ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೋಲಿಸೋದಕ್ಕೆ ರಾಹುಲ್ ಗಾಂಧಿ ಭಗವದ್ಗೀತೆ ಓದ್ತಿದ್ದಾರಂತೆ!

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಜೂನ್ 5: ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಹೋರಾಡುವುದಕ್ಕಾಗಿ ನಾನು ಭಗವದ್ಗೀತೆ ಮತ್ತು ಉಪನಿಷತ್ತನ್ನು ಓದುತ್ತಿದ್ದೇನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಚೆನ್ನೈನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಆರ್ ಎಸ್ ಎಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ನಾನು ಇತ್ತೀಚೆಗೆ ಭಗವದ್ಗೀತೆ ಮತ್ತು ಉಪನಿಷತ್ತನ್ನು ಓದುತ್ತಿದ್ದೇವೆ. ಅವುಗಳಲ್ಲಿ, ಜನರೆಲ್ಲರೂ ಒಂದೇ ಎಂದು ಹೇಳಲಾಗಿದೆ. ಆದರೆ ತಮ್ಮದೇ ಧರ್ಮ ಹೇಳಿದ ನೀತಿಯನ್ನು ಬಿಜೆಪಿ, ಆರ್ ಎಸ್ ಎಸ್ ನವರು ಅನುಸರಿಸುತ್ತಿಲ್ಲ.[ತೆಲಂಗಾಣದಲ್ಲಿ ಪುನರಾವರ್ತನೆಯಾಗುತ್ತಾ ಇಂದಿರಾ ಮ್ಯಾಜಿಕ್?]

I study the Upanishads and Gita to fight against BJP and RSS: Rahul Gandhi

ಅವರು ಎಂದಿಗೂ ಭಾರತವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಲ್ಲ. ಬದಲಾಗಿ ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿಯನ್ನಷ್ಟೇ ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.[ಜಿಡಿಪಿ ಕುಸಿತ, ವಿಪಕ್ಷಗಳಿಂದ ಕೇಂದ್ರ ಸರಕಾರಕ್ಕೆ ತರಾಟೆ]

ಇದೇ ಸಂದರ್ಭದಲ್ಲಿ ತಮಿಳುನಾಡಿನ ಸಂಸ್ಕೃತಿಯನ್ನು ಕೊಂಡಾಡಿದ ರಾಹುಲ್ ಗಾಂಧಿ, ನನಗೆ ತಮಿಳರೆಂದರೆ ತುಂಬಾ ಇಷ್ಟ, ತಮಿಳು ಸಂಸ್ಕೃತಿ, ಜನಜೀವನವನ್ನು ಅರ್ಥಮಾಡಿಕೊಳ್ಳುವವುದಕ್ಕಾಗಿಯೇ ಇತ್ತೀಚೆಗೆ ತಮಿಳು ಸಿನಿಮೆಮಾಗಳನ್ನು ವೀಕ್ಷಿಸುತ್ತಿದ್ದೇನೆ ಎಂದರು.

ತಮಿಳು ಜನರೆಂದರೆ ನನಗೆ ಬಹಳ ಪ್ರೀತಿ, ತಮಿಳುನಾಡಿಗೆ ಹೋಗುವುದೆಂದರೂ ನನಗೆ ಎಲ್ಲಿಲ್ಲದ ಇಷ್ಟ ಎಂದು ನನ್ನ ಸಹೋದರಿ ಪ್ರಿಯಾಂಕ ಬಳಿ ಹೇಳಿಕೊಂಡಿದ್ದೇನೆ. ನನಗೂ ತಮಿಳರೆಂದರೆ ಇಷ್ಟ ಎಂದು ಆಕೆಯೂ ಹೇಳಿದ್ದಾರೆ ಎಂದು ಈ ಸಮಯದಲ್ಲಿ ರಾಹುಲ್ ಗಾಂಧಿ ಹೇಳಿದರು.

English summary
Rahul Gandhi is keeping himself busy reading the Bhagwad Gita, Upanishads and also watching Tamil movies. Nowadays I study the Upanishads and Gita because I am fighting the BJP and RSS, Rahul Gandhi said. Rahul Gandhi I ask the RSS, my friend, you are doing this and oppressing people. But it is written in the Upanishad that all people are the same. How come you are contradicting what your own religion says, he asks. He alleged that BJP does not fundamentally "understand India," and "understand only Nagpur" -- the headquarter of the RSS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X