ಪೋಸ್ಟ್‌ನಲ್ಲಿ ನಿತ್ಯಾನಂದನನ್ನು ನೋಡಿದ ಶಿಷ್ಯರು ಜೂಮ್ ಮೀಟಿಂಗ್ ಮೂಲಕ ನಿತ್ಯಾನಂದನಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು. ಅಲ್ಲಿ ನಿತ್ಯಾನಂದ ಶೀಘ್ರದಲ್ಲೇ ಚೇತರಿಸಿಕೊಂಡಿದ್ದಾರೆ ಎನ್ನುವ ಸುದ್ದಿಯಿತ್ತು. ಕಳೆದ ಕೆಲವು ದಿನಗಳಿಂದ ನಿತ್ಯಾನಂದನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅವರ ಶಿಷ್ಯರಿಗೆ ಯಾವ ಸಂದೇಶವನ್ನೂ ನೀಡದೇ ನಿತ್ಯಾನಂದ ಗಾಢ ಮೌನ ವಹಿಸಿದ್ದರು. ಕೈಲಾಸದಲ್ಲಿ ಏನಾಗುತ್ತಿದೆ. ನಿತ್ಯಾನಂದನ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಆತನ ಭಕ್ತರು ಕಾಯುತ್ತಿದ್ದರು.

ಶಿಷ್ಯರಿಗೆ ಸಂದೇಶ ಕಳುಹಿಸಿದ ನಿತ್ಯಾನಂದ

ಶಿಷ್ಯರಿಗೆ ಸಂದೇಶ ಕಳುಹಿಸಿದ ನಿತ್ಯಾನಂದ

ಕಾಯುತ್ತ ಕುಳಿತಿದ್ದ ಶಿಷ್ಯರಿಗೆ ಮೋಸ ಮಾಡದೆ ನಿತ್ಯಾನಂದ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನನ್ನ ಪ್ರೀತಿಯ ಭಕ್ತರೇ ಮತ್ತು ಶಿಷ್ಯರೇ, ಇನ್ನು ಕೆಲವೇ ದಿನಗಳಲ್ಲಿ ನಾನು ಹಿಂತಿರುಗುತ್ತೇನೆ ಎಂದು ನಿತ್ಯಾನಂದ ಹೇಳಿದ್ದಾರೆ. ಸಮಾಧಿ ದೈಹಿಕ / ಮಾನಸಿಕ ಅಸ್ವಸ್ಥತೆ ಅಥವಾ ರೋಗವಲ್ಲ ಎಂದು ನಿತ್ಯಾನಂದ ಹೇಳಿದ್ದಾರೆ.

'ಸಮಾಧಿಯಲ್ಲಿ ಭಕ್ತರೊಂದಿಗೆ ಸಂಪರ್ಕ'

'ಸಮಾಧಿಯಲ್ಲಿ ಭಕ್ತರೊಂದಿಗೆ ಸಂಪರ್ಕ'

ಕೆಲವು ಗಂಟೆಗಳ ಹಿಂದಿನ ಪೋಸ್ಟ್‌ನಲ್ಲಿ ನಿತ್ಯಾನಂದ ನನ್ನ ಪ್ರೀತಿಯ ಭಕ್ತರೆ, ಇಲ್ಲಿಯವರೆಗೆ ಸಮಾಧಿಯಲ್ಲಿ ಮುಳುಗಿರುವ ನಾನು ಭಕ್ತರೊಂದಿಗೆ ಸಂಪರ್ಕ ಹೊಂದಿದ್ದೇನೆ. ನಾನು ಅದನ್ನು ಸಂತೋಷದಿಂದ ಆನಂದಿಸುತ್ತೇನೆ. ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಮತ್ತು ನನ್ನ ಸಾಮಾನ್ಯ ಆರೋಗ್ಯದೊಂದಿಗೆ ನನ್ನ ಧ್ಯಾನವನ್ನು ಆರಂಭಿಸುತ್ತೇನೆ. ನನ್ನ ದರ್ಶನಗಳು ಇನ್ನು ಮುಂದೆ ಅಡೆತಡೆಯಿಲ್ಲದೆ ಲಭ್ಯವಿರುತ್ತದೆ. ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಾಗಿ ನಿತ್ಯಾನಂದ ಘೋಷಿಸಿದ್ದಾರೆ.

ಮತ್ತೆ ಸತ್ಸಂಗ ಮಾಡಲಿದ್ದೇನೆ ಎಂದು ನಿತ್ಯಾನಂದ ಘೋಷಿಸಿದ ಕೂಡಲೇ ಅವರ ಶಿಷ್ಯರು ಉತ್ಸುಕರಾದರು. 'ಇಂದು ಬಂದಿಲ್ಲ ನನ್ನ ಲೀಡರ್..ನೋಡು.. ದಿನನಿತ್ಯ ವಿಡಿಯೋ ಬರುತ್ತೆ.. ವಾವ್ ಲೀಡರ್.. ಬಾ ನಾಯಕ' ಎಂದು ರೋಚಕ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.

English summary
Disciples are thrilled by Nithyananda's declaration that he will return.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X