ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮೇಶ್ವರಂನಲ್ಲಿ ಎಲ್.ಟಿ.ಟಿ.ಇಗೆ ಸೇರಿದ್ದೆನ್ನಲಾದ ಮದ್ದು ಗುಂಡುಗಳು ಪತ್ತೆ

By Sachhidananda Acharya
|
Google Oneindia Kannada News

ರಾಮನಾಥಪುರಂ, ಜುಲೈ 26: ತಮಿಳುನಾಡಿನ ರಾಮನಾಥಪುರಂನಲ್ಲಿ ಭಾರೀ ಪ್ರಮಾಣದಲ್ಲಿ ಹಳೆಯ ಗುಂಡುಗಳು, ಸ್ಪೋಟಕಗಳು ಪತ್ತೆಯಾಗಿವೆ. ಇವು ಲಿಬರೇಷನ್ ಆಫ್ ತಮಿಳು ಟೈಗರ್ಸ್ ಈಳಂ (ಎಲ್.ಟಿ.ಟಿ.ಇ) ಗೆ ಸೇರಿದ್ದಿರಬಹುದು ಎಂದು ಶಂಕಿಸಲಾಗಿದೆ.

ರಾಮನಾಥಪುರಂ ಜಿಲ್ಲೆಯಲ್ಲಿ ರಾಮೇಶ್ವರಂ ದ್ವೀಪವಿದೆ. ಇಲ್ಲಿನ ತಂಗಚಿಮಡಮ್ ಸಮೀಪದ ಸಣ್ಣ ಜನವಸತಿ ಪ್ರದೇಶ ಅಂಥೋನಿಯಾರ್ಪುರಂನಲ್ಲಿ ಈ ಭಾರೀ ಮದ್ದು ಗುಂಡುಗಳು ಪೊಲೀಸರಿಗೆ ಸಿಕ್ಕಿವೆ. ಕಬ್ಬಿಣದ ಪೆಟ್ಟಿಗೆಗಳಲ್ಲಿ ಇದನ್ನು ಪೇರಿಸಿಡಲಾಗಿತ್ತು.

ಇದು 1980ರ ಸುಮಾರಿನದ್ದು ಎಂದು ಪೊಲೀಸರು ಅಂದಾಜಿಸಿದ್ದು, ಎಲ್.ಟಿ.ಟಿ.ಇಗೆ ಸೇರಿದ್ದಿರಬಹುದು ಎಂದುಕೊಳ್ಳಲಾಗಿದೆ.

Huge number of bullets and explosives unearthed in Rameswaram

ಮಾಧ್ಯಮಗಳ ವರದಿಗಳ ಪ್ರಕಾರ ಶೌಚಾಲಯದ ಹೊಂಡಕ್ಕಾಗಿ ಇಲ್ಲಿನ ನಿವಾಸಿಯೊಬ್ಬರಿಗೆ ಬಾಕ್ಸ್ ಗ ಳಲ್ಲಿ ತುಂಬಿಸಿಟ್ಟ ಬುಲೆಟ್ ಗಳು ಸಿಕ್ಕಿವೆ. ಇದನ್ನು ಕಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Huge number of bullets and explosives unearthed in Rameswaram

ಈ ಮಾಹಿತಿ ಬೆನ್ನಿಗೆ ಅದೇ ಸ್ಥಳದಲ್ಲಿ ಪೊಲೀಸರು ಮತ್ತಷ್ಟು ಮಣ್ಣು ಅಗೆದು ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆ ಸ್ಥಳದಲ್ಲಿ ಡಿಟೊನೇಟರ್ ಗಳು, ಡಿಟೊನೇಟರ್ ಲಾಂಚರ್ ಮತ್ತು 50 ಬಾಕ್ಸಿಗೂ ಮಿಕ್ಕಿ ಬುಲೆಟ್ ಗಳು ಸಿಕ್ಕಿವೆ. ಈ ವಸ್ತುಗಳು ಸಿಕ್ಕಿರುವ ಜಾಗ ಸಮುದ್ರ ದಂಡೆಯಿಂದ ಕೇವಲ 50 ಮೀಟರ್ ದೂರದಲ್ಲಿದೆ.

English summary
A huge cache of ammunition, trinitrotoluene detonators and detonator launchers was recovered at Rameswaram on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X